ನೋಡಿ! ಹ್ಯುವಾಯ್ ನ ಹೊಸ ಸೋನಿಕ್ U8650 ಮೊಬೈಲ್

Posted By: Staff

ನೋಡಿ! ಹ್ಯುವಾಯ್ ನ ಹೊಸ ಸೋನಿಕ್ U8650 ಮೊಬೈಲ್
ಬೆಂಗಳೂರು, ಜು. 13: ಹ್ಯುವಾಯ್ ಈಗ ಕೇವಲ ದೂರಸಂಪರ್ಕ ಉಪಕರಣಗಳ ತಯಾರಿಕೆ ಕಂಪೆನಿ ಮಾತ್ರವಲ್ಲ, ದೊಡ್ಡ ಮೊಬೈಲ್ ಕಂಪೆನಿ ಕೂಡ ಆಗಿ ಬೆಳೆಯುತ್ತಿದೆ. ಕೇವಲ ವದಂತಿಯ ರೂಪದಲ್ಲಿದ್ದ ಮೊಬೈಲ್ ಬಿಡುಗಡೆಯ ವಿಷಯವೀಗ ಕಂಪೆನಿಯ ಕಡೆಯಿಂದಲೇ ಬಂದಿದೆ. ಕಡಿಮೆ ಬೆಲೆಯ ಹೊಸ ಫೋನ್ ಬರಿತ್ತಿದೆ, ಹೆಸರು- ಸೋನಿಕ್ U8650. ಆಂಡ್ರಾಯ್ಡ್ ಜಿಂಜರ್ ಬರ್ಡ್ ನಿಂದ ಸಮರ್ಥವಾಗಿ ಕಾರ್ಯನಿರ್ವಹಿಸಲಿರುವ ಇದು ತನ್ನ ಕಡಿಮೆ ಬೆಲೆ, ಹಾಗೂ ಹೆಚ್ಚು ಸೌಲಭ್ಯಗಳಿಂದ ಮನೆಮಾತಾಗಬಹುದು.


ಇದರ ವಿಶೇಷತೆಗಳು:
* ಆಂಡ್ರಾಯ್ಡ್ ಜಿಂಜರ್ ಬರ್ಡ್ OS
* 3.2 ಮೆಗಾ ಪಿಕ್ಸೆಲ್ ಕೆಮರಾ
* GPS ಸಹಕಾರ
* 3 G ಹಾಗೂ 2 G ನೆಟ್ ವರ್ಕ್
* GPRS ಮತ್ತು EDGE
* ಬ್ಲೂ ಟೂಥ್ & Wi-Fi ತಂತ್ರಜ್ಞಾನ
* ಜಾವಾ
* ಎಫ್ ಎಂ
* ಮ್ಯೂಸಿಕ್ & ವಿಡಿಯೋ ಪ್ಲೇಯರ್
* ಗೇಮ್ಸ್
* 512 MB ಆಂತರಿಕ, 32 GB ಗೆ ವಿಸ್ತರಿಸಬಹುದಾದ ಮೆಮೊರಿ

ಇಷ್ಡೆಲ್ಲ ವಿಶೇಷತೆಗಳಿರುವ ಇದರ ಬೆಲೆ ಕೇವಲ ರು. 17,500. ಇದು ಖಂಡಿತವಾಗಿಯೂ ಭಾರತದ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ಕೇಕ್ ನಂತೆ ಮಾರಾಟವಾಗುವುದರಲ್ಲಿ ಸಂದೇಹವೇ ಇಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot