ಮೈಕ್ರೋಮ್ಯಾಕ್ಸ್ ನಿಂದ ನಿಮ್ಗೆ ಆಟಕ್ಕೆ ಬೊಂಬಾಟ್ ಗೇಮಿಂಗ್ಸ್...

Posted By: Staff

ಮೈಕ್ರೋಮ್ಯಾಕ್ಸ್ ನಿಂದ ನಿಮ್ಗೆ ಆಟಕ್ಕೆ ಬೊಂಬಾಟ್ ಗೇಮಿಂಗ್ಸ್...
ಬೆಂಗಳೂರು. ಜು 7: ಗೇಮಿಂಗ್ ಇದು ಯುವಜನತೆಯ, ಅದರಲ್ಲೂ ವಿಶೇಷವಾಗಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ತರುಣ ಪೀಳಿಗೆಯ ಜನರನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ತಯಾರಿಸುವ ಒಂದು ಸಮೂಹ. ಈ ಅಲೆಯನ್ನು ಹಲವು ವರ್ಷಗಳ ಹಿಂದೆ ನೋಕಿಯಾ N-Gage ಎಂಬ ಹೆಸರಿನ ಮೊಬೈಲ್ ತರುವ ಮೂಲಕ ಇಂಡಿಯಾಕ್ಕೆ ತಂದಿದೆ. ಈ ಮೊಬೈಲ್ ನ ಉಳಿದ ವಿಶೇಷತೆಗಳು ಗಣನೀಯವಾಗಿ ಕಡಿಮೆಯಿದ್ದರೂ ಗೇಮ್ ನ ವಿಶೇಷತೆಗಳು ಸಾಕಷ್ಟು ಇದ್ದುದರಿಂದ ಇದು ಅತ್ಯಲ್ಪ ಅವಧಿಯಲ್ಲೇ ಸಾಕಷ್ಟು ಮಾರಾಟವಾಗಿ ಜನಪ್ರಿಯವಾಯಿತು.


ಇದೀಗ ಮೈಕ್ರೋಮ್ಯಾಕ್ಸ್ ಸರದಿ. ಮೈಕ್ರೋಮ್ಯಾಕ್ಸ್ ನಿಂದ ಆಟಕ್ಕೆ ಬೊಂಬಾಟ್ ಗೇಮಿಂಗ್ಸ್... ಗೇಮಿಂಗ್ ಸರ್ವೀಸ್ ಕೊಡುವ ಮೂಲಕ ಯುವಜನರನ್ನು ಆಕರ್ಷಿಸಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ನೀಡಿರುವ ಮೈಕ್ರೋಮ್ಯಾಕ್ಸ್, ಬೃಹತ್ EA ಗೇಮ್ಸ್ ಪಾರ್ಟ್ ನರ್ ಆಗಿರುವ 'ನಜರಾ ಟೆಕ್ನಾಲಜೀಸ್' ಜೊತೆ ಒಪ್ಪಂದ ಮಾಡಿಕೊಂಡಿದ್ದು, ಡೆಮೋ ಮೂಲಕ ಗ್ರಾಹಕರನ್ನು ಮೊದಲು ಆಕರ್ಷಿಸುವ ಕೆಲಸ ಮಾಡಿ ನಂತರ ಪಾಪ್ಯುಲರ್ ಆಗಿರುವ ಆ ಸಂಸ್ಥೆಯಿಂದ ಆಯ್ದ ಗೇಮ್ ಗಳನ್ನು ತನ್ನ ಮೊಬೈಲ್ ನಲ್ಲಿ ಸೇರಿಸಿಕೊಳ್ಳಲಿದೆ.

ಪಾಪ್ಯುಲರ್ ಜಿಗ್ಸ್ ಗಳಾದ ನೀಡ್ ಫಾರ್ ಸ್ಪೀಡ್, ಕ್ರಿಕೆಟ್ 11, ಟೆಟ್ರಿಸ್, ಹ್ಯಾರಿ ಪೊರ್ಟರ್ ಮುಂತಾದ ಇನ್ನೂ ಅನೇಕ ಥ್ರಿಲ್ಲಿಂಗ್ ಗೇಮ್ ಗಳನ್ನು ಡೆಮೋ ಮೂಲಕ ನೀಡಿ ನಂತರ ಇಷ್ಟವಾದ ಗ್ರಾಹಕರಿಗೆ ಫುಲ್ ಸಬ್ ಸ್ಕ್ರಿಪ್ಶನ್ ಮೂಲಕ ನೀಡುವ ಭರವಸೆ ನೀಡುತ್ತದೆ. ರು. 49, 99 ಗಳ ಗೇಮ್ ಗಳು ಸದ್ಯ ದೊರೆಯುತ್ತಿದ್ದು ನಂತರ ಫುಲ್ ಸಬ್ ಸ್ಕ್ರಿಪ್ಶನ್ ರು. 3/ ದಿನವೊಂದಕ್ಕೆ ಚಾರ್ಜ್ ಮಾಡಲಾಗುತ್ತದೆ.

ಈ ಗೇಮಿಂಗ್ ಸರ್ವೀಸ್, ಬಜೆಟ್ ಮೊಬೈಲ್ ಮೂಲಕ ಪ್ರಾರಂಭವಾಗಿ ನಂತರ ಕೆಲವು ವಾರಗಳಲ್ಲಿ Q80 ಹ್ಯಾಂಡ್ ಸೆಟ್ ನಲ್ಲಿ EZ ಮೇಲ್ ಸರ್ವೀಸ್ ಮೂಲಕ ನೀಡಲಾಗುವುದು. ಆದರೆ ಈಗ ಸ್ಮಾರ್ಟ್ ಫೋನ್ ಗಳಲ್ಲೇ ಫುಲ್ ವರ್ಷನ್ ಗೇಮ್ ಗಳು ಲಭ್ಯವರುವುದರಿಂದ ಮೈಕ್ರೋಮ್ಯಾಕ್ಸ್ ನ ಈ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುವುದೋ ತಿಳಿಯದು. ಗೇಮ್ ಮಾತ್ರ ಜನಪ್ರಿಯವಾಗುವುದೋ ಅಥವಾ ಮೈಕ್ರೋಮ್ಯಾಕ್ಸ್ ಗೂ ಏನಾದರೂ ಪ್ರಯೋಜನವಾಗುವುದೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot