ಆಲ್ ರೌಂಡರ್ ಮೊಬೈಲ್ ಎಚ್ ಟಿಸಿಯ ಎಟರ್ನಿಟಿ

ಆದರೂ ಎಚ್ ಟಿಸಿ, ಸದ್ಯಕ್ಕೆ ತನ್ನ ಲವ್- ವಿಂಡೋಸ್ ಗೆ ಗುಡ್ ಬೈ ಹೇಳಿಲ್ಲ. ಬದಲಿಗೆ ಹೊಸ ಸ್ಮಾರ್ಟ್ ಫೋನ್, ವಿಂಡೋಸ್ ಫೋನ್ 7 ಮ್ಯಾಂಗೋ OS ನಿಂದ ತಯಾರಿಸಿ 'ಎಟರ್ನಿಟಿ' ಎಂಬ ಹೆಸರಿನಿಂದ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಮೊಬೈಲ್ ಗಳಲ್ಲಿರುವ ಸಾಮಾನ್ಯ ಅಂಶಗಳ ಜೊತೆ ಹೊಸ ಹೊಸ ಗೇಮ್ ಗಳು ಹಾಗೂ ಅತ್ಯಂತ ಉತ್ಕೃಷ್ಟ ಕ್ವಾಲಿಟಿಯ ವಿಡಿಯೋ-ಆಡಿಯೋ ರೆಕಾರ್ಡಿಂಗ್ ಇದೆ.
ಎಟರ್ನಿಟಿ ಮೊಬೈಲ್ ವಿಶೇಷತೆಗಳು:
* ದೊಡ್ಡ 4.7 ಇಂಚ್ ಡಿಸ್ ಪ್ಲೇ
* 3 G, ಬ್ಲೂ ಟೂಥ್ & Wi-Fi
* ವಿಂಡೋಸ್ ಫೋನ್ 7 ಮ್ಯಾಂಗೋ OS
* 8 ಮೆಗಾ ಪಿಕ್ಸೆಲ್ ಕೆಮರಾ, VGA ಫ್ರಂಡ್ ಕೆಮರಾ
ಈ ಹೊಸ ಸ್ಮಾರ್ಟ್ ಫೋನ್ ಎಟರ್ನಿಟಿ, ಸರ್ವ ರೀತಿಯಲ್ಲೂ ನೀವು ಬಯಸಬಹುದಾದ 'ಆಲ್ ರೌಂಡರ್' ಆಗಿದ್ದು ಸದ್ಯಕ್ಕೆ ಚಾಲ್ತಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳನ್ನು ಒಳಗೊಂಡಿದೆ. ಅತ್ಯಾಧುನಿಕ-ಅತ್ಯಾಕರ್ಷಕ ಎಂದು ಖಾತ್ರಿಯಾಗಿ ಹೇಳಬಹುದಾದ ಇದರ 'ದರ' ಮಾತ್ರ ನಿಮಗೆ 'ಹೊರೆ' ಎನಿಸಬಹುದು. ಆದರೂ ಎಲ್ಲಾ ಒಂದರಲ್ಲೇ ಇರುವಾಗ ಚಿಂತೆಗೆ ಜಾಗವೇ ಇಲ್ಲ ಅಲ್ಲವೇ? ಬರಲಿರುವ ಈ ಮೊಬೈಲ್ ಗೆ ನಿಮ್ಮ ಜೇಬಿನಲ್ಲೊಂದು ಜಾಗವಿರಲಿ...


Click it and Unblock the Notifications








