Subscribe to Gizbot

ಚಿಂತೆ ಏತಕೆ ಇನ್ನು? ಬರಲಿದೆ ಕಡಿಮೆ ರೇಡಿಯೇಶನ್ ಫೋನು!

Posted By: Super
ಚಿಂತೆ ಏತಕೆ ಇನ್ನು? ಬರಲಿದೆ ಕಡಿಮೆ ರೇಡಿಯೇಶನ್ ಫೋನು!
ಬೆಂಗಳೂರು, ಜು. 11:ನಿಮಗೂ ಮೊಬೈಲ್ ನಿಂದ ರೇಡಿಯೇಷನ್ ಬರುತ್ತದೆ ಎಂಬ ಭಯವೇ! ಇದೊಂದು ಪ್ರಚಲಿತದಲ್ಲಿರುವ ವಿವಾದ. ಮೊಬೈಲ್ ಮನುಷ್ಯನಿಗೆ ಆರೋಗ್ಯಕ್ಕೆ ಹಾನಿಯಾಗುವಷ್ಟು ರೇಡಿಯೇಷನ್ ಹೊರಸೂಸುತ್ತಾ? ಕೆಲವು ವಿಜ್ಞಾನಿಗಳು ಹೌದೆನ್ನುತ್ತಾರೆ, ಇನ್ನೂ ಕೆಲವರು ಇಲ್ಲ, ಅದಕ್ಕೆ ಆಧಾರವಿಲ್ಲ ಎನ್ನುತ್ತಿದ್ದಾರೆ. ಎನೇ ಆದರೂ ಮೊಬೈಲ್ ತಯಾರಕರು ತಲೆಯಲ್ಲಿ ಹುಳಬಿಟ್ಟುಕೊಳ್ಳುವುದು ಸಹಜವಲ್ಲವೇ!


ಅದನ್ನೇ ಸವಾಲಾಗಿ ಸ್ವೀಕರಿಸಿ ಕಡಿಮೆ ರೇಡಿಯೇಷನ್ನಿರುವ ಹೊಸ ಮೊಬೈಲ್ ಮರುಕಟ್ಟೆಗೆ ಬಿಡುತ್ತಿದೆ ಐಸ್ ಮೊಬೈಲ್ ನೆಟ್ ವರ್ಕ್. ಅದು ಇದಕ್ಕಿಟ್ಟಿರುವ ಹೆಸರು ಆಲ್ಕಾಟೆಲ್ ಐಸ್ 3. ಅಬ್ಬಾ... ಈ ಕಂಪೆನಿಯ ಮಹತ್ವಾಕಾಂಕ್ಷೆ ಏನು ಗೊತ್ತೇ? ಬರುವ 2012 ರೊಳಗೆ 1 ಮಿಲಿಯನ್ ಇಂತಹ ಮೊಬೈಲ್ ಮಾರಾಟ, ಅದೂ ಕೇವಲ ಭಾರತದಲ್ಲಿ! ಇದರ ಗುರಿ ನೋಡಿದರೆ ಅರ್ಥವಾಗುತ್ತದೆ ಈ ರೇಡಿಯಷನ್ನಿಗೆ ಸಂಬಂಧಪಟ್ಟ ವಿವಾದ ಯಾವ ರೂಪದಲ್ಲಿದೆ ಎಂಬುದು.

ಐಸ್ ಮೊಬೈಲ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಮ್.ಎಸ್ ಮಲ್ಲಿಕ್ ರ ಪ್ರಕಾರ ಆರೋಗ್ಯಕ್ಕೆ ಮಾರಕವಾಗಿರುವ ಎಲ್ಲ ಮೊಬೈಲ್ ಗಳ ಮಾರಾಟವನ್ನು ಭಾರತ ಸರ್ಕಾರ ಸದ್ಯವೇ ನಿಷೇಧಿಸಲಿದೆ. ಆದ್ದರಿಂದ ಕಡಿಮೆ ಗುಣಮಟ್ಟದ ಚೀನಾ ಮೊಬೈಲ್ ಗಳು ಮಾರುಕಟ್ಟೆಯಿಂದ ದೂರ ಸರಿಯಲಿವೆ. ರೀಪ್ಲೇಸ್ ವಾರಂಟಿ ಸೌಲಭ್ಯವಿದೆ. ಹಾಗಾಗಿ ಈ ಹೊಸ ಮೊಬೈಲ್ ಹೇರಳವಾಗಿ ಮಿಲಿಯನ್ ಗಟ್ಟಲೆ ಮಾರಾಟವಾಗಲಿದೆ. ಕಂಪೆನಿ ಈಗಾಗಲೇ ಪ್ರಚಾರಕಾರ್ಯ ಪ್ರಾರಂಭಿಸಿದ್ದು ಸದ್ಯವೇ ಮಾರಾಟದ ಭರಾಟೆ ಆರಂಭವಾಗಲಿದೆ. ನಿಮ್ಮ ಮನೆಯಲ್ಲಿ ಈಗಿರುವ ಎಷ್ಟು ಮೊಬೈಲ್ ಗಳು ಜಾಗ ಖಾಲಿ ಮಾಡಲಿವೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot