Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೀಗೂ ಉಂಟೇ! ನೋಕಿಯಾ ಲವ್ ಮ್ಯಾರೇಜ್ ...

ಆದರೆ ಈ ಪ್ರೇಮ ಕಥೆಯ ನಾಯಕ-ನಾಯಕಿ ಮಾತ್ರ ತಮ್ಮ ಪ್ರೀತಿ ಹುಟ್ಟಿದ್ದು ನೋಕಿಯಾ ಮೊಬೈಲ್ ನಿಂದ ಅಂದರು ಒಟ್ಟಿಗೆ. ನನಗೆ ಏನೋ "ಸಮ್ ಥಿಂಗ್ ಸ್ಪೆಷಲ್" ಅನ್ನಿಸತು. ಹೇಳಿ ಅಂದೆ. ಪ್ರಾರಂಭಿಸಿದರು... ಒಟ್ಟಿಗೆ. ಮುಂದುವರಿಸಿದ್ದು- ಕೆಲವೊಮ್ಮೆ ಆತ, ಕೆಲವೊಮ್ಮೆ ಆಕೆ, ಕೊನೆಗೆ ಇಬ್ಬರೂ!
ಇಬ್ಬರ ಮಾತನ್ನೂ ನಾನೇ ಹೇಳುತ್ತೇನೆ, ಓದಿಕೊಳ್ಳಿ. ಆತ ಚಿಕ್ಕಮಗಳೂರಿನ 'ಪ್ರಶಾಂತ', ಆಕೆ ಬೆಳಗಾವಿಯ 'ರಶ್ಮಿ'. ಈಗ ಗಂಡ-ಹೆಂಡತಿ. 2 ವರ್ಷದ ಹಿಂದೆ ಅಪರಿಚಿತರು. ಪ್ರಶಾಂತ 'ಐಬಿಎಮ್' ನ ಉದ್ಯೋಗಿ, ಸ್ಪುರದ್ರೂಪಿ. ರಶ್ಮಿ ಚೆಂದದ ಹುಡುಗಿ, ಬಿಬಿಎಮ್ ಕೊನೆಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಅದೊಂದು ದಿನ ತನ್ನ ಮೊದಲ ಹೊಸ ಮೊಬೈಲ್ ಕೊಳ್ಳಲು ಪಕ್ಕದಲ್ಲೇ ಇದ್ದ ಶೋ ರೂಂ ಗೆ ತನ್ನ ಗೆಳತಿ 'ಪ್ರೀತಿ' ಜೊತೆ ಬಂದಿದ್ದಳಂತೆ. ಯಾವುದನ್ನು ಕೊಳ್ಳಬೇಕೆಂದು ಮೊದಲೇ ನಿರ್ಧರಿಸಿಕೊಳ್ಳದ ರಶ್ಮಿ ಕಂಡಿದ್ದೆಲ್ಲಾ ಕೇಳಲು ಶುರುವಿಟ್ಟುಕೊಂಡಳಂತೆ. ಅಂಗಡಿಯವನಿಗೂ ಸಹನೆ ಕಳೆದು ಹೋಗಿ ಕೊನೆಗೆ 'ನಿಮಗೆ ಯಾವ ಕಂಪೆನಿಯದು ಬೇಕು' ಅಂದಾಗ ರಶ್ಮಿ 'ನಂಗೆ ಕಂಪೆನಿ ಯಾವುದಾದರೂ ಒಳ್ಳೆ ಮೊಬೈಲ್ ಬೇಕು' ಅಂದಳಂತೆ.
ಅಂಗಡಿಯವ ತಲೆಕೆಟ್ಟು ಎಲ್ಲಾನು ಒಳ್ಲೇದೇ. ಯಾವುದು ಕೊಡ್ಲಿ ಅಂದಾಗ ರಶ್ಮಿ ಏನು ಹೇಳಲೂ ತೋಚದೇ ಆ ಕಡೆ ಈ ಕಡೆ ನೋಡುತ್ತಿರುವಾಗ ಅಲ್ಲೇ ಚಾರ್ಜರ್ ಕೊಳ್ಳಲು ಬಂದ ಪ್ರಶಾಂತ ಅವಳ ಮುಗ್ಧತೆಗೆ ನಕ್ಕು ತನ್ನಲ್ಲಿರುವ ನೋಕಿಯಾ ಸೆಟ್ ತೋರಿಸಿದನಂತೆ. ತಕ್ಷಣ ಅವಳು ಪ್ರಶಾಂತನನ್ನು ತೋರಿಸಿ ಅವರಲ್ಲಿರುವುದನ್ನು ಕೊಡಿ ಅಂದಾಗ ಅಂಗಡಿಯವನಿಗೂ ನಗು! ಆದರೂ ಏನೂ ಹೇಳದೇ ಪ್ರಶಾಂತನ್ನು ಹತ್ತಿರ ಕರೆದು, ಆತನ ಮೊಬೈಲ್ ನೋಡಿ 'ನೋಕಿಯಾ 6700 ಸ್ಲೈಡ್' ಕೊಟ್ಟನಂತೆ. ಅದು ಆ ಕಾಲಕ್ಕೂ ಈ ಕಾಲಕ್ಕೂ ಒಳ್ಳೆಯ ಮೊಬೈಲೇ ಆದ್ದರಿಂದ ಆಕೆಗೆ ಖುಷಿಯಾಗಿ ' ಥ್ಯಾಕ್ಸ್' ಅಂದಳಂತೆ. ಇವನೋ, ಯಾಕೆ? ಅಂದನಂತೆ. ಅವಳ ಮುಖ ಕೆಂಪಗಾಗಿ ಒಳ್ಳೆ ಮೊಬೈಲ್ ಕೊಡ್ಸಿದಕ್ಕೆ ಅಂದುಬಿಟ್ಳಂತೆ. ಅಯ್ಯೋ, ನಾನೆಲ್ಲಿ ಕೊಡ್ಸ್ದೆ! ನಿಮ್ಮದೆ ದುಡ್ಡು ಅಂತ ಪ್ರಶಾಂತ ಅಂದ್ನಂತೆ. ಅಷ್ಟರಲ್ಲಿ ಅವರಿಬ್ಬರ ಮಧ್ಯೆ ಇದ್ದ 'ಪ್ರೀತಿ' ಹೋಗೋಣ ನಡ್ಯೆ ಅಂದಳಂತೆ. ಇಷ್ಟನ್ನು ಹೇಳಿ ಇಬ್ಬರೂ ನಗತೊಡಗಿದರು...
"ಆಗ ನಮ್ಮಿಬ್ಬರ ಮಧ್ಯೆ ನನ್ನ ಗೆಳತಿ 'ಪ್ರೀತಿ' ಇದ್ದಳು. ಈಗ ನಮ್ಮಿಬ್ಬರಲ್ಲಿ 'ಪ್ರೀತಿ' ಇದೆ. ಆದರೆ ಆ 'ಪ್ರೀತಿ' ಈಗ ಇಲ್ಲಿಲ್ಲ, ದೂರದ ಆಸ್ಟ್ರೇಲಿಯಾದಲ್ಲಿ ಅವಳ ಗಂಡನ ಜೊತೆ ಇದ್ದಾಳೆ". ಮುಗುಳ್ನಗೆಯೊಂದಿಗೆ ಮುಂದುವರಿಸಿದಳು ರಶ್ಮಿ ಅವರಿಬ್ಬರ ಪ್ರೀತಿಯ ಕಥೆಯನ್ನು...
"ಹೊಸ ಮೊಬೈಲ್ ಕೊಂಡಿದ್ದರಿಂದ ಆಗಾಗ ನೋಡತೊಡಗಿದೆ. ಮೊಬೈಲ್ ನೋಡಿದಂತೆಲ್ಲಾ ಪ್ರಶಾಂತ ನೆನಪಾಗತೊಡಗಿದ. ಇನ್ನೊಮ್ಮೆ ಸಿಗಬಹುದಾ ಆತ ಅನ್ನಿಸ್ತಾ ಇತ್ತು. ಒಮ್ಮೆ ಸಿಕ್ಕವರು ಇನ್ನೊಮ್ಮೆ ಸಿಕ್ಕೇ ಸಿಗಲು ಇದೇನು ನಮ್ಮೂರೇ! ಬೆಂಗಳೂರಿನಲ್ಲಿ ಪರಿಚಯದವರನ್ನೇ ಹುಡುಕಿಕೊಂಡು ಹೋದರೂ ಸಿಗುವುದು ಕಷ್ಟ. ಇನ್ನು ಆತ ಸಿಗುವನೇ ಎಂದು ಮನದಲ್ಲೇ ನಕ್ಕು ಸದ್ಯ ಅವನಿಂದ ಒಳ್ಳೆಯ ಮೊಬೈಲ್ ಸಿಕ್ಕಿತಲ್ಲಾ ಅಂತ ಖುಷಿಯಾಗಿದ್ದೆ. ಆದರೂ ಮೊಬೈಲ್ ನೋಡದಿದ್ದರೂ ಪ್ರಶಾಂತ ನೆನಪಾಗತೊಡಗಿದಾಗ ಮಾತ್ರ ನಿಜಕ್ಕೂ ನನಗೆ ಅಚ್ಚರಿ.
'ಲವ್ ಅಟ್ ಫಸ್ಟ್ ಸೈಟ್ ಆಗಿಬಿಟ್ಟಿತ್ತು'. ಆದರೆ ಆಕೆಗೆ ಗೊತ್ತಾಗಿದ್ದು ಯಾವಾಗ ಅಂತ ಅವಳ ಮಾತಲ್ಲೇ ಕೇಳಿ... "ಇಷ್ಟಾಗಿ ಸರಿಯಾಗಿ ನಾಲ್ಕನೆಯ ದಿನ. ನನಗಿನ್ನೂ ನೆನಪಿದೆ. ಅದೇ ಗೆಳತಿ ಪ್ರೀತಿಯ ಜೊತೆ ಬರುತ್ತಿದ್ದೆ ಆ ಶೋ ರೂಂ ನಂತರ ಇರುವ ಆರನೆಯ ಬಿಲ್ಡಿಂಗ್ ಸಮೀಪ. ಎದುರುಗಡೆಯಿಂದ ಬರುತ್ತಿದ್ದ ಈ ಪ್ರಶಾಂತ!". ಹೇಳಿ ಮಾತು ನಿಲ್ಲಿಸಿದಳು.
ಅಲ್ಲೇ ಇದ್ದ ಪ್ರಶಾಂತನಿಗೆ ಮೆಲ್ಲಗೆ ಭುಜಕ್ಕೆ ತಟ್ಟಿ ಕಣ್ಣಲ್ಲೇ 'ಕಳ್ಳ' ಅನ್ನುತ್ತಾ ಮುಂದುವರಿಸದಳು..."ಇಬ್ಬರೂ ಸಮೀಪವಾದಾಗ ನಾನೇ ಹಾಯ್ ಅಂದೆ. ಆತ ನಕ್ಕು ಹಲೋ ಅಂದ. ಮೊಬೈಲ್ ನೋಡಿದಾಗಲೆಲ್ಲ ನಿಮ್ಮ ನೆನಪಾಗುತ್ತೆ ಅಂದೆ. ಆತ ನೋಡದಾಗಲೂ ನೆನಪಾದರೆ ಚೆನ್ನಾಗಿತ್ತು ಅಂದ. ತಕ್ಷಣವೇ ನಾನು ನಿಜ ಹೇಳಬೇಕು ಅಂದ್ರೆ ನೋಡದಿದ್ರೂ ನೆನೆಪು ಬರುತ್ತೆ ಅಂದೆ. ಪ್ರೀತಿ ಆಶ್ಚರ್ಯದಿಂದ ಇಬ್ಬರನ್ನೂ ನೋಡಿ ಹುಚ್ಚು ಹಿಡಿದಿದೆಯೆಂಬಂತೆ ಮುಖ ಅಲ್ಲಾಡಿಸಿ ಸುಮ್ಮನಾದಳು. ಆತ ನನ್ನ ಮುಖ ನೋಡಿ ಸೈಲಂಟಾಗಿಬಿಟ್ಟ. ಮುಂದೇನು ಹೇಳಬೇಕೆಂದು ತೋಚದೇ ನಾನು ನಿಮ್ಮ ಮೊಬೈಲ್ ನಂ ಕೊಡಿ ಅಂದೆ. ಆತ ಮೊಬೈಲ್ ನೇ ಕೊಟ್ಟ. ಮೊಬೈಲ್ ಬೇಡ ಅಂದೆ. ಆತ ನಿಮ್ಮ ನಂಬರ ಟೈಪ್ ಮಾಡಿ ಸೇವ್ ಮಾಡಿ, ನಾನೇ ಮಾಡ್ತೀನಿ ಅಂದ". ಮತ್ತೆ ನಿಲ್ಲಿಸಿ ಆತನ ಮುಖವನ್ನೊಮ್ಮೆ ನೋಡಿದಳು.
ನಗುತ್ತಿದ್ದ ಪ್ರಶಾಂತ. ಅವಳೇ ಮುಂದುವರಿಸದಳು "ಇದ್ಯೇನು ಹೊಸ ವರಸೆ ಅಂತ ಅನ್ನಿಸ್ತು. ಆದ್ರೂ ಹೇಳಿದಂತೆ ಮಾಡಿ ಮೊಬೈಲ್ ವಾಪಸ್ ಕೊಟ್ಟೆ. ಇಬ್ಬ್ರೂ ಸುಮ್ಮನೇ ನಿಂತ್ವಿ. ಆಗ ಗೆಳತಿ ಪ್ರೀತಿ ಕೈ ಹಿಡಿದು ಎಳಕೊಂಡು ಮುಂದೆ ನಡೆದ್ಲು. ಏನೋ ಆದವರಂತೆ ಸೈಲೆಂಟಾಗಿ ಸಾಗಿದೆ. ನಿಜವಾಗಿಯೂ ಏನೋ ಆಗಿತ್ತು. ಅದೇ ಪ್ರೀತಿ ಮನಸ್ಸಿನೊಳಗೆ ಹೊಕ್ಕಿ ಬಿಟ್ಟಿತ್ತು. ತಿಳಿಯಲು ಜಾಸ್ತಿ ಹೊತ್ತು ಬೇಕಾಗಿರಲಿಲ್ಲ. ಆದರೆ ಹೇಳಿಕೊಳ್ಳಲು ಆಗಲಿಲ್ಲ. SMS ಮಾಡಲು ನಂಬರ್ ಇರಲಿಲ್ಲ. ಎನು ಮಾಡಬೇಕು ತಿಳಿಯದೇ ಹಾಗೇ ಕುಳಿತುಬಿಟ್ಟೆ. ನಂತರ ನಾನು ನಾನಾಗಿರಲಿಲ್ಲ". ಅಷ್ಟು ಹೇಳಿ ಸುಮ್ಮನಾದಳು ರಶ್ಮಿ.
ಇನ್ನು ಮುಂದೆ ನಾನು ಹೇಳುತ್ತೇನೆ ಎಂದು ಮುಂದುವರಿಸಿದ ಪ್ರಶಾಂತ... "ನನಗೂ ಇವಳ ನೆನೆಪು ಕಾಡತೊಡಗಿತ್ತು. ಆದರೆ ತಕ್ಷಣ ಫೋನು ಮಾಡುವಷ್ಟಿರಲಿಲ್ಲ. ರಾತ್ರಿ ಮಲಗಿದರೆ ನಿದ್ದೆಯೇ ಇಲ್ಲ. ಬೆಳಗಿನ ಜಾವ 4 ಗಂಟೆ, 8 ನಿಮಿಷ. ಇನ್ನು ತಡೆಯಲಾರೆ ಅನ್ನಿಸಿ ರಿಂಗ್ ಮಾಡಿದೆ. ಎರಡೇ ರಿಂಗ್ ಗೆ ಹಲೋ ಅನ್ನಬೇಕೆ ಈಕೆ!".
ಪಕ್ಕದಲ್ಲಿದ್ದ ರಶ್ಮಿಗೆ ತಲೆಯ ಮೇಲೊಂದು ಹೊಡೆದು ಹೇಳತೊಡಗಿದ... "ನಾನು ಪ್ರಶಾಂತ ಅಂದೆ. ಗೊತ್ತಾಯ್ತು ಅಂದ್ಲು. ಇಷ್ಟು ಬೇಗ ಎದ್ದಿರ್ತೀರಾ ಅಂದೆ. ನಾನು ನಿದ್ದೇನೇ ಮಾಡಿಲ್ಲ ಅಂದ್ಲು. ಯಾಕೆ ಅಂದೆ. ನಿದ್ದೆ ಬರ್ಲಿಲ್ಲ ಅಂದ್ಲು. ನೀವು? ಅಂತ ಕೇಳಿ ಸುಮ್ಮನಾಗಿ ಬಿಟ್ಲು. ನಾನು ಹೇಳಲೇ ಬೇಕಾಯಿತು. ಐ ಲವ ಯು ಅಂದೆ. ಐ ಟೂ ಅಂದ್ಲು. ಥ್ಯಾಕ್ಯೂ ಅಂದ್ಲು. ನಾನೂ ಥ್ಯಾಕ್ಸ್ ಅಂದೆ. ಥ್ಯಾಕ್ಸ್ ನಿಮ್ಮ ಜೊತೆ ನೋಕಿಯಾ ಮೊಬೈಲ್ ಗೂ ಅಂದ್ಲು. ಅದಕ್ಕೇನು ಕಿವಿ ಇದೆಯಾ ಅಂದೆ. ಕಂಪೆನಿಗೆ ಮೇಲ್ ಕಳಿಸೋಣ್ವಾ ಅಂದ್ಲು. OK ಅಂದೆ. ಮಾರನೆಯ ದಿನ ಇಬ್ರೂ ಮೇಲ್ ಕಳಿಸಿದ್ವಿ. ನೋಕಿಯಾ ನಮ್ಮಿಬ್ಬರನ್ನೂ ಒಂದು ಮಾಡಿತ್ತು. ಮೊಬೈಲ್ ಗಿಂತ ಹೆಚ್ಚು ನಮ್ಮಿಬ್ಬರಿಗೂ ನೋಕಿಯಾ. ಯಾರೇ ಕೇಳಿದ್ರೂ ನೋಕಿಯಾ ತಗೊಳ್ಳಿ ಅಂತೀವಿ" ಅಂದ್ರು ಇಬ್ಬರೂ ಕೈ ಕೈ ಹಿಡಿದು.
ಇಬ್ಬರೂ ಒಟ್ಟಿಗೆ ಮತ್ತೆ ಮುಂದುವರಿಸಿದರು "ನಂತರ ಏನಾಗಿರಬಹುದು ಅಂತ ನೀವೆ ಗೆಸ್ ಮಾಡ್ಬಹುದು ಅಂದ್ರು. ಮನೆಯಲ್ಲಿ ಒಪ್ಪಿಗೆ ಪಡೆದು ಮದುವೆ ಮಾಡ್ಕೊಂಡ್ವಿ. ಈಗ ಹಾಯಾಗಿ ಇದೀವಿ. ಈಗ ನಮ್ಮಿಬ್ಬರಲ್ಲಿ ಅದೆಷ್ಟೋ ನೋಕಿಯಾ ಮೊಬೈಲ್ ಗಳಿವೆ. ಎಲ್ಲಾನೂ ನೋಕಿಯಾನೇ. ಆದ್ರೆ ಆ ಮೊಬೈಲ್ ಹಾಗೇ ಇಟ್ಕೊಂಡಿದೀವಿ ಅಂದ್ರು. ನೋಕಿಯಾ ಸ್ಲೋಗನ್ ಎಷ್ಟು ಅರ್ಥಪೂರ್ಣವಾಗಿದೆಯಲ್ವಾ?... "Connecting the People" ಅಂದ್ರು. ಅವರು ಹೇಳಿ ಮುಗಿಸಿದಾಗ ನನಗೆ ಅಚ್ಚರಿಯ ಜೊತೆಗೆ ನನ್ನ ನೋಕಿಯಾ ಬಗ್ಗೆ ಹೆಮ್ಮೆಯ ಜೊತೆ ಭರವಸೆಯೂ ಉಂಟಾಯಿತು. ನಾನು ನನ್ನೊಳಗೇ ಹೇಳಿಕೊಂಡೆ- ಹೌದು, ನೋಕಿಯಾ- "Connecting the People".
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470