ಎಲ್ ಜಿ ಮೊಬೈಲ್ ಚಿತ್ತ ಈಗ ಆಟದತ್ತ

By Super
|
ಎಲ್ ಜಿ ಮೊಬೈಲ್ ಚಿತ್ತ ಈಗ ಆಟದತ್ತ
ಬೆಂಗಳೂರು, ಜು. 15: ಆಟ ಆಡುವ ಹುಚ್ಚು ಯಾರಿಗಿಲ್ಲ ಹೇಳಿ? ಬೇರೆ ಬೇರೆ ವಯಸ್ಸಿನವರದು ಬೇರೆ ಬೇರೆ ಆಟ ಅಷ್ಟೇ! ಈಗಂತೂ ಮೊಬೈಲ್ದೇ ಕಾಲ. ಹೊಸ ಹೊಸ ಕಂಪೆನಿಗಳು ಸಾಕಷ್ಟು ಗೇಮಿಂಗ್ ಆಧಾರಿತ ಫೊನ್ ಗಳನ್ನು ಮಾರುಕಟ್ಟೆಗೆ ತಂದಿವೆ. ಈದೀಗ ಪ್ರಖ್ಯಾತ ಮೊಬೈಲ್ ಕಂಪೆನಿ ಎಲ್ ಜಿ ಆಪ್ಟಿಮಸ್ 3D ಎಂಬ ಹೆಸರಿನಲ್ಲಿ ಗೇಮಿಂಗ್ ತರುತ್ತಿದೆ.

ಗ್ಯಾಸ್ ನ ಯಾವುದೇ ಸಹಾಯವಿಲ್ಲದೇ 3D ಡಿಸ್ ಪ್ಲೇ ಇರುವ ಮೊಟ್ಟಮೊದಲ ಮೊಬೈಲ್ ಎಲ್ ಜಿ ಯದೇ. ವ್ಹಾ! ಎನ್ನಲೇ ಬೇಕು. ಈ ಫೋನ್ 17 ಸ್ಟಿರಿಯೋ ಸ್ಕೋಪಿಕ್ 3D ಅಥವಾ S-3D ಫುಲ್ ವರ್ಷನ್ ಗೇಮ್ ಗಳನ್ನು ಹೊಂದಿದೆ. 1 GHz ಪ್ರೊಸೆಸರ್, ಆಂಡ್ರಾಯ್ಡ್ 2.2 ಫ್ರೋಯೋ OS & ಸೀಮ್ ಲೆಸ್ 3D ಗ್ಲಾಸ್ ಗಳು ಇವೆಲ್ಲ ಇದೆ.

2D ಗೇಮ್ ಗಳನ್ನು 3D ಗೆ ಬದಲಾಯಿಸಬಲ್ಲ ಇನ್ನೊಂದು ಮೊಬೈಲ್ ನ್ನು ಎಲ್ ಜಿ ಶೀಘ್ರದಲ್ಲೇ ತರಲಿದೆ. ಫ್ರೀ ಡೌನ್ ಲೋಡ್ ಮೂಲಕ ಆಪ್ಟಿಮಸ್ 3D ಗೆ ತರಬಹುದು. ಸದ್ಯಕ್ಕೆ ಇದು ಕೇವಲ US ಮಾರ್ಕೆಟ್ ನಲ್ಲಿ ಮಾತ್ರ ಲಭ್ಯವಿದ್ದು ಅತಿ ಶೀಘ್ರದಲ್ಲಿ ಭಾರತಕ್ಕೆ ಬರಲಿದೆ.

ಆಂಡ್ರಾಯ್ಡ್ ಕ್ರಾಂತಿಯ ನಂತರ ಇದೀಗ ಪ್ರಾರಂಭವಾಗಲಿದೆ ಆಪ್ಟಿಮಸ್ 3D ಕ್ರಾಂತಿ. ಸದ್ಯಕ್ಕೆ ಇದರ ಬೆಲೆ ರು. 22,500 ಆಗಿದ್ದು ಪ್ರಪಂಚದಲ್ಲೆಲ್ಲ ಸಾಕಷ್ಟು ಜನಪ್ರಿಯವಾಗುವ ನಿರೀಕ್ಷೆ ಇದೆ. ನಿಮಗೂ ಬೇಕೆ? ಸದ್ಯದಲ್ಲಿಯೇ ಬರಲಿದೆ, ಚಿಂತಿಸಬೇಡಿ. ಕೊಳ್ಳಲು ಇಂದೇ ನಿರ್ಧರಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X