ಬರುತ್ತಿದೆ ಎಲ್ ಜಿ ವಿಂಡೋಸ್ ಫೋನ್ 7 ಸ್ಮಾರ್ಟ್ ಫೋನ್

Posted By: Staff

ಬರುತ್ತಿದೆ ಎಲ್ ಜಿ ವಿಂಡೋಸ್ ಫೋನ್ 7 ಸ್ಮಾರ್ಟ್ ಫೋನ್
ಈಗಂತೂ ಬರೀ ಸ್ಮಾರ್ಟ್ ಫೋನ್ ಗಳದ್ದೇ ಭರಾಟೆ. ಅದರಲ್ಲಿ ಕಂಪನಿಗಳ ಮಧ್ಯೆ ಕಾದಾಟ ಬೇರೆ! ಇದರಿಂದ ಕಂಪೆನಿಗಳಿಗೆ ಲಾಭ ಇದೆಯಾದರೂ ಜೊತೆಗೆ ಗ್ರಾಹಕರಿಗಂತೂ ಸಖತ್ ಸುಗ್ಗಿ. ಕಡಿಮೆ ಬೆಲೆಯಲ್ಲಿ ಅಧಿಕ ಆಯ್ಕೆ ಸಾಧ್ಯತೆ. ಇದೀಗ ಎಲ್ ಜಿ ತರುತ್ತಿದೆ ವಿಂಡೋಸ್ ಫೋನ್ 7 ಸ್ಮಾರ್ಟ್ ಫೋನ್.


ದೊರಕಿರುವ ಮಾಹಿತಿಯಂತೆ ವಿಂಡೋಸ್ ಮ್ಯಾಂಗೋ ಆಧಾರಿತ ಎಲ್ ಜಿ ಫೋನ್ ಸದ್ಯದಲ್ಲಿಯೇ ಬರಲಿದ್ದು ಅದನ್ನು ಎಲ್ ಜಿ E906 ಎಂದು ಹೆಸರಿಸಲಾಗಿದೆ. ಎಲ್ ಜಿ ಆಪ್ಟಿಮಸ್ 7 ನಿಂದ ಆಗಿರುವ ಈ ಫೋನ್ ಹಿಟ್ ಆಗುವುದರಲ್ಲಿ ಸಂದೇಹವೇ ಇಲ್ಲ.

ಬರಲಿರುವ ಈ ಹೊಸ ಫೋನ್ 480* 800 ಪಿಕ್ಸೆಲ್ ಸ್ಕ್ರೀನ್ ರೆಸೊಲ್ಯೂಷನ್ ಹೊಂದಿದ್ದು ಬಹಶಃ ಮೈಕ್ರೋಸಾಪ್ಟ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 9 ಅಳವಡಿಸಲ್ಪಟ್ಟಿದೆ. ಇದು ಜಾಗತಿಕ ಬ್ರೌಸಿಂಗ್ ಅನುಭವ ನೀಡಲಿದೆ.

Wi-Fi ಸೌಲಭ್ಯ ಕೂಡ ಇದರಲ್ಲಿ ಅಡಕವಾಗಿದ್ದು ಎಲ್ಲಾ ಫೋನ್ ಗಳಲ್ಲಿ, ಸ್ಮಾರ್ಟ್ ಫೋನ್ ಗಳಲ್ಲಿ ಇರುವ ಎಲ್ಲಾ ಸೌ ಲಭ್ಯಗಳೂ ಇದರಲ್ಲಿರಲಿವೆ. ಈಗಿರುವ OS ಗಳನ್ನು ಇನ್ನೂ ಹೆಚ್ಚಿನ ಉನ್ನತೀಕರಣಕ್ಕೊಳಪಡಿಸಿ ಹೊಸ ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುವ ಯೋಜನೆಯಲ್ಲಿ ಮೊಬೈಲ್ ನ ಎಲ್ಲಾ ದೈತ್ಯ ಕಂಪೆನಿಗಳೂ ತೊಡಗಿವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot