ಹೊಸ ನೋಕಿಯಾ ಝೇಟಾ ಬರುತ್ತಿದೆ, ದಾರಿ ಬಿಡಿ

Posted By: Staff

ಹೊಸ ನೋಕಿಯಾ ಝೇಟಾ ಬರುತ್ತಿದೆ, ದಾರಿ ಬಿಡಿ
ಬೆಂಗಳೂರು, ಜು. 12: ನೋಕಿಯಾ ಮೊಬೈಲ್ ಕಂಪೆನಿಯ ಹೆಸರು ಕೇಳದವರ್ಯಾರು? ಅದರಲ್ಲೂ ಭಾರತದಲ್ಲಿ ನೋಕಿಯಾ ಹೆಸರು ಚಿರಪರಿಚಿತ. ಸಿಂಬಿಯನ್ OS ಆಧಾರಿತ ಹೊಸ ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ನೋಕಿಯಾ ಇದೀಗ ತರುತ್ತಿದೆ- ನೋಕಿಯಾ 700 (ಝೇಟಾ). 110x51x10mm ಅಳತೆ & 80 gm Wt ಹೊಂದಿ ಕ್ಯಾಂಡಿ ಬಾರ್ ಆಕಾರದಲ್ಲಿರುವ ಇದು 'ಥಿನ್ನೆಸ್ಟ್ ಫೋನ್' ಎಂದು ಹೆಸರಾಗಿದೆ.


ಈ ಹೊಸ ನೋಕಿಯಾ 700 ದ ವಿಶೇಷತೆಗಳು:
* ಸಿಂಬಿಯನ್ ಬೆಲ್ಲೆ OS
* 1 GHz ಮಲ್ಟಿಟಾಸ್ಕಿಂಗ್
* A 5 MP ಲೆಡ್ ಫ್ಲಾಶ್ ಕೆಮರಾ & 360*640 ರೆಸೊಲ್ಯೂಷನ್
* Wi-Fi ಬ್ಲೂಟೂಥ್
* 32 GB ವಿಸ್ತರಿಸಬಹುದಾದ ಮೆಮೊರಿ
* ಅಲ್ಟ್ರಾ ಥಿನ್ ಫೋನ್

ಇಷ್ಟೆಲ್ಲಾ ವಿಶೇಷತೆಗಳು ಇರುವ ಫೋನ್ ನಿಜವಾಗಿಯೂ ಇದೆಯಾ ಅನ್ನಿಸಿತ್ತಿದೆಯಾ? ಇದೆ ಖಂಡಿತ. ಆದರೆ ಯಾವಾಗ ಬಿಡುಗಡೆ ಹಾಗೂ ದರ ಎಷ್ಟು ಎಂಬುದನ್ನು ಕಂಪೆನಿ ಹೇಳಿಲ್ಲ. ಆದರೆ ಸದ್ಯದಲ್ಲಿಯೇ ಬರಲಿದೆ ಗ್ಯಾರಂಟಿ. ನೋಕಿಯಾ ಎಂದಾದರೂ ಸುಳ್ಳು ಹೇಳುತ್ತದೆಯೇ? ಜೇಬಿನಲ್ಲಿದ್ದರೂ ಹುಡುಕಾಡಬಹುದಾದ ಫೊನ್ ಕನಸನ್ನು ಇನ್ನು ನೀವು ಕಾಣಬಹುದು...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot