ಎರಡರಲ್ಲಿ ಯಾವುದು ನಿಮಗಿಷ್ಟ! ಹೇಳಿ ನೋಡೋಣ...

Posted By: Staff

ಎರಡರಲ್ಲಿ ಯಾವುದು ನಿಮಗಿಷ್ಟ! ಹೇಳಿ ನೋಡೋಣ...
ಬೆಂಗಳೂರು, ಜು. 12: ಖ್ಯಾತ ಮೊಬೈಲ್ ಕಂಪೆನಿ ಸ್ಯಾಮ್ ಸಂಗ್ ಮೊಬೈಲ್ ತಯಾರಿಕೆಯಲ್ಲಿ ಎತ್ತಿದ ಕೈ. ಆಗಾಗ ಹೊಸ ಅತ್ಯಾಧುನಿಕ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡುತ್ತಲೇ ಇರುತ್ತದೆ. ಈಗ ನಾವು, ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮೆಟ್ರೋ ಡ್ಯೂಸ್ C3322 ಹಾಗೂ ಚಾಟ್ 222 ಅವುಗಳ ನಡುವೆ ಸಾಮ್ಯತೆ-ಭಿನ್ನತೆ ಹಾಗೂ ಯಾರಿಗೆ ಗೆಲುವು ಸಿಗಬಹುದೆಂದು ತಿಳಿಯೋಣ


ಎರಡೂ ಫೋನ್ ಗಳು ಜಾವಾ OS ಹೊಂದಿ ಸಾಕಷ್ಟು ಆಧುನಿಕವಾಗಿವೆ, ಮಲ್ಟಿಮೀಡಿಯಾ ಸೌಲಭ್ಯವಿದೆ. ಸಾಕಷ್ಟು ಸಾಮ್ಯತೆ ಎರಡರಲ್ಲೂ ಇದೆ. ಚಾಟ್ 222 ಬಹು ಮೃದುವಾದ, ಮುದ್ದಾದ SMS ಮಾಡಲೇಬೆಕೆನಿಸುವ ಕೀಪ್ಯಾಡ್ ಹೊಂದಿದೆ. ಮೆಟ್ರೋ ಡ್ಯೂಸ್ C 3322 ಒಳ್ಳೆಯ ಸೌಂಡ್ ಸಿಸ್ಟಮ್ ಹೊಂದಿದೆ.
ಹೆಚ್ಚು ಕಡಿಮೆ ಎರಡರಲ್ಲೂ ಒಂದೇ ರೀತಿಯ ಸೌಲಭ್ಯಗಳಿರುವುದರಿಂದ ನಾವು ಅದರ ಬೆಲೆಯ ಕಡೆ ಗಮನಕೊಡಲೇಬೇಕು.

ಮೆಟ್ರೋ ಡ್ಯೂಸ್ C3322 ಬೆಲೆ ರು. 3800. ಆದರೆ ಚಾಟ್ 222 ನ ಬೆಲೆ ರು. 3500. ಹಾಗಾಗಿ ಸಹಜವಾಗಿಯೇ ಗ್ರಾಹಕರ ಕಣ್ಣು ಚಾಟ್ 222 ಮೇಲೆ ಬೀಳಲಿದೆ. ನೋಡಿ ನಿಮಗೆ ಯಾವುದಿಷ್ಟ! ಎರಡನ್ನೂ ನೋಡಿ ಒಂದನ್ನು ಆಯ್ಕೆ ಮಾಡುವುದಾದರೆ ಯಾವುದು ನಿಮ್ಮ ಆಯ್ಕೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot