ಬರ್ರೀ...ಸ್ಮಾರ್ಟ್ ಫೋನ್ ಬರುತ್ತಿದೆ- ಹೊಸ 'ಬ್ಲಾಕ್ ಬೆರ್ರಿ'

Posted By: Staff

ಬರ್ರೀ...ಸ್ಮಾರ್ಟ್ ಫೋನ್ ಬರುತ್ತಿದೆ- ಹೊಸ 'ಬ್ಲಾಕ್ ಬೆರ್ರಿ'
ಬೆಂಗಳೂರು. ಜು 6: ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಬಹಳ ಹಿಂದೆಯೇ ಅಧಿಪತ್ಯ ಸ್ಥಾಪಿಸಿರುವ ಮೊಬೈಲ್ ಕಂಪೆನಿ 'ಬ್ಲಾಕ್ ಬೆರ್ರಿ'. ಸ್ಮಾರ್ಟ್ ಫೋನ್ ಎಂಬ ಕಾನ್ಸೆಪ್ಟ್ ಅನ್ನು ಮೊದಲು ಬಳಕೆಗೆ ತಂದದ್ದೇ ಈ ಬ್ಲಾಕ್ ಬೆರ್ರಿ ಅಥವಾ ರಿಸರ್ಚ್ ಆಫ್ ಮೋಶನ್ (RIM). ಡಾಕ್ಯುಮೆಂಟ್ ವ್ಯೂವರ್, ಪವರ್ ಫುಲ್ ಆರ್ಗನೈಸರ್, ಮತ್ತು ಶೆಡ್ಯುಲರ್ಸ್ ಮುಂತಾದ ಬಹುಪಯೋಗಿ ಟೂಲ್ಸ್ ಹಾಗೂ ಮಲ್ಟಿ ಟಾಸ್ಕ್ ಗಳನ್ನು ನಿಭಾಯಿಸುವಂತ ಫೋನ್ ಗಳನ್ನು ಮೊದಲು ಉತ್ಪಾದಿಸಿ ಮಾರುಕಟ್ಟೆಗೆ ಇದು ಬಿಡುಗಡೆ ಮಾಡಿದೆ. ಈ 'ಬ್ಲಾಕ್ ಬೆರ್ರಿ' ಕಂಪೆನಿ ತನ್ನ ಇನ್ ಸ್ಟಂಟ್ ಇ-ಮೇಲ್ ಸರ್ವೀಸ್ ನಿಂದ ಪ್ರಖ್ಯಾತವಾಗಿದೆ.

ಸ್ಮಾರ್ಟ್ ಫೋನ್ ಎಂದರೆ 'ಬ್ಲಾಕ್ ಬೆರ್ರಿ' ಎಂಬ ಕಾಲ ನಿಧಾನವಾಗಿ ಮರೆಯಾಗುತ್ತಿದೆ. ಇದನ್ನು ಮನಗಂಡಿರುವ ಕಂಪೆನಿ ಈಗ ಸಾಕಷ್ಟು ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.ಸದ್ಯದಲ್ಲಿಯೇ ಬರಲಿರುವ ಎರಡು ಹೊಸ ಮೊಬೈಲ್ ಗಳು ಬ್ಲಾಕ್ ಬೆರ್ರಿ 9930 ಬೋಲ್ಡ್ ಟಚ್ ಮತ್ತು ಬ್ಲಾಕ್ ಬೆರ್ರಿ 9810 ಟಾರ್ಚ್ 2. ಎರಡೂ ಕೂಡ 'ಬ್ಲಾಕ್ ಬೆರ್ರಿ' ಯ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಮೊಬೈಲ್ ಗಳೇ. ಆಕರ್ಷಕ ವಿನ್ಯಾಸಗಳಿಂದ ಕೂಡಿರುವ ಎರಡೂ ಡ್ಯುಯಲ್ ಇಂಟರ್ ಫೇಸ್ ಟಚ್ & ಟೈಪ್ ರೀತಿಯದು. QWERTY ಕೀ ಪ್ಯಾಡ್ ಹೊಂದಿರುವ ಟಚ್ ಸ್ಕ್ರೀನ್ ಡಿಸ್ ಪ್ಲೇ ಎರಡರಲ್ಲೂ ಇದೆ.

ಬ್ಲಾಕ್ ಬೆರ್ರಿ 9930 ಬೋಲ್ಡ್ ಟಚ್ ನಲ್ಲಿ ದೊಡ್ಡ 3.2 ಇಂಚ್ ಅಗಲದ ಸ್ಕ್ರೀನ್ ಹಾಗೂ ಬಾರ್ ಡಿಸೈನ್ ಕೀ ಪ್ಯಾಡ್ ಇದೆ. ಆದರೆ ಬ್ಲಾಕ್ ಬೆರ್ರಿ 9810 ಟಾರ್ಚ್ 2 ನಲ್ಲಿ ಇದಕ್ಕಿಂತ ಕಡಿಮೆ 2.8 ಇಂಚ್ ನ ಸ್ಕ್ರೀನ್ ಮತ್ತು ಉತ್ತಮವಾದ ಸ್ಲೈಡಿಂಗ್ ಕೀ ಪ್ಯಾಡ್ ಇದೆ. ಈ ಎರಡೂ ಮೊಬೈಲ್ ಗಳಲ್ಲಿ ಎಲ್ಲದರಲ್ಲಿರುವ ಸಾಮಾನ್ಯ ಅಂಶಗಳ ಜೊತೆಗೆ ಹೈ ಡೆಫನಿಶನ್ h263 & h264 ವಿಡಿಯೋ ಫಾರ್ಮ್ಯಾಟ್, 3.5 mm ವಿಡಿಯೋ ಜಾಕ್, ಹೈ ಡೆಫನಿಶನ್ 720p 5 ಮೆಗಾ ಪಿಕ್ಸೆಲ್ ಕೆಮರಾ , 8 GB ಆಂತರಿಕ ಹಾಗೂ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ ಇದೆ.

ಜಾವಾ ಬೇಸ್ಡ್ OS ನಿಂದ ಕಾರ್ಯ ನಿರ್ವಹಿಸುವ ಇವುಗಳಲ್ಲಿ ಬ್ಲಾಕ್ ಬೆರ್ರಿ 9810 ಟಾರ್ಚ್ 2 ದೊಡ್ಡ 768 MB ಯ RAM ಹೊಂದಿದ್ದು, ಬ್ಲಾಕ್ ಬೆರ್ರಿ 9930 ಬೋಲ್ಡ್ ಟಚ್ ಗಿಂತ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಬ್ಲಾಕ್ ಬೆರ್ರಿ 9930 ಬೋಲ್ಡ್ ಟಚ್, ಇದರ ಪ್ರತಿಸ್ಪರ್ಧಿ ಬ್ಲಾಕ್ ಬೆರ್ರಿ 9810 ಟಾರ್ಚ್ 2 ಗಿಂತ ಕಡಿಮೆ ದರ ಹೊಂದಿದೆ. ನಿರ್ದಿಷ್ಟ ದರ ಹಾಗೂ ಭಾರತದಲ್ಲಿ ಬಿಡುಗಡೆಯ ದಿನಾಂಕ ಇನ್ನೂ ನಿಗದಿಯಾಗಬೇಕಿದೆ. ಸದ್ಯದಲ್ಲಿಯೇ ನೀವು ಶೋ ರೂಂ ಗೆ ಹೋಗಿ ಈ ಎರಡೂ ಹೊಸ ಮೊಬೈಲ್ ನೋಡಿ ನಿಮಗೆ ಯಾವುದಿಷ್ಟವಾಗುತ್ತೋ ಅದನ್ನು ಕೊಂಡು ಖುಷಿಪಡಬಹುದು. ಬಂದೇ ಬರುತಾವ ಕಾಲ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot