ಆಲ್ಕಾಟೆಲ್ ಹೊಸ ಹೆಜ್ಜೆ OT 890 ಯೊಂದಿಗೆ OT 891

Posted By: Staff

ಆಲ್ಕಾಟೆಲ್ ಹೊಸ ಹೆಜ್ಜೆ OT 890 ಯೊಂದಿಗೆ OT 891
ಬೆಂಗಳೂರು, ಜು. 15: ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ನಿಧಾನವಾಗಿ ತನ್ನ ಜಾಲವನ್ನು ಹರಡುತ್ತಾ ಮಾರಾಟದಲ್ಲಿ ಚೇತರಿಕೆಯನ್ನು ಕಂಡುಕೊಳ್ಳುತ್ತಿದೆ, ಆಲ್ಕಾಟೆಲ್. ಭಾರತದಲ್ಲಿ ಈಗಾಗಲೇ ಇರುವ OT 890 ಅಲ್ಲದೇ ಹೊಸ ಮೊಬೈಲ್ OT 891 ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಈ ಎರಡೂ ಕೂಡ ಸ್ಮಾರ್ಟ್ ಫೋನ್ ಕೆಟಗರಿಯದಾಗಿದ್ದು ಸಾಮಾನ್ಯ ಮಲ್ಟಿಮೀಡಿಯಾ ಫೋನ್ ಗಳು. ಸುಂದರ ವಿನ್ಯಾಸ, ಹಾಗೂ ಆಕಾರ ಎರಡೂ ಹೊಂದಿವೆ. 2.8 ಇಂಚ್ TFT ಸೆನ್ಸೆಟಿವ್ ಟಚ್ ಸ್ಕ್ರೀನ್, ರೆಸೊಲ್ಯೂಷನ್ 320*240 ಪಿಕ್ಸೆಲ್ಸ್. ಅಗತ್ಯವಿರುವ ಎಲ್ಲಾ ವಿಡಿಯೋ, ಆಡಿಯೋ ಫಾರ್ಮ್ಯಾಟ್ ಗಳನ್ನು ಎರಡೂ ಹೊಂದಿದ್ದು, MP3, MP4, AVI, WAV, WMV, AAC+ 3.5mm ಹೆಡ್ ಜಾಕ್ ಹೊಂದಿವೆ.

ಆಧುನಿಕ ಸ್ಮಾರ್ಟ್ ಮೊಬೈಲ್ ಗಳಲ್ಲಿರುವ ಸಂಪರ್ಕದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿವೆ. OT 890 ಇದು ಹೊಂದದೇ ಇರುವ ಹೈ ಸ್ಪೀಡ್ 3 G ಇಂಟರ್ ನೆಟ್ ಕನೆಕ್ಷನ್ OT 891 ಹೊಂದಿದೆ.

ಎರಡೂ GPRS & ಬ್ಲೂ ಟೂಥ್ ನೊಂದಿಗೆ Wi-Fi ಸೌಲಭ್ಯ ಹೊಂದಿದೆ. ಎರಡೂ ಕೂಡ ಆಂಡ್ರಾಯ್ಡ್ ಈಕ್ಲೇರ್ OS ನಿಂದ ಕಾರ್ಯನಿರ್ವಹಿಸಲಿದ್ದು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿವೆ. 150 MB ಇಂಟರ್ ನಲ್ ಹಾಗೂ SD ಕಾರ್ಡ್ ಮೂಲಕ 16 GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಹೊಂದಿದೆ.

ಇನ್ನು ಬೆಲೆಯ ವಿಷಯಕ್ಕೆ ಬಂದರೆ, OT 980- ರು. 10, 500 ಹಾಗೂ OT 891 ಬೆಲೆ ತಿಳಿದಿಲ್ಲ. ಆದರೂ ಇವುಗಳಲ್ಲಿ ತೀರಾ ವ್ಯತ್ಯಾಸವೇನೂ ಇರಲಾರದೆಂದು ನಾವು ಊಹಿಸಬಹುದು. ಇಂತ ಒಳ್ಳೆಯ ಫೋನ್ ನಿಮಗೆ ಬೇಡವೇ. ಶೀಘ್ರದಲ್ಲಿ ಬರಲಿದೆ, ನೋಡಿ ಖರೀದಿಸಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot