ಗೂಗಲ್ ಹೊಸ ಹೆಜ್ಜೆ ನೆಕ್ಸಸ್ ಫ್ರೈಮ್ ಕ್ಲಿಕ್ ಆಗುತ್ತಾ!

Posted By: Staff

ಗೂಗಲ್ ಹೊಸ ಹೆಜ್ಜೆ ನೆಕ್ಸಸ್ ಫ್ರೈಮ್ ಕ್ಲಿಕ್ ಆಗುತ್ತಾ!
ಬೆಂಗಳೂರು. ಜು 11: ಗೂಗಲ್ ಕೊಡುಗೆ 'ಅಂಡ್ರಾಯ್ಡ್ ಆಪರೇಟಿಂಗ್ ಪ್ಲಾಟ್ ಫಾರ್ಮ್' ಜಗತ್ತಿನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ಮಾರ್ಟ್ ಫೋನ್ ನಲ್ಲಿ ಅಂಡ್ರಾಯ್ಡ್ OS ಬಳಸುವ ಮೂಲಕ ಜಗತ್ತಿನಲ್ಲಿ 'ಸ್ಮಾರ್ಟ್ ಫೋನ್' ಯುಗ ಪ್ರಾರಂಭವಾಗಿ ಯಶಸ್ವಿಯಾಗಿ ಸಾಗಲು ಗೂಗಲ್ ನ ಈ ಅನ್ವೇಷಣೆ ತುಂಬಾ ಸಹಕಾರಿಯಾಗಿದೆ.

ಇದು ಸದ್ಯದಲ್ಲಿಯೇ ಟ್ಯಾಬ್ ಲೆಟ್ ಪಿಸಿಯಲ್ಲಿ ನಂ. 1 ಎನಿಸಿಕೊಳ್ಳಲಿದೆ. ಇದೆಲ್ಲ ಬೆಳವಣಿಗೆಗಳಿಂದ ಪ್ರೇರಿತವಾಗಿರುವ ಗೂಗಲ್ ಸದ್ಯದಲ್ಲಿಯೇ ಸ್ಯಾಮ್ ಸಂಗ್ ಸಹಯೋಗದೊಂದಿಗೆ ಹೊಸ ಮೊಬೈಲ್ ತರುತ್ತಿದೆ, ನೆಕ್ಸಸ್ ಸಿರೀಸ್ ನ 'ನೆಕ್ಸಸ್ ಪ್ರೈಮ್'

ಈಗಿರುವ ನೆಕ್ಸಸ್ ಲೈನ್ ಪ್ರೈಮ್ ಹೊಸ ಅತ್ಯಾಧುನಿಕ ಫೋನನ್ನು ಸದ್ಯ ಕೊಳ್ಳಲು ಆಗದಿರುವವರಿಗಾಗಿ ರೂಪುಗೊಂಡಿದೆ ಎನ್ನಬಹುದು. ಆದರೆ ಮುಂದೆ ಬರಲಿರುವ ನೆಕ್ಸಸ್ ಪ್ರೈಮ್, ಸ್ಯಾಮ್ ಸಂಗ್ ಮತ್ತು ಗೂಗಲ್ ಸಂಯೋಗದಲ್ಲಿ OS ಆಧಾರಿತ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿರಲಿದೆ.

ಈ ನೆಕ್ಸಸ್ ಪ್ರೈಮ್ ನ ವಿಶೇಷತೆಗಳು:
* ಅಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್ OS
* 3G ಬ್ಲೂಟೂಥ್ & Wi-Fi
* OMELED ಸ್ಕ್ರೀನ್.
* 8 ಮೆಗಾ ಪಿಕ್ಸೆಲ್ ರೇರ್ ಕೆಮರಾ ಜಾವಾದೊಂದಿಗೆ

ಸದ್ಯಕ್ಕೆ ಇದರ ಬಿಡುಗಡೆ ಕೇವಲ ರೂಮರ್ ಹಂತದಲ್ಲಿದ್ದು 2012 ಮಧ್ಯದ ವೇಳೆಗೆ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆಯಿದೆ. ನಿಮ್ಮ ಕನಸಿನ ಮೊಬೈಲ್ ಇದಾಗಿರಬಹುದು. ಯಾವುದಕ್ಕೂ ಇದರ ಎಲ್ಲಾ ವಿಶೇಷತೆಗಳನ್ನು ನೆನಪಿನಲ್ಲಿಟ್ಟು ಕಾಯುತ್ತಿರಿ. ಬಂದಾಗ ನೀವೇ ಮೊದಲು ತೆಗೆದುಕೊಳ್ಳಬಹುದು!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot