Subscribe to Gizbot

ಮೊಬೈಲ್ ವಾರ್: ಸ್ಯಾಮ್ ಸಂಗ್ ಹಾಗೂ ಮೋಟೋರೊಲಾ

Posted By: Staff

ಮೊಬೈಲ್ ವಾರ್: ಸ್ಯಾಮ್ ಸಂಗ್ ಹಾಗೂ ಮೋಟೋರೊಲಾ
ಬೆಂಗಳೂರು, ಜು. 15: ಜಗತ್ತಿನ ಪ್ರಮುಖ ಮೊಬೈಲ್ ಕಂಪೆನಿಗಳಾದ ಸ್ಯಾಮ್ ಸಂಗ್ ಹಾಗೂ ಮೋಟೋರೊಲಾ ಮತ್ತೆ ಮಾರುಕಟ್ಟೆ ವಾರ್ ಗೆ ಇಳಿದಿವೆ. ಈಗ ರೇಸ್ ನಲ್ಲಿರುವುದು ಸ್ಯಾಮ್ ಸಂಗ್ ಗೆಲಾಕ್ಸಿ S2 ಹಾಗೂ ಮೋಟೋರೊಲಾ XT 720.


ಎರಡೂ ಕಂಪೆನಿಗಳು ಹೈ ಎಂಡ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿವೆ. ಎರಡೂ ಮೊಬೈಲ್ ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇದೆ. ಗೆಲಾಕ್ಸಿ S2, 1080p ವಿಡಿಯೋ ಡೆಫ್ ನಿಷನ್ ಹೊಂದಿದ್ದರೆ XT720 ಕೇವಲ 720p ಹೊಂದಿದೆ. ಗೆಲಾಕ್ಸಿ S2, 2 GB ಆಂತರಿಕ ಮೆಮೊರಿ ಹೊಂದಿದ್ದರೆ XT720 ಇದು 256 MB ಹೊಂದಿದೆ. ಗೆಲಾಕ್ಸಿ S2 ಮೋಟೋರೊಲಾಗಿಂತ ಹೆಚ್ಚು ಶಕ್ತಯುತವಾದ ಪ್ರೊಸೆಸರ್ ಹೊಂದಿದೆ.

ಸ್ಯಾಮ್ ಸಂಗ್ 3G ಡಾಟಾ ಟ್ರಾನ್ಸ್ ಪರ್ ರೇಟ್ 21 Mbps ಇದ್ದು ಮೋಟೋರೊಲಾ ಕೇವಲ 14 Mbps ಇದೆ. ಉಳಿದಂತೆ ಕ್ಯಾಮೆರಾ Wi-Fi, GPRS ಎರಡರಲ್ಲೂ ಇದೆ. ವಿಶೇಷವೆಂದರೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳು ಎರಡರಲ್ಲೂ ಇರುವುದರಿಂದ ಪ್ರತಿಯೊಂದನ್ನೂ ತುಲನೆಮಾಡುವ ಅಗತ್ಯವಿಲ್ಲ. ಇನ್ನು ದರವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಸ್ಯಾಮ್ ಸಂಗ್ ಗೆಲಾಕ್ಸಿ ರು. 27,500, ಹಾಗೂ ಮೋಟೋರೊಲಾ ರು. 21,650. ಬೆಲೆ ಬಾಳುತ್ತವೆ.

ಈ ಎರಡರಲ್ಲಿ ಮೋಟೋರೊಲಾ ವಿಶೇಷತೆಗಳಲ್ಲಿ ಸ್ಯಾಮಸ ಸಂಗ್ ಅತೀ ಹತ್ತರವಿದ್ದರೂ ದರ 6000 ರು. ಕಡಿಮೆ ಇರುವುದರಿಂದ ಖಂಡಿತವಾಗಿಯೂ ಮೋಟೋರೊಲಾ XT 720 ಇದು ಸ್ಯಾಮ್ ಸಂಗ್ ಗೆಲಾಕ್ಸಿ S2 ಗಿಂತ ಉತ್ತಮ ಆಯ್ಕೆ ಎಂದು ಹೇಳಬಹುದು. ಇನ್ನು ನಿಮ್ಮ ಆಯ್ಕೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot