ಮೋಟೊರೊಲಾ ಕ್ರೋನೋಸ್ ತಗೊಳ್ಳಿ, ಸ್ಮಾರ್ಟ್ ಆಗಿ

Posted By: Staff

ಮೋಟೊರೊಲಾ ಕ್ರೋನೋಸ್ ತಗೊಳ್ಳಿ, ಸ್ಮಾರ್ಟ್ ಆಗಿ
ಬೆಂಗಳೂರು. ಜು 8: ಸುಪ್ರಸಿದ್ಧ ಮೊಬೈಲ್ ಕಂಪೆನಿ ಮೋಟೊರೊಲಾ ತನ್ನ ಪ್ರತಿಸ್ಪರ್ಧಿಗಳನ್ನು ಎದುರಿಸಲು ಸಜ್ಜಾಗುತ್ತಿದೆ. ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಸಾರ್ವಭೌಮತ್ವವನ್ನು ಸ್ಥಾಪಿಸಲು ಬೃಹತ್ ಮೊಬೈಲ್ ಕಂಪನಿಗಳ ನಡುವೆ ಕಾದಾಟ ನಡೆಯುತ್ತಿರುವುದು ಹೊಸ ವಿಷಯವೇನಲ್ಲ. ಮೋಟೊರೊಲಾ ಕೂಡ ಹೊಸ 'ಮಾಡರ್ನ್ ಹೈ ಎಂಡ್ ಸ್ಮಾರ್ಟ್ ಫೋನ್' ಮೋಟೊರೊಲಾ- ಕ್ರೋನೋಸ್ ಬಿಡುಗಡೆ ಮಾಡುವ ಮೂಲಕ ಯುದ್ಧಪ್ರದರ್ಶನಕ್ಕೆ ಇಳಿದಿದೆ.

ಅಂಡ್ರಾಯ್ಡ್ 1.1 OS ಹೊಂದಿರುವ ಈ ಫೋನ್, ಗೂಗಲ್ ನಿಂದ ಅತ್ಯಾಕರ್ಷಕವಾದ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್, ಅಪ್ ಗ್ರೇಡ್ ಹಾಗೂ ಉಪಯೋಗಗಳನ್ನು ಕೇವಲ ಒಂದೇ ಒಂದು 'ಟಚ್' ಮೂಲಕ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಟ್ರಾನ್ಸ್ ಫ್ಲೆಕ್ಟಿವ್ ಕಲರ್, ಕಾಂಪಾಕ್ಟ್ 3.7 ಸ್ಕ್ರೀನ್ ಗಳೊಂದಿಗೆ ಟಚ್ ಸ್ಕ್ರೀನ್ ಮತ್ತು ಟಚ್ ಕೀ ಪ್ಯಾಡ್ ಸಾಕಷ್ಟು ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸಲು ನೆರವಾಗುತ್ತದೆ. ಇಂಟರ್ ನೆಟ್ ಮ್ಹೇಲಿಂಗ್, ಮೆಸೆಜಿಂಗ್, ರೀವ್ಯೂವಿಂಗ್ ಇವೆಲ್ಲ ಸುಲಭಸಾಧ್ಯವಾಗುವುದಕ್ಕೆ QWERTY ಕೀ ಪ್ಯಾಡ್ ಇದೆ.

ಇನ್ನು ಮನೋರಂಜನೆಯ ವಿಷಯಕ್ಕೆ ಬಂದರೆ ಎಲ್ಲಾ ಆಧುನಿಕ ವಿಶೇಷತೆಗಳನ್ನೊಳಗೊಂಡಿರುವ ಇದು 'ಸೂಪರ್'. ಕಡಿಮೆ ಬ್ಯಾಕಪ್ ಇರುವ ಬ್ಯಾಟರಿ, ನಾನ್ ಎಕ್ಸ್ ಪೆಂಡೆಬಲ್ ಮೆಮೊರಿ, ಎಮ್ ಪಿ 3 ಇಲ್ಲದ ಇದು ಸಹಜವಾಗಿ ಸ್ವಲ್ಪ ನಿರಾಶೆಗೊಳಿಸುತ್ತದೆ. ಎಲ್ಲಾ ಇದ್ದು ಇರಬೇಕಾದುದೇ ಇಲ್ಲ ಅಂದರೆ ಹೇಗಿರುತ್ತದೆ! ಆದರೂ ಹೊಸದೆಷ್ಟೋ ಇದೆಯಲ್ಲ! ಕೊಂಡು ನೋಡಲೇಬೇಕು.

ಮೋಟೊರೊಲಾ- ಕ್ರೋನೋಸ್ ವಿಶೇಷತೆಗಳು:
* ಅಂಡ್ರಾಯ್ಡ್ 2.2.1 OS
* ಸ್ಟಿರಿಯೋ ಲೌಡ್ ಸ್ಪೀಕರ್ & 3.5 ಸ್ಟ್ಯಾಂಡರ್ಡ್ ಆಡಿಯೋ ಔಟ್ ಪುಟ್
* ಫುಲ್ ಟಚ್ ಸ್ಕ್ರೀನ್ & QWERTY ಕೀ ಪ್ಯಾಡ್
* Wi-Fi
* ಮೈಕ್ರೋ SD ವಿಸ್ತರಿಸಬಹುದಾದ ಮೆಮೊರಿ
* ಬ್ಲೂ ಟೂಥ್ 2.1 + EDR
* USB 2.0
* 5MP ಕೆಮರಾ

ಇಷ್ಟೆಲ್ಲಾ ಇರುವ ಹೊಸ ಮೋಟೊರೊಲಾ ನಿಜಕ್ಕೂ ಗುಡ್. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಈ ರೀತಿಯ ಮೊಬೈಲ್ ಗಳು ಇವೆಯಲ್ಲ! ಆದರೂ ಮೋಟೊರೊಲಾ ತನ್ನ ವೃತ್ತಿ ನಿಷ್ಠೆ ಮತ್ತು ಶ್ರೇಷ್ಠತೆಯನ್ನು ಜಾಹೀರು ಮಾಡಲು ಈ ಹೊಸ ಪ್ರಯೋಗಕ್ಕೆ ಧುಮುಕಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot