ಎಲ್ಲಾ ಮೊಬೈಲ್ ಮಯ, ಏನಿದು ಮೊಬೈಲ್ ಮಾಯೆ!

Posted By: Staff

ಎಲ್ಲಾ ಮೊಬೈಲ್ ಮಯ, ಏನಿದು ಮೊಬೈಲ್ ಮಾಯೆ!
" ಮೊಬೈಲ್ " ಈ ಶಬ್ದ ಕೇಳಿದರೆ ಸಾಕು, ಮೈ-ಮನ ಅರಳುತ್ತದೆ. ತುಟಿಯಲ್ಲಿ ಕಿರುನಗೆ ಮರಳುತ್ತದೆ. ಗೊತ್ತಿಲ್ಲದಂತೆ ಕೈ ಬೆರಳುಗಳು ನಲಿಯುತ್ತವೆ. ಮಕ್ಕಳಿಂದ ಹಿಡಿದು ಮದುಕರವರೆಗೆ ಮೋಡಿ ಮಾಡಿರುವ ಈ ಮೊಬೈಲ್ ನಲ್ಲಿ ಅಂತದ್ದೇನಿದೆ?


ಈ ಒಂದು ಪ್ರಶ್ನೆ ಕೇಳಿದರೆ ಉತ್ತರಗಳು ಬರುತ್ತವೆ ಸಾವಿರಾರು. ಏಕೆಂದರೆ ಎಲ್ಲರಿಗೂ ಗೊತ್ತು ಉತ್ತರ. ಸಂಪರ್ಕ ಮಾಧ್ಯಮಗಳಲ್ಲೇ ಉತ್ಯಂತ ಬಳಕೆಯಲ್ಲಿರುವುದು ಈ ಮೊಬೈಲ್. ಮನುಷ್ಯರಿಗೆ ಯಾವಾಗಲೂ ಬೇರೆಯವರ ಜೊತೆ ಬೆರೆಯಲು, ಅವರ ಬಗ್ಗೆ ತಿಳಿಯಲು ಕುತೂಹಲ ಹೆಚ್ಚು. ಹಾಗೇ ತಾನು ಇಡೀ ಜಗತ್ತಿಗೇ ಗೊತ್ತಿರಬೇಕೆಂಬ ಹಂಬಲವೂ ನಿಜವೇ. ಹಾಗಾಗಿ ಇಂತಹ ಉಪಕರಣವೊಂದು ಮನುಷ್ಯ ಪ್ರಪಂಚದಲ್ಲಿ ಬಂದು ಈ ಪರಿಯ ಜನಪ್ರಿಯತೆಗೆ ಕಾರಣವಾಗಿದೆ. ಜೈ ಮೊಬೈಲ್!

ಈಗ ನಿಮ್ಮಲ್ಲಿ ಮೊಬೈಲ್ ಇದೆಯೇ ಎಂದು ಕೇಳುವ ಕಾಲವೇ ಅಲ್ಲ. ಎಷ್ಟಿದೆ ಎಂದು ಕೇಳುವ ಕಾಲ. ಯಾರ ಕೈನಲ್ಲಾದರೂ ಬೇಸಿಕ್ ಮಾಡಲ್ ಹುಡುಕಬೇಕು. ಅಧುನಿಕ ಅನೇಕ, ಅತ್ಯಾಧುನಿಕ ಹೇರಳ. ಬಡವರಿಂದ ಬಲ್ಲಿದರವರೆಗೆ ಬಹು ವಿದಧ ಮೊಬೈಲ್ ಗಳು. ನಿಮ್ಮಲ್ಲಿರುವ ಮೊಬೈಲ್ ಯಾವುದು? ನಿಮ್ಮ ಕನಸಿನ ಮೊಬೈಲ್ ಯಾವುದು? ಇರುವ ಹಳೆಯದರ ಬಗ್ಗೆ ಹೇಳಲು ಸಂಕೋಚವೇ? ಯಾವುದನ್ನು ಕೊಂಡೊಕೊಳ್ಳಲೀ ಎಂಬ ಸಂದೇಹವೇ?

ಯಾವುದರಲ್ಲಿ ಏನಿದೆ? ಫೋಟೊದಲ್ಲಿ ರೂಪ ನೋಡಿದರೆ ಒಳ್ಳಯದು... ಅಂತೆಲ್ಲ ನೀವು ಯೋಚಿಸುತ್ತಿದ್ದೀರಾ! ನಂಗೊತ್ತು. ಅದಕ್ಕೆ ನಮ್ಮ ವೆಬ್ ಸೈಟ್ ನ ಲೈಫ್ ಸ್ಟೈಲ್ ನಲ್ಲಿ ಮೊಬೈಲ್ ಸೆಕ್ಷನ್ ನೋಡಿ. ಬೇಕಾದ ಮಾಹಿತಿ ನಿಮಗೆ ಸಿಗುತ್ತದೆ. ಕನಸಿನ ಮೊಬೈಲ್ ಕೈಯಲ್ಲಿರುತ್ತದೆ. ಗೊತ್ತಾಯ್ತಲ್ಲ! ಇನ್ನೇಕೆ ತಡ... ರೆಗ್ಯುಲರ್ ಆಗಿ ಓದುತ್ತಿರಿ... ಮೊಬೈಲ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot