ಸ್ಯಾಮ್ ಸಂಗ್ ಹಳೆಯ-ಹೊಸ ಮೊಬೈಲ್ ಸ್ಪರ್ಧೆ!

By Super
|
ಸ್ಯಾಮ್ ಸಂಗ್ ಹಳೆಯ-ಹೊಸ ಮೊಬೈಲ್  ಸ್ಪರ್ಧೆ!
ಬೆಂಗಳೂರು. ಜು 4: ಸ್ಯಾಮ್ ಸಂಗ್ ಭಾರತವಷ್ಟೇ ಅಲ್ಲದೇ ಜಗತ್ತಿನಾದ್ಯಂತ ಸಾಕಷ್ಟು ಬೇಡಿಕೆಯಲ್ಲಿರುವ ಮೊಬೈಲ್ ಕಂಪೆನಿ. ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕೆಯಲ್ಲಿ ಹಾಗೂ ಬಣ್ಣ ಬಣ್ಣದ ಮೊಬೈಲ್ ಗಳನ್ನು ಮಾರುಕಟ್ಟೆಗೆ ತರುವುದರಲ್ಲಿ ಸ್ಯಾಮ್ ಸಂಗ್ ಎತ್ತಿದ ಕೈ. ನೂರಕ್ಕೂ ಅಧಿಕ ಸಂಖ್ಯೆಯಲ್ಲಿರುವ ವಿವಿಧ ನಮೂನೆಯ ಮೊಬೈಲ್ ಗಳಲ್ಲದೇ ಇನ್ನೂ ಸಾಕಷ್ಟು ಮಾದರಿಗಳು ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ನಾವೀಗ, ಕಳೆದ ವರ್ಷ ಬಿಡುಗಡೆಯಾದ ಗ್ರಾವಿಟಿ ಟಿ ಹಾಗೂ ಸದ್ಯದಲ್ಲಿಯೇ ಬಿಡುಗಡೆಯಾಗಬೇಕಾಗಿರುವ ಗ್ರಾವಿಟಿ ಸ್ಮಾರ್ಟ್ ಟಚ್ 2 ನಡುವೆ ಹೋಲಿಕೆ ಮಾಡಬೇಕಿದೆ. ಎರಡರಲ್ಲೂ, ಸಾಕಷ್ಟು ವಿಸ್ತಾರವಾದ ಮಲ್ಟಿಮೀಡಿಯಾ ಅಪ್ಲಿಕೇಶನ್ ಹೊಂದಿರುವ ಸ್ಮಾರ್ಟ್ ಫೋನ್ ಸಾಮ್ಯತೆಯೊಂದಿಗೆ ಡಾಕ್ಯುಮೆಂಟ್ ವ್ಯೂವರ್, ಶೆಡ್ಯೂಲರ್, ಆರ್ಗನೈಸರ್, ಹಾಗೂ ಇನ್ನೂ ಹೆಚ್ಚಿನ ಇತರ ಸಾಮ್ಯತೆ ಹಾಗೂ ಭಿನ್ನತೆಗಳು ಗೋಚರಿಸುತ್ತವೆ.

ಮೊಬೈಲ್ ನ ರೂಪಕ್ಕೆ ಸಂಬಂಧಿಸಿದಂತೆ ಎರಡೂ ಕೂಡ ಟಚ್ ಸ್ಕ್ರೀನ್ ಹಾಗೂ ಕ್ವೆರ್ಟಿ ಕೀ ಪ್ಯಾಡ್ ಹೊಂದಿವೆಯಾದರೂ ಗ್ರಾವಿಟಿ ಟಿ ಹೆಚ್ಚು ಆಕರ್ಷಿಸುತ್ತದೆ. ಗ್ರಾವಿಟಿ ಟಿ 3 ಇಂಚ್ ಡಿಸ್ ಪ್ಲೇ ಸ್ಕ್ರೀನ್ ಹೊಂದಿದ್ದರೆ ಗ್ರಾವಿಟಿ ಸ್ಮಾರ್ಟ್ ಟಚ್ 2, 2.8 ಇಂಚ್ ಹೊಂದಿದೆ. ಮನೋರಂಜನೆ ನೀಡುವ ಅಂಶಗಳ ಪೈಪೋಟಿಯಲ್ಲಿ ಮಾತ್ರ ಎರಡೂ ಮೊಬೈಲ್ ಗಳು ಅತ್ಯಾಧುನಿಕವಾಗಿಯೇ ಇವೆ.

ಮ್ಯೂಸಿಕ್ ಪ್ಲೇಯರ್, ವಿಡಿಯೋ ಪ್ಲೇಯರ್ ಗಳು MP3, MP4, WMV ಗಳನ್ನು ಎರಡರಲ್ಲೂ ಹೊಂದಿದ್ದು, ಗ್ರಾವಿಟಿ ಟಿ ಸ್ಪಷ್ಟ ಚಿತ್ರಣ ಹಾಗೂ ಸಂಗೀತ ನೀಡುವುದರಲ್ಲಿ ಮುಂದಿದೆ. ಎರಡೂ 3.5 mm ಹೆಡ್ ಫೋನ್, ಬ್ಯೂ ಟೂಥ್, ಜಿಪಿಆರ್ ಎಸ್, EDGE ಮತ್ತು ಯುಎಸ್ ಬಿ ಪಿಸಿ ಸಿಂಕ್ ಗಳನ್ನು ಎರಡೂ ಮಾದರಿಗಳು ಹೊಂದಿದ್ದು, ಗ್ರಾವಿಟಿ ಸ್ಮಾರ್ಟ್ ಟಚ್ 2 Wi-Fi ಅತಿ ವೇಗದ ಇಂಟರ್ ನೆಟ್ ಸೌಲಭ್ಯ 3G ಟು 4Mbps ಹೊಂದಿದೆ.

2ರಲ್ಲೂ ಆಂತರಿಕ ಮೆಮೊರಿ ಸೌಲಭ್ಯವಿದ್ದು 32 GB ವಿಸ್ತರಿಸಬಹುದಾದ ಅವಕಾಶವಿರುವ ಗ್ರಾವಿಟಿ ಸ್ಮಾರ್ಟ್ ಟಚ್ 2, 8 GB ಹೊಂದಿರುವ ಗ್ರಾವಿಟಿ ಟಿ ಗಿಂತ ನಿಸ್ಸಂದೇಹವಾಗಿ ಮುಂದೆ ನಿಲ್ಲುತ್ತದೆ. ಗ್ರಾವಿಟಿ ಸ್ಮಾರ್ಟ್ ಟಚ್ 2, ಅಂಡ್ ರಾಯಿಡ್ 2.2 ಫ್ರೋಯೋ OS ನಿಂದ ಕಾರ್ಯ ನಿರ್ವಹಿಸಿದರೆ ಗ್ರಾವಿಟಿ ಟಿ ಜಾವಾ ಆಧಾರಿತ ತಂತ್ರಜ್ಞಾನ ಅಳವಡಿಸಲ್ಪಟ್ಟಿದೆ. ಇವೆರಡರ ಸ್ಪರ್ಧೆಯಲ್ಲಿ ಗ್ರಾವಿಟಿ ಸ್ಮಾರ್ಟ್ ಟಚ್ 2 ವಿಜಯಶಾಲಿಯಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X