ಆಹಾ! ಟಾಗ್ ಹ್ಯೂಯರ್ ನ ಲಕ್ಸುರಿ ಫೋನ್ ಲಿಂಕ್ ಬರುತ್ತಿದೆ

Posted By: Staff

ಆಹಾ! ಟಾಗ್ ಹ್ಯೂಯರ್ ನ ಲಕ್ಸುರಿ ಫೋನ್ ಲಿಂಕ್ ಬರುತ್ತಿದೆ
ಬೆಂಗಳೂರು, ಜು. 13: ಮೊಬೈಲ್ ಬಿಸಿನೆಸ್ ಯಾವ ಪರಿ ಬೆಳೆಯುತ್ತಿದೆ ಎಂದರೆ ಇಲೆಕ್ಟ್ರಾನಿಕ್ಸ್ ಉದ್ಯಮದಲ್ಲಿರುವ ಎಲ್ಲರೂ ಮೊಬೈಲ್ ತಯಾರಿಕೆಗೆ ಇಳಿಯುತ್ತಿದ್ದಾರೆ. ಶ್ರೀಮಂತರನ್ನು ಗಮನದಲ್ಲಿಟ್ಟು ತಯಾರಿಸಲಾಗಿರುವ ಈ ಮೊಬೈಲ್ ಗೆ ಬೆಲೆಬಾಳುವ ಹರಳುಗಳು, ಚಿನ್ನ, ಪ್ಲಾಟಿನಂ ಗಳನ್ನು ಬೆಸೆದಿರುತ್ತಾರೆ. ನೋಡಲೂ ಸುಂದರ, ಗಣ್ಯವ್ಯಕ್ತಿಗಳ ಸಾಲಿಗೆ ಸೇರಲೂ ಸುಲಭ.


ಇದೀಗ ಪ್ರಪಂಚದ ಹೆಸರಾಂತ ವಾಚ್ ಕಂಪೆನಿ ಟಾಗ್ ಹ್ಯೂಯರ್ ' ಲಿಂಕ್ ' ಎನ್ನುವ ಹೆಸರಿನಲ್ಲಿ ಹೊಸ ಮೊಬೈಲನ್ನು ಮಾರುಕಟ್ಟೆಗೆ ಬಿಡುತ್ತಿದೆ. ಆದರೆ ಇದರ ಬೆಲೆ ಎಷ್ಟು ಗೊತ್ತೆ! ಬರೋಬ್ಬರಿ $ 6800, ಅಂದರೆ ರು. 3,12,500. ಇಷ್ಟು ಬೆಲೆಯ ಮೊಬೈಲ್ ಅಂದರೆ ಅದರ ವಿಶೇಷತೆಗಳು ಹೇಗಿರಬಹುದು ಊಹಿಸಿ. ಅರ್ಮಾನಿ ಜಾಕೆಟ್ಸ್, ರೋಲ್ಸ್ ರಾಯ್ ಕಾರ್ ನಲ್ಲಿ ಓಡಾಡುವ ಐಷಾರಾಮಿ ವರ್ಗಕ್ಕೆ ಇಂತಹ ಮೊಬೈಲ್ ಬೇಕೇ ಬೇಕಲ್ಲವೇ?

ಯುಎಸ್ ಬಿ ಪಿಸಿ ಸಿಂಕ್ ತಂತ್ರಜ್ಞಾನ, ಬ್ಲೂ ಟೂಥ್ ಹಾಗೂ WALN ಹೊಂದಿರುವ ಇದರಲ್ಲಿರುವ ವಿಶೇಷತೆಗಳು:
* 5 ಮೆಗಾ ಪಿಕ್ಸೆಲ್ ಕೆಮರಾ
* 3 G
* Wi-Fi & ಬ್ಲೂ ಡೂಥ್
* ಆಂಡ್ರಾಯ್ಡ್ ಫ್ರೋಯೋ OS
* ದುಬಾರಿ ಔಟರ್ ಕೇಸಿಂಗ್ಸ್
* 8 GB ವಿಸ್ತರಿಸಬಹುದಾದ ಮೆಮೊರಿ
* 6 ತಾಸುಗಳ ಬ್ಯಾಟರಿ ಟಾಕ್ ಟೈಮ್
ಎಲ್ಲಾ ಪ್ರಕ್ರಿಯೆ ಮುಗಿಸಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಲಿಂಕ್ ಎಂಬ ಈ ಲಗ್ಸುರಿ ಮೊಬೈಲ್ ನ್ನು ಜನರು ಯಾವ ರೀತಿಯಲ್ಲಿ ಸ್ವಾಗತಿಸುತ್ತಾರೆ, ಇದು ಎಷ್ಟರ ಮಟ್ಟಿಗೆ ಜನರ ಜೇಬನ್ನು ಸೇರುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot