ಈ ಜೋಡಿಯಲ್ಲಿ ನಿಮಗ್ಯಾವುದಿಷ್ಟ? ನೋಡಿ ಹೇಳಿ...

Posted By: Staff

ಈ ಜೋಡಿಯಲ್ಲಿ ನಿಮಗ್ಯಾವುದಿಷ್ಟ? ನೋಡಿ ಹೇಳಿ...
ಬೆಂಗಳೂರು, ಜು. 14: ಸ್ಯಾಮ್ ಸಂಗ್ ಮತ್ತು ಎಚ್ ಟಿ ಸಿ, ಇವೆರಡೂ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಕಂಪೆನಿಗಳೇ. ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಿ ಬಿಡುವ ಮೀಲಕ ಮೊಬೈಲ್ ಕಂಪೆನಿಗಳ ನಡುವಿನ ಕಾದಾಟ ಈಗ ಸರ್ವೇಸಾಮಾನ್ಯ. ಈಗ ಮಾರುಕಟ್ಟೆಯಲ್ಲಿರುವ ಎರಡು ಮೊಬೈಲ್ ಗಳ ಬಗ್ಗೆ ನಾವು ವಿಶ್ಲೇಷಿಸ ಹೊರಟರೆ, ಗ್ರಾಹಕ ದೃಷ್ಟಿಯಿಂದ ನಮಗೆ ಯಾವುದು ಯಾವುದಕ್ಕಿಂತ ಹೆಚ್ಚು ಪ್ರಯೋಜನಕಾರಿ ಎಂಬುದು ತಿಳಿಯುತ್ತದೆ.;


ಸ್ಯಾಮ್ ಸಂಗ ತಂದಿದೆ ಡರ್ಟ್ ಹಾಗೂ ಎಚ್ ಟಿ ಸಿ ಯ ಉತ್ಪನ್ನ ಸೆನ್ಸೇಶನ್. ಸ್ಯಾಮ್ ಸಂಗ್ ನ ಡರ್ಟ್ ಆಂಡ್ರಾಯ್ಡ್ ಫ್ರೋಯೋ, 2.2 ಮೂಲಕ ಕಾರ್ಯ ನಿರ್ವಹಿಸುತ್ತದೆ. ಇಂಟರ್ ನೆಟ್ ಕೂಡ ಸುಲಲಿತವಾಗಿದೆ. ಆದರೆ ಸೆನ್ಸೇಶನ್, ಆಂಡ್ರಾಯ್ಡ್ ನ ಜಿಂಜರ್ ಬ್ರೆಡ್ ಆಧಾರಿತವಾಗಿದೆ. ಇದರಲ್ಲಿ ಮಲ್ಟಿಮೀಡಿಯಾ ತುಂಬ ಶ್ರೀಮಂತವಾಗಿದೆ.

ಸೆನ್ಸೇಶನ್ 4.3 ಟಚ್ ಸ್ಕ್ರೀನ್ ಹೊಂದಿದ್ದು ಡಾರ್ಟ್ (ಕೇವಲ 3.14) ಗಿಂತ ಉತ್ತಮವಾಗಿದೆ. ಸಂಪೂರ್ಣ ಮಲ್ಟಿಮೀಡಿಯಾ ಫೋನ್ ಆಗಿರುವ ಸೆನ್ಸೇಶನ್, SRS, DLNA ತಂತ್ರಜ್ಞಾನ ಹಾಗೂ ಎಲ್ಲಾ ಮೀಡಿಯಾ ಪಾರ್ಮೆಟ್ ಗಳನ್ನು ಹೊಂದಿದೆ. ಸ್ಯಾಮ್ ಸಂಗ್ ಡರ್ಟ್ ಯಾವುದೇ ಮಲ್ಟಿಮೀಡಿಯಾ ಹೊಂದಿಲ್ಲ. 3.5 ಆಡಿಯೋ ಜಾಕ್ ಹಾಗೂ ಮ್ಯೂಸಿಕ್ ಪ್ಲೇಯರ್ ಹಾಗೂ ವಿಡಿಯೋ ಪ್ಲೇಯರ್ ಹೊಂದಿದೆ. ಸೆನ್ಸೇಶನ್, 1 GB ಆಂತರಿಕ ಮೆಮೊರಿಯೊಂದಿಗೆ ವಿಸ್ತರಿಸಲು SD ಸ್ಲಾಟ್ ನೀಡುತ್ತದೆ. ಡಾರ್ಟ್ 512 MB ಆಂತರಿಕ ಮೆಮೊರಿ ಜೊತೆಗೆ 2 GB ಯಿಂದ 32 GB ಗೆ ವಿಸ್ತರಿಸಬಹುದಾದ ಹೊರ ಕಾರ್ಡ್ ಕೊಡುತ್ತದೆ. ಎರಡರಲ್ಲೂ ಸಾಮಾಜಿಕ ತಾಣಗಳು, ಯುಎಸ್ ಬಿ, WALN, ಹಾಗೂ ಗೂಗಲ್ ಲಭ್ಯ.

ಸೆನ್ಸೇಶನ್ 1520, ಹಾಗೂ ಡಾರ್ಟ್ 1200 mAh ಬ್ಯಾಟರಿ ಬ್ಯಾಕಪ್ ಹೊಂದಿವೆ. ಈ ಎರಡೂ ಫೋನ್ ಗಳಲ್ಲಿರುವ ವೈಶಿಷ್ಟ್ಯ ಗಳನ್ನು ಗಮನಿಸಿದಾಗ ಎಚ್ ಟಿ ಸಿ ಯ ಸೆನ್ಸೇಶನ್ ಸ್ಯಾಮ್ ಸಂಗ್ ನ ಡಾರ್ಟ್ ಗಿಂತ ಉತ್ತಮ ಎನಿಸುತ್ತದೆ. ಆದರೆ ದರ ಹೋಲಿಸಿದಾಗ ಡಾರ್ಟ್ ಸೆನ್ಸೇಶನ್ ನ ಅರ್ಧ ಬೆಲೆ ರು. 16,000 ಕ್ಕೆ ದೊರೆಯುತ್ತದೆ. ಈ ಎರಡರಲ್ಲಿ ನಿಮ್ಮ ಇಷ್ಟಕ್ಕೆ, ಬಜೆಟ್ ಗೆ ಯಾವುದು OK ಅಂತ ನೀವೇ ನಿರ್ಧರಿಸಿ.

;
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot