ನೋಕಿಯಾ ತರಲಿದೆ ಹೊಸ 'ಮೊಬೈಲ್ ಬ್ಯಾಂಕಿಂಗ್ ಸೇವೆ'

By Super
|
ನೋಕಿಯಾ ತರಲಿದೆ ಹೊಸ 'ಮೊಬೈಲ್ ಬ್ಯಾಂಕಿಂಗ್ ಸೇವೆ'

ನೋಕಿಯಾದಿಂದ ಗ್ರಾಹಕರಿಗಾಗಿ 'ಮೊಬೈಲ್ ಬ್ಯಾಂಕಿಂಗ್ ಸೇವೆ'

ಬೆಂಗಳೂರು. ಜು 5: 'ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್' ಗಳು ಬಂದ ಮೇಲೆ ಕರೆನ್ಸಿ ಹಾಗೂ ನೋಟ್ ಗಳ ಕಾಲ ಮಗಿಯಿತು. ಈ ಕಾರ್ಡ್ ಗಳ ಮೂಲಕ ಸುಲಭವಾಗಿ ಮತ್ತು ಸುರಕ್ಷಿತವಾಗಿ ಹಣದ ಮೂಲಕ ಮಾಡುವ ವ್ಯವಹಾರ ಸಾಧ್ಯವಿರುವಾಗ ಸುಮ್ಮನೆ ನೋಟುಗಳನ್ನು ಹಿಡಿದು ಓಡಾಡಲು ಯಾರು ಇಷ್ಟಪಡುತ್ತಾರೆ ಹೇಳಿ!

ಆದರೆ ಇನ್ನು ಮುಂದೆ ಈ ಕಾರ್ಡ್ ಗಳಿಗೂ ಇದೇ ಗತಿ ಬರಲಿದೆ. ಕಾರಣ ನೋಕಿಯಾ ತರುತ್ತಿದೆ ಹೊಸ ಮೊಬೈಲ್
ಬ್ಯಾಂಕಿಂಗ್ ಸೇವೆ. ಇನ್ನು ಮುಂದೆ ನೀವು ನಿಮ್ಮ ಹಣಕಾಸು ವ್ಯವಹಾರಗಳನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು.
ಸದ್ಯದಲ್ಲಿಯೇ ನೋಕಿಯಾ ತನ್ನ ಈ ಹೊಸ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಜಗತ್ತಿನಾದ್ಯಂತ ತರಲಿದ್ದು ಇದರಿಂದ ಭಾರತದ ವೈಯಕ್ತಿಕ ಹಣದ ವಹಿವಾಟಿನಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ.

ಜಗತ್ತಿನ ಯಾವ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳು ವಿಸ್ತರಿಸಿಲ್ಲವೋ ಅಲ್ಲಿ ಕೂಡ ಈ ಸೇವೆಯನ್ನು ತರಲು ನೋಕಿಯಾ ಉದ್ದೇಶಿಸಿದೆ. ಹಳೆಯ-ಹೊಸ ಎಲ್ಲಾ ಮಾದರಿಗಳ ಮೊಬೈಲ್ ಗಳಲ್ಲಿ ಅಪ್ಲಿಕೇಶನ್ ಮೂಲಕ ಈ ಸೇವೆಯನ್ನು ಜಾರಿಗೆ ತರಲು ಸಾಧ್ಯವಿರುವುದು ಗಮನಾರ್ಹ ಅಂಶ. ತನ್ನ ಈ ಸೇವೆಗೆ ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ನೋಕಿಯಾ ಈಗಾಗಲೇ ಅಧ್ಯಯನ ಮಾಡಿ ಯಶಸ್ವಿಯಾಗುವ ವಿಶ್ವಾಸ ಹೊಂದಿದೆ.

ಜಗತ್ತಿನ ಯಾವುದೇ ಹಳ್ಳಿಯಲ್ಲಿ ವಾಸಿಸುತ್ತಿರುವ ಜನರಿಗೂ ಸಹ ಇದರ ಪ್ರಯೋಜನ ತಲುಪಲಿದೆ. ವೈಯಕ್ತಿಕ ಬ್ಯಾಂಕಿಂಗ್ ಉದ್ಯಮಗಳಾದ ಯೆಸ್ ಬ್ಯಾಂಕ್, ಒಬೊಪೇ & ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವುಗಳೊಂದಿಗೆ ಕೈಜೋಡಿಸಿರುವ ಈ ನೋಕಿಯಾ ಮೊಬೈಲ್ ಬ್ಯಾಂಕಿಂಗ್ ಸೇವೆ ಶೀಘ್ರ ತನ್ನ ಕಾರ್ಯವನ್ನು ಪ್ರಾರಂಭಿಸಲಿದೆ.

ಇದರಿಂದ ಪಡೆಯಬಹುದಾದ ಪ್ರಯೋಜನಗಳು:
* ಬಿಲ್ ಪಾವತಿ
* ಖಾತೆಗಳ ನಡುವಿನ ಹಣದ ವಿನಿಮಯ
* ನೋಕಿಯಾ ಔಟ್ ಲೆಟ್ ಹಾಗೂ ಎಟಿಎಂ ಗಳಿಂದ ಹಣ ತೆಗೆದುಕೊಳ್ಳುವ ಸೌಲಭ್ಯ
* ಬೇಕೆಂದಾಗ ಖಾತೆ ವಿವರಗಳ ಮಾಹಿತಿ
* ಅಂಕಿ-ಅಂಶಗಳ ಬ್ಯಾಕಪ್

ತನ್ನ ಈ ಯೋಜನೆ ಭಾರತದ ಹಿಂದುಳಿದ ಹಳ್ಳಿಗಳಲ್ಲಿ ಯಶಸ್ವಿಯಾಗಲು ಭಾರತ ಸರ್ಕಾರದ ಪೂರ್ಣ ಸಹಕಾರದ ಅಗತ್ಯತೆಯನ್ನು ಮನಗಂಡಿರುವ ನೋಕಿಯಾ, ಇದರ ಸುರಕ್ಷತೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದೆ. ಇದು ಇತರೆ ಆಧುನಿಕ ಬ್ಯಾಂಕಿಂಗ್ ನಂತೆ ಕಾರ್ಯನಿರ್ವಹಿಸಲು ಉತ್ಸುಕವಾಗಿದೆ. ಇದು ಎಲ್ಲಾ ವರ್ಗದ ಜನರಿಗೆ ಸಂಪೂರ್ಣ ಲಾಭದಾಯಕವೆಂದು ನೋಕಿಯಾ ಭರವಸೆ ನೀಡುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X