ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು? ಸ್ಮಾರ್ಟ್ ಆಗಿ

Posted By: Staff

ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು? ಸ್ಮಾರ್ಟ್ ಆಗಿ
ಬೆಂಗಳೂರು, ಜು. 15: ಎಲ್ ಜಿ ಮತ್ತು ಸ್ಯಾಮ್ ಸಂಗ್ ಎರಡೂ ಕೂಡ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಖ್ಯಾತ ಕಂಪೆನಿಗಳೇ. ಈ ಮೊದಲು 3G ಸಾಮರ್ಥ್ಯದ ಫೋನ್ ಮಾರುಕಟ್ಟೆಗೆ ತಂದಿದ್ದ ಈ ಕಂಪೆನಿಗಳು ಇದೀಗ 4G & 5G ಮೊಬೈಲ್ ಮಾರುಕಟ್ಟೆಗೆ ತರಲಿವೆ. ಇವುಗಳಲ್ಲಿ ನಾವೀಗ ಎಲ್ ಜಿ ರೆವೊಲ್ಯೂಷನ್ 4 G ಮತ್ತು ಸ್ಯಾಮ್ ಸಂಗ್ ಇನ್ ಫ್ಯೂಸ್ 4 G ಅವುಗಳಲ್ಲಿ ಯಾವುದು ಉತ್ತಮ ಎಂದು ಅವುಗಳ ವಿಶೇಷತೆ ಹಾಗೂ ದರಕ್ಕೆ ಹೋಲಿಸಿ ನೋಡುವಾ.


ಮೊದಲನೆಯದಾಗಿ ಎರಡೂ ಸ್ಮಾರ್ಟ್ ಫೋನ್ಸ್. ಎರಡೂ ಕೂಡ ವಿನ್ಯಾಸದಲ್ಲಿ ಸೂಪರ್. ಯುವಜನತೆಯನ್ನು ಈ ಎರಡೂ ತಟ್ಟನೆ ಆಕರ್ಷಿಸಬಲ್ಲವು. 1.3 MP ಕ್ಯಾಮೆರಾ, ಆಟೋ ಫೋಕಸ್ ಲೆಡ್ ಫ್ಲಾಶ್ ಎರಡರಲ್ಲೂ ಕಾಮನ್.

ಎಲ್ ಜಿ ರೆವೊಲ್ಯೂಷನ್ 4 G ನಲ್ಲಿ 4.3 ಇಂಚ್ ಟಿಎಫ್ ಟಿ ಸ್ಕ್ರೀನ್, 5 MP ರೇರ್ ಕ್ಯಾಮೆರಾ ವಿತ್ 480*800 ರೆಸೊಲ್ಯೂಷನ್, ಜಿಂಜರ್ ಬ್ರೆಡ್ OS, 1 Ghz Qualcomm, 512 MB ಮೆಮೊರಿ ಹಾಗೂ ಆಂತರಿಕ ಮೆಮೊರಿ 6 GB. WLAN, DLNA, ಮತ್ತು ಬ್ಲೂಟೂಥ್ 3.0 ಎರಡರಲ್ಲೂ ಇದೆ.
ಇನ್ನು ಸ್ಯಾಮ್ ಸಂಗ್ ಇನ್ ಫ್ಯೂಸ್ 4 G ನ ವಿಷಯಕ್ಕೆ ಬಂದರೆ, 4.5 ಇಂಚ್ ನ ಆಮೋಲೆಡ್ ಸ್ಕ್ರೀನ್, 480*800 ರೆಸೊಲ್ಯೂಷನ್, ARM ಕಾರ್ಟೆಕ್ಸ್, 1.2 Ghz ಪ್ರೊಸೆಸರ್ ಸೌಲಭ್ಯಗಳಿವೆ.

ಎರಡರಲ್ಲೂ ಹೋಲಿಕೆ ಮಾಡಿದಾಗ ಎಲ್ ಜಿ ರೆವೊಲ್ಯೂಷನ್ 4 G ಗಿಂತ ಸ್ಯಾಮ್ ಸಂಗ್ ಇನ್ ಫ್ಯೂಸ್ 4 G ಉತ್ತಮ ಆಯ್ಕೆ ಎನಿಸುತ್ತದೆ. ಎರಡೂ ಕೂಡ ಗ್ರಾಹಕ ಸ್ನೇಹಿ ಆಗಿರುವುದರಿಂದ ನಿಮ್ಮ ಆಯ್ಕೆ ಯಾವುದು ಎಂಬುದನ್ನು ನೋಡಿ ನಿರ್ಧರಿಸಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot