ಈ ಎರಡು ಸ್ಪೈಸ್ ಮೊಬೈಲ್ ಗಳಲ್ಲಿ ಯಾವುದು ಸೂಪರ್!

Posted By: Staff

ಈ ಎರಡು ಸ್ಪೈಸ್ ಮೊಬೈಲ್ ಗಳಲ್ಲಿ ಯಾವುದು ಸೂಪರ್!
ಬೆಂಗಳೂರು, ಜು. 14: ಮಾರುಕಟ್ಟೆಯಲ್ಲಿರುವ ಎರಡು ಸ್ಪೈಸ್ ಮೊಬೈಲ್ ಗಳ ಸಾಮ್ಯತೆ ಹಾಗೂ ಭಿನ್ನತೆಗಳನ್ನು ನಾವು ಪರಿಶೀಲಿಸಿ ಅವುಗಳಲ್ಲಿ ಯಾವುದು ಉತ್ತಮ ಎಂದು ತಿಳಿದುಕೊಳ್ಳಬಹುದು. ಇಲ್ಲಿರುವ ಸ್ಪೈಸ್ M 5350 ಈಲೈಟ್ ಮತ್ತು ಸ್ಪೈಸ್ M 5500 ಎರಡೂ ಕೂಡ ಬಜೆಟ್ ಪೋನ್ ಗಳು.;

ಸ್ಪೈಸ್ M 5350 ಈಲೈಟ್ ಮತ್ತು ಸ್ಪೈಸ್ M 5500 ಗಳೆರಡೂ ಡ್ಯುಯಲ್ GSM ಸಿಮ್ ಹೊಂದಿವೆ. ಸ್ಪೈಸ್ M 5500 ಟಚ್ ರೆಸಿಸ್ಟಿವ್ ಸ್ಕ್ರೀನ್ ಹೊಂದಿದ್ದರೆ ಸ್ಪೈಸ್ M 5350 ಈಲೈಟ್ ಆಲ್ಫಾ ನ್ಯೂಮರಿಕ್ ಕೀ ಪ್ಯಾಡ್ ಹೊಂದಿದೆ.

;

ಎರಡೂ ಫೊನ್ ಗಳಲ್ಲೂ ವಾಯ್ಸ್ ರೆಕಾರ್ಡಿಂಗ್ ಮತ್ತು ಪ್ರೈವಸಿ ಪ್ರೊಟೆಕ್ಷನ್ ಸೌಲಭ್ಯ ಇದೆ. ಈಲೈಟ್ ಮೊಬೈಲ್ ನಲ್ಲಿ SMS ಸೌಲಭ್ಯ ಇದೆ. ಇನ್ನು ಸಂಪರ್ಕದ ವಿಷಯಕ್ಕೆ ಬಂದರೆ ಈಲೈಟ್ ಮಾದರಿ ಬ್ಲೂಟೂಥ್ ಹೊಂದಿದೆ. ಮೊಡೆಮ್ ಹಾಗೂ ಕಂಪ್ಯೂಟರ್ ಕ್ಕೆ ಸಂಪರ್ಕ ಹೊಂದುವ ಹಾಗೂ USB ಸ್ಲಾಟ್ ಸೌಲಭ್ಯವಿದೆ.
ಇನ್ನು M 5500 110KB ಹಾಗೂ ವಿಸ್ತರಿಸಬಹುದಾದ ಹೊರ ಮೆಮೊರಿ ಹೊಂದಿದೆ. ಸ್ಪೈಸ್ M 5350 ಈಲೈಟ್, 0.3 MP ಕ್ಯಾಮೆರಾ, ಇನ ಬಿಲ್ಟ್ ಮ್ಯೂಸಿಕ್ ಪ್ಲೇಯರ್, ಎಫ್ ಎಂ ರೇಡಿಯೋ & ರೆಕಾರ್ಡಿಂಗ್ ಹೊಂದಿದೆ. ಆದರೆ M 5500, 1.3 MP ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್, ಎಫ್ ಎಂ ರೇಡಿಯೋ ಹೊಂದಿದೆ.

;

ಎರಡರ ಬ್ಯಾಟರಿ ಬ್ಯಾಕಪ್ ಒಂದೇ ರೀತಿಯದ್ದಾಗಿದೆ. ದಿನಕ್ಕೊಮ್ಮೆ ಚಾರ್ಜ್ ಮಾಡಲೇಬೆಕಾಗಿರುವುದು ವಿಶೇಷ ಅನ್ನೋಣವೇ? ಗುಣ-ವಿಶೇಷಗಳಲ್ಲಿ ಎರಡರಲ್ಲೂ ಅಂತಹ ವ್ಯತ್ಯಾಸ ಇಲ್ಲ ಅನ್ನಿಸಿದರೆ ದರಗಳ ಕಡೆ ನೋಡೋಣ. ಸ್ಪೈಸ್ M 5350 ಈಲೈಟ್ , ರು. 1800, ಮತ್ತು ಸ್ಪೈಸ್ M 5500 ರು. 3600. ಎರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರ ಕಷ್ಟ ಕಷ್ಟ! ಏಕೆಂದರೆ ಅವುಗಳಲ್ಲಿರುವ ವಿಶೇಷತೆಗಳಿಗನುಗುಣವಾಗಿ ಎರಡೂ ಕೂಡ ಉತ್ತಮವೇ ಎಂದು ಹೇಳದೆ ಬೇರೆ ದಾರಿಯಿಲ್ಲ.

;
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot