ಇನ್ಟೆಕ್ಸ್ ಟ್ರೈ.ಡು ಹೊಸ ಮೊಬೈಲ್ ಬರಲಿದೆ, ಟ್ರೈ...

By Super
|
ಇನ್ಟೆಕ್ಸ್ ಟ್ರೈ.ಡು ಹೊಸ ಮೊಬೈಲ್ ಬರಲಿದೆ, ಟ್ರೈ...
ಬೆಂಗಳೂರು, ಜು. 14: ಪ್ರಖ್ಯಾತ ಕಂಪ್ಯೂಟರ್ ಸಂಸ್ಥೆ ಇನ್ಟೆಕ್ಸ್ ಕಂಪೆನಿ ಯಾರಿಗೆ ಗೊತ್ತಿಲ್ಲ! ಈಗ ಇನ್ಟೆಕ್ಸ್ ವಿಷಯ ಏನಪ್ಪಾ ಅಂದ್ರೆ 2009 ರಲ್ಲಿಯೇ 3 ಸಿಮ್ ಅಳವಡಿಸಲ್ಪಟ್ಟ ಮೊಬೈಲ್ ಪ್ರಪ್ರಥಮ ಬಾರಿಗೆ ಹೊರ ತಂದಿದ್ದ ಈ ಸಂಸ್ಥೆ ಇದೀಗ ಮತ್ತೆ ಅದೇ ರೀತಿ 3 ಸಿಮ್ ಗಳುಳ್ಳ ಇನ್ನೂ ಅತ್ಯಾಧುನಿಕ ಹೊಸ ಆವೃತ್ತಿಯ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಅದರ ಹೆಸರು ಇನ್ಟೆಕ್ಸ್ ಟ್ರೈ.ಡು.

ಈ ಇನ್ಟೆಕ್ಸ್ ಟ್ರೈ.ಡು ಮೊಬೈಲ್ ನಲ್ಲಿ ಏನೇನಿದೆ? 2 GSM ಹಾಗೂ 1 CDMA ಸಿಮ್ ಹ್ಯಾಂಡ್ ಸೆಟ್ ನಲ್ಲಿ ಅಡಕವಾಗಿದೆ. ಎರಡೂ ತಂತ್ರಜ್ಞಾನ ಇರುವುದರಿಂದ ಗ್ರಾಹಕರಿಗೆ ಬಹಳ ಅನುಕೂಲವಾಗಲಿದೆ. ಬಾರ್ ಸ್ಟೈಲ್ ನಲ್ಲಿರುವ ಇದು GPRS ಹಾಗೂ ಜಾವಾ ಸಹಕಾರ ಹೊಂದಿದೆ.

ಇದರಲ್ಲಿರುವ ವಿಶೇಷತೆಗಳು:
* ಬ್ಲೂ ಟೂಥ್
* ಮೊಬೈಲ್ ಟ್ರಾಕರ್
* ಆನ್ಸರಿಂಗ್ ಮಶಿನ್
* ಆಟೋ ಕಾಲ್ ರೆಕಾರ್ಡ್
* ಫೊನ್ ಬುಕ್ ವಿತ್ 1000 ಎನ್ಟ್ರೀಸ್
* ಡ್ಯುಯಲ್ ಮೆಮೊರಿ, ಹಾಗೂ 16 GB ಗೆ ವಿಸ್ತರಿಸಬಹುದಾದ ಕಾರ್ಡ್ ಸ್ಲಾಟ್
* 5.58 TFT ಸ್ಕ್ರೀನ್, 1.3 MP ಕ್ಯಾಮೆರಾ, 65 ಕಲರ್ಸ್, ವೆಬ್ ಕ್ಯಾಮ್
* MP4 & GP ಫೈಲ್ಸ್ & MP3, Wave, AMR ಗಳಿಗೆ ಸಪೋರ್ಟ್
* 3.5 MM ಜ್ಯಾಕ್
* ಇಂಗ್ಲಿಷ್ & ಹಿಂದಿ ಸಪೋರ್ಟರ್
* ಬೌಸರ್ ಸೌಲಭ್ಯ

ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿದ ಇದರ ಬೆಲೆ ಕೇವಲ ರು. 3750. ಮೊಬೈಲ್ ನಲ್ಲಿರುವ ಸೌಲಭ್ಯ ಹಾಗೂ ಸೌಂದರ್ಯಕ್ಕೆ ಇದು ನಿಜವಾಗಿಯೂ ಅತಿ ಕಡಿಮೆ ಬೆಲೆ. ಈ ಮೊಬೈಲ್ ಖಂಡಿತ ಬೇಕು ಅನಿಸುತ್ತಿದೆಯೇ? ಹಾಗಿದ್ದರೆ ನಿಮ್ಮ ಹಣದಲ್ಲಿ ಚಿಕ್ಕ ಭಾಗ ಈ ಮೊಬೈಲ್ ಕೊಳ್ಳುವುದಕ್ಕಿರಲಿ...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X