ಇನ್ನೇಕೆ ಚಿಂತೆ...! ಸ್ಯಾಮ್ ಸಂಗ್- ಗೆಲಾಕ್ಸಿ Z ಬರುತ್ತೆ

Posted By: Staff

ಇನ್ನೇಕೆ ಚಿಂತೆ...! ಸ್ಯಾಮ್ ಸಂಗ್- ಗೆಲಾಕ್ಸಿ Z ಬರುತ್ತೆ
;

ಬೆಂಗಳೂರು. ಜು 6: ಸ್ಯಾಮ್ ಸಂಗ್ ಗೆಲಾಕ್ಸಿ SII ತಮ್ಮ ಜೇಬಿನಲ್ಲಿರಬೇಕೆಂದು ಯಾರು ಬಯಸೊಲ್ಲ ಹೇಳಿ? ಆದರೆ ಅದೇ ಜೇಬಿನಲ್ಲಿ ಜಾಸ್ತಿ ದುಡ್ಡೂ ಇರಬೇಕಲ್ಲ! ಆದರೆ ಇನ್ನು ಮುಂದೆ ಅದಕ್ಕೆ ಯೋಚಿಸಬೇಕಾಗಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಯಾಮ್ ಸಂಗ್ ಗೆಲಾಕ್ಸಿ SII ಗೆ ಪಕ್ಕಾ ಹೋಲಿಕೆಯಿರುವ, ಆದರೆ ಕಡಿಮೆ ಬಜೆಟ್ಟಿನ ಗೆಲಾಕ್ಸಿ Z ನ್ನು ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ತರುತ್ತಿದೆ- ಸ್ಯಾಮ್ ಸಂಗ್. ನಿಮಗೆ ಬೇಗ ಬೇಕಿದ್ದರೆ ಸ್ವೀಡನ್ ಗೆ ಅರ್ಜಿ ಹಾಕುವುದೇ ಸದ್ಯಕ್ಕಿರುವ ದಾರಿ.

4.2 ಇಂಚ್ ನ ಉತ್ತಮ ಗುಣಮಟ್ಟದ ಸ್ಪಷ್ಟ ಚಿತ್ರಣ ದೊರೆಯಬಲ್ಲ ಎಲ್ ಸಿಡಿ ಸ್ಕ್ರೀನ್ ಹೊಂದಿರುವ ಈ ಫೋನ್, 1 GHz ಪ್ರೊಸೆಸರ್, ಡ್ಯುಯಲ್ ಕೋರ್ ನಿಂದ ಕಾರ್ಯ ನಿರ್ವಹಿಸುತ್ತದೆ. ಇದರ ಬೆಲೆಗೆ ಮೀರಿದ LED ಸಹಕಾರ ಹೊಂದಿರುವ 5 MP ಉತ್ತಮ ಕೆಮರಾ ಇದರಲ್ಲಿದೆ. ಅಂಡ್ರ್ಯಾಡ್ ನಿಂದ ಜಿಂಜರ್ ಬ್ರೆಡ್ ಮೂಲಕ ಕಾರ್ಯನಿರ್ವಹಿಸುವ ಮತ್ತೊಂದು ಫೋನ್ ಈ ಗೆಲಾಕ್ಸಿ Z. ಶ್ರೇಷ್ಠ ತಂತ್ರಜ್ಞಾನದಿಂದ ಕೂಡಿರುವ ಈ ಮೊಬೈಲ್, 1.3 MP ಎದುರಿನ ಕೆಮರಾ ಕೂಡ ಹೊಂದಿದೆ. ಸಂಪರ್ಕ ಸಾಧನ ವಿಭಾಗಗಳಲ್ಲಿ SII ಮಾದರಿಗೆ ಹೋಲುವ ಇದು ಬ್ಲೂ ಟೂಥ್ ಹಾಗೂ 8 GB ಆಂತರಿಕ ಮೆಮೊರಿ ಹೊಂದಿದೆ.

ಇದುವರೆಗೂ ಬಿಡುಗಡೆಯಾಗಿರುವ ಳಲ್ಲೇ ಅತ್ಯಂತ ಹೆಚ್ಚು ಸ್ಲಿಮ್ ಎನಿಸಿರುವ SII ದಂತೆ ಇದೂ ಕೂಡ ಸ್ಲಿಮ್ ಆಗಿದೆ. ಇಷ್ಟು ಒಳ್ಳೆಯ ಮೊಬೈಲ್ ಬಿಡುಗಡೆಯನ್ನು ಕಂಪೆನಿ ಜಗತ್ತಿನ ಯಾವ ಭಾಗದಲ್ಲೂ ಸುದ್ದಿಯಾಗದಂತೆ ಏಕೆ ಮಾಡಿದೆ ಎಂಬುದು ಯಕ್ಷ ಪ್ರಶ್ನೆ! ಈ ಹೊಸ ಮೊಬೈಲ್ ಇದೀಗ ಯುರೋಪಿಯನ್ ದೇಶಗಳ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದ್ದು, ಭಾರತಕ್ಕೆ ಸದ್ಯವೇ ಆಗಮಿಸಲಿದೆ. ದಿನೇ ದಿನೇ ಸ್ಮಾರ್ಟ್ ಫೋನ್ ಜನಪ್ರಿಯವಾಗುತ್ತಿರುವ ಇಲ್ಲಿ ಇದು ಕ್ಲಿಕ್ ಆಗೋದು ಗ್ಯಾರಂಟಿ.

ಈ ಮೊಬೈಲ್ ನ ವಿಶೇಷತೆಗಳು:
* ಹಳೆಯ ಗೆಲಾಕ್ಸಿ SII ನಂತೆ ಸ್ಲಿಮ್ ವಿನ್ಯಾಸ
* ಹೆಚ್ಚಿನ ಬ್ಯಾಟರಿ ಬ್ಯಾಕಪ್
* ಬ್ಲೂ ಟೂಥ್ ಮತ್ತು Wi-Fi ಸಂಪರ್ಕ
* ವೈಬ್ರಂಟ್ 4.2 ಇಂಚ್ ಟಚ್ ಸ್ಕ್ರೀನ್
* ಜಿಂಜರ್ ಬ್ರಡ್ OS
* 8 GB ಆಂತರಿಕ ಹಾಗೂ SD ಕಾರ್ಡ್ ಬಳಸಿ ವಿಸ್ತರಿಸಬಹುದಾದ ಮೆಮೊರಿ
* ಲೆಡ್ ಫ್ಲಾಶ್ ಜೊತೆ 5 ಮೆಗಾ ಪಿಕ್ಸೆಲ್ ರೇರ್ ಕೆಮರಾ ಮತ್ತು 1.3 MP ಫ್ರಂಟ್ ಕೆಮರಾ

ಇಷ್ಟೆಲ್ಲ ಗುಣವಿಶೇಷತೆಗಳಿರುವ ಸ್ಯಾಮ್ ಸಂಗ್- ಗೆಲಾಕ್ಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಸಿ ಕೇಕ್ ನಂತೆ ಮಾರಾಟವಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಈಗ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಫೋನ್ ಗಳಾದ ಐಫೋನ್ ಹಾಗೂ ನೋಕಿಯಾ N9 ಮೊಬೈಲ್ ಗಳು ಈ ಹೊಸ ಗೆಲಾಕ್ಸಿ ಗೆ ಹೋಲಿಸಿದರೆ ಸಾಕಷ್ಟು ದುಬಾರಿಯಾಗಿವೆ. ಈಗ ಮಾರುಕಟ್ಟೆಯಲ್ಲಿ ಮೊಬೈಲ್ ಗಳ ನಡುವೆ ಸ್ಪರ್ಧೆ ಏರ್ಪಡಲೇಬೇಕು. ಇದು ಗ್ರಾಹಕರಿಗೆ ಸಿಹಿಸುದ್ದಿ. ಎಲ್ಲರೂ ಒಬ್ಬರಿಗೊಬ್ಬರು ಕೇಳುತ್ತಿದ್ದಾರೆ... ನಾನು ಬರಲಿರುವ ಹೊಸ ಸ್ಯಾಮ್ ಸಂಗ್- ಗೆಲಾಕ್ಸಿ Z ಸ್ಮಾರ್ಟ್ ಫೋನ್ ತಗೋತೀನಿ, ಇನ್ನು ನೀವು?

;
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot