ಮ್ಯಾಕ್ಸ್ MX349 & ಕಾರ್ಬನ್ ಬೂಮ್ ಬಾಕ್ಸ್ 2 ಶೋ

Posted By: Staff

ಮ್ಯಾಕ್ಸ್ MX349 & ಕಾರ್ಬನ್ ಬೂಮ್ ಬಾಕ್ಸ್ 2 ಶೋ
ಬೆಂಗಳೂರು, ಜು. 14: ಕೆಳ ಹಾಗೂ ಮಧ್ಯಮ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟು ಮೊಬೈಲ್ ತಯಾರಿಕೆಗೆ ತೊಡಗಿಕೊಂಡ ಕಂಪೆನಿ ಗಳು- ಮ್ಯೂಸಿಕ್ ಶೋ ಮ್ಯಾಕ್ಸ್ MX349 ಮತ್ತು ಕಾರ್ಬನ್ ಬೂಮ್ ಬಾಕ್ಸ್2. ಈ ಕಂಪೆನಿಗಳು ಕಡಿಮೆ ದರದ ಬೇಸಿಕ್ ಮಾದರಿಗಳಿಂದ ಹಿಡಿದು ಅತ್ಯಾಧುನಿಕ ಸ್ಮಾರ್ಟ್ ಪೋನ್ ತನಕ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಈಗ ನಾವಿಲ್ಲಿ, ಮಾರುಕಟ್ಟೆಯಲ್ಲಿರುವ ಎರಡೂ ಕಂಪೆನಿಗಳ ಮ್ಯೂಸಿಕ್ ಫೋನ್ ಗಳ ಬಗ್ಗೆ ತಿಳಿಯೋಣ.


ಭಾರತೀಯರ ಸಂಗೀತ ಪ್ರೀತಿಯನ್ನು ನೆಚ್ಚಿಕೊಂಡು ಮ್ಯಾಕ್ಸ್ ಕಂಪೆನಿ ' MX349' ಎಂಬ ಹೆಸರಿನಲ್ಲಿ ಹಾಗೂ ಕಾರ್ಬನ್ ಕಂಪೆನಿ ' ಬೂಮ್ ಬಾಕ್ಸ್ ' ಎಂಬ ಹೆಸರಿನ ಮೂಲಕ ಮಾರುಕಟ್ಟೆಗೆ ತಮ್ಮತಮ್ಮ ಮೊಬೈಲ್ ಬಡುಗಡೆಗೊಳಿಸಿವೆ. ಈ ಎರಡು ಕಂಪೆನಿಗಳ ಮೊಬೈಲ್ ಗಳು ಡ್ಯುಯಲ್ ಸಿಮ್, TFT ಸ್ಕ್ರೀನ್, ಬಾರ್ ಫಾರ್ಮ್ ಫ್ಯಾಕ್ಟರ್ ಟೈಪ್ ಹೊಂದಿದ್ದು, ಹಗುರವಾಗಿ ಜೇಬಿನ ಅಳತೆಗೆ ಹೊಂದಿಕೊಳ್ಳುವಂತಿದೆ. ಕಾರ್ಬನ್ ಬೂಮ್ ಬಾಕ್ಸ್2 ನಲ್ಲಿ 200MB ಆಂತರಿಕ ಮೆಮೊರಿಯಿದ್ದು 4GB ಗೆ ವಿಸ್ತರಿಸಬಹುದಾಗಿದೆ. ಅದೇ ರೀತಿ ಮ್ಯಾಕ್ಸ್ MX349 ಕೂಡ 4GB ಗೆ ವಿಸ್ತರಿಸಬಹುದಾದ ಮೆಮೊರಿ ಹೊಂದಿದ್ದು ಆಂತರಿಕವಾಗಿ 64GB ಹೊಂದಿದೆ.

ಮ್ಯಾಕ್ಸ್ MX349, 30*20mm ಲೌಟ್ ಸ್ಪೀಕರ್ ವಿತ್ ರೆಕಾರ್ಡಿಂಗ್ ಸೌಲಭ್ಯ, 3.5 mm ಆಡಿಯೋ ಔಟ್ ಪುಟ್ ಹೊಂದಿದೆ. ಆದರೆ ಕಾರ್ಬನ್ ಬೂಮ್ ಬಾಕ್ಸ್2 ಇದು 2.5mm ಆಡಿಯೋ ಜಾಕ್, ಲೌಡ್ ಸ್ಪೀಕರ್, ಎಫ್ ಎಂ ಜತೆಗಿದ್ದರೂ ರೆಕಾರ್ಡಿಂಗ್ ಸೌಲಭ್ಯ ಹೊಂದಿಲ್ಲ. ಇದು ಫಾಲಿಫೋನಿಕ್ ಟೋನ್ ಸಪೋರ್ಟ್ ಇರುವ ಫೋನ್. ಎರಡೂ ಕೂಡ ಸುಂದರವಾದ ಕ್ಯಾಮೆರಾ ಹೊಂದಿವೆ. ಕಾರ್ಬನ್ ಬೂಮ್ ಬಾಕ್ಸ್ 2, 2 MP ಕ್ಯಾಮೆರಾ ಹೊಂದಿದ್ದರೆ ಮ್ಯಾಕ್ಸ್ MX349 1.3 ಡಿಜಿಟಲ್ ಝೂಮ್ ಕ್ಯಾಮೆರಾ ಹೊಂದಿದೆ. ಕಾರ್ಬನ್ ಬೂಮ್ ಬಾಕ್ಸ್ 2, ಜಾವಾ ಸೌಲಭ್ಯ ಹೊಂದಿದೆ.

ಎರಡೂ ಮೊಬೈಲ್ ಗಳಲ್ಲಿ ಬ್ಲೂ ಟೂಥ್, USB ಕನೆಕ್ಟಿವಿಟಿ ಹಾಗೂ GPRS, SMS & MMS ಸೌಲಭ್ಯ ಇದೆ. ಇನ್ನು ದರಗಳು ಹೇಗಿವೆ ಎಂದರೆ ಮ್ಯಾಕ್ಸ್ MX349 ರು. 1950 ಹಾಗೂ ಕಾರ್ಬನ್ ಬೂಮ್ ಬಾಕ್ಸ್ 2 ರು. 2600. ಎರಡರಲ್ಲಿ ಹೋಲಿಕೆ ಮಾಡಿದಾಗ ಹೆಚ್ಚು ಮೆಮೊರಿ ಸಾಮರ್ಥ್ಯ ಹಾಗೂ ಜಾವಾ ಸಹಕಾರ ಇರುವ ಕಾರ್ಬನ್ ಬೂಮ್ ಬಾಕ್ಸ್ 2 ಇದು ಮ್ಯಾಕ್ಸ್ MX349 ಗಿಂತ ಉತ್ತಮ ಎನಿಸುತ್ತದೆ. ನಿಮಗೇನನಿಸುತ್ತದೆ? ನೋಡಿ ಹೇಳಿ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot