ನಿರೀಕ್ಷಿಸಿ! ಎಚ್ ಪಿ ಹೊಸ ಮೊಬೈಲ್ ಪ್ರಿ 3 ಮಾಸ್ಟರ್ ಪೀಸ್

Posted By: Staff

ನಿರೀಕ್ಷಿಸಿ! ಎಚ್ ಪಿ ಹೊಸ ಮೊಬೈಲ್ ಪ್ರಿ 3 ಮಾಸ್ಟರ್ ಪೀಸ್
ಬೆಂಗಳೂರು, ಜು. 12: ಜಗತ್ತಿನ ಕಂಪ್ಯೂಟರ್ ತಯಾರಿಕಾ ಅಗ್ರಗಣ್ಯ ಸಂಸ್ಥೆ ಹೆವ್ ಲೆಟ್ಟ್ ಪ್ಯಾಕರ್ಡ್ ಸ್ಮಾರ್ಟ್ ಫೋನ್ ಮತ್ತು ಕಮ್ ಪ್ಯೂಟಿಂಗ್ ಸೆಗ್ ಮೆಂಟ್ ಗಳಲ್ಲಿ ತನ್ನ ಛಾಪನ್ನು ಬಲವಾಗಿ ಮೂಡಿಸುತ್ತಿದೆ. ಈ ಕಂಪೆನಿಯಿಂದ ಹೊರ ಬಂದಿರುವ ಸ್ಮಾರ್ಟ್ ಫೋನ್ ಗಳನ್ನು ಜಗತ್ತಿನಲ್ಲೆಡೆ ಸೂಪರ್ ಎಂದು ಒಪ್ಪಿಕೊಂಡಾಗಿದೆ. ಈಗಾಗಲೇ ಸಾಕಷ್ಟು ಫೋನ್ ಗಳನ್ನು ಹೊರತಂದಿರುವ ಈ ಎಚ್ ಪಿ ಕಂಪೆನಿ ಸದ್ಯದಲ್ಲಿಯೇ ಪ್ರಿ 3 ಎಂಬ ಹೊಸ ಫೋನನ್ನು ಮಾರುಕಟ್ಟೆಗೆ ತರಲಿದೆ.


ಪ್ರಿ 3 ಇದು ಅತ್ಯಾಧುನಿಕ ಮೊಬೈಲ್ ಆಗಿದ್ದು ಪವರ್ ಫುಲ್ ಕ್ಯುಲ್ ಕಾಮ್ MSM 8x55(1.4 GHz) ಪ್ರೊಸೆಸರ್ ಹೊಂದಿದೆ. 512 MB RAM ಸೌಲಭ್ಯ ಹೊಂದಿರುವ ಇದು ಹೈ ಡೆಫನಿಷನ್ ಲೆಡ್ ಫ್ಲಾಶ್ ಆಟೋ ಫೋಕಸ್ ಕೆಮರಾ ಹೊಂದಿದೆ.

ಇದರಲ್ಲಿರುವ ವಿಶೇಷ ಸೌಲಭ್ಯಗಳು:
* ವೆಬ್ OS
* ಪವರ್ ಫುಲ್ ಪ್ರೊಸೆಸರ್
* 5 ಮೆಗಾ ಪಿಕ್ಸೆಲ್ ಕೆಮರಾ
* 3G
* Wi-Fi & ಬ್ಲೂ ಟೂಥ್
* 720p ವಿಡಿಯೋ ರೆಕಾರ್ಡಿಂಗ್
* ಎಫ್ ಎಮ್ ರೇಡಿಯೋ
* ಜಾವಾ

ಇಷ್ಟೆಲ್ಲ ವಿಶೇಷತೆಗಳಿರುವ ಇದಕ್ಕೆ ಮಾಸ್ಟರ್ ಫೀಸ್ ಎಂದೇ ಹೇಳಬಹುದು. ಪ್ರಸ್ತುತ ಇದು ಜಾಗತಿಕ ಮಾರುಕಟ್ಟೆಯಲ್ಲಿ 399 ಫೌಂಡ್ ದರದಲ್ಲಿ ದೊರೆಯುತ್ತಿದೆ. ಇಲ್ಲಿನ ರೂಗಳಲ್ಲಿ 28,000 ಆಗಬಹುದಾದ ಪ್ರಿ 3, ಸದ್ಯದಲ್ಲಿಯೇ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದೆ. ನನಗೂ ಒಂದು ಬೇಕು ಅಂತ ನಿಮಗೆ ಅನಿಸುತ್ತಿರಬಹುದು. ಹತ್ತಿರದ ಶೋ ರೂಂ ಮೇಲೆ ಕಣ್ಣಿಟ್ಟಿರಿ. ಬೇಗ ಕೊಂಡು ಹಾಯಾಗಿರಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot