Home
ಮೊಬೈಲ್

ಮೂರು ಸಿಮ್ ನ 2 ಫೋನ್ ಗಳಲ್ಲಿ ನಿಮ್ಮ ಆಯ್ಕೆ?

By Super
ಮೂರು ಸಿಮ್ ನ 2 ಫೋನ್ ಗಳಲ್ಲಿ ನಿಮ್ಮ ಆಯ್ಕೆ?
ಬೆಂಗಳೂರು, ಜು. 15: ಭಾರತೀಯ ಮಾರುಕಟ್ಟೆಯಲ್ಲಿ 2 ಸಿಮ್ ಗಳುಳ್ಳ ಫೋನ್ ಹೊಸದೇನೂ ಅಲ್ಲ. ಇದೀಗ ದೇಸಿ ಕಂಪೆನಿಗಳಾದ ಇನ್ ಟೆಕ್ಸ್ ಮತ್ತು ಟಿ ಸಿರೀಸ್ 2 ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಅವು- ಇನ್ ಟೆಕ್ಸ್ ಟ್ರೈ ಡು ಮತ್ತು ಟಿ-ಪ್ಲೇ 333 ಮೂರು ಸಿಮ್ ಮಾದರಿಗಳು.

ಇವೆರಡೂ ಕೂಡ 3 ಸಿಮ್ ಹೊಂದಿದ್ದು ಸ್ಮಾರ್ಟ್ ಫೋನ್ ಗಳಾಗಿವೆ. ಸ್ಲಿಮ್ ಬಾರ್ ಆಕಾರ ಹೊಂದಿವೆ. ಗಾತ್ರ, ಗುಣ-ವಿಶೇಷತೆಗಳಲೆಲ್ಲಾ ಒಂದನ್ನೊಂದು ಸಾಕಷ್ಟು ಹೋಲುತ್ತವೆ. ಪ್ಲೇ 3 1100 mAh ಹಾಗೂ Tri.Do 1800 mAh ಬ್ಯಾಟರಿ ಸಾಮರ್ಥ್ಯ ಹೊಂದಿವೆ.

ಮನೋರಂಜನೆಯ ಕಡೆ ಬಂದರೆ ಟ್ರೈಡು ಪ್ಲೇ 333 ಗಿಂತ ಉತ್ತಮ. ಮ್ಯೂಸಿಕ್ ಕಂಪೆನಿಯದಾದರೂ ಪ್ಲೇ 333 ಚೆನ್ನಾಗಿಲ್ಲದಿರುವುದು ನಿಜವಾಗಿಯೂ ಆಶ್ಚರ್ಯ ತರುತ್ತಿದೆ. ಉಳಿದೆಲ್ಲಾ ವಿಷಯಗಳಲ್ಲಿ ಎರಡೂ ಫೋನ್ ಗಳಲ್ಲಿ ಸಾಕಷ್ಟು ಸಾಮ್ಯತೆಗಳಿರುವುದರಿಂದ ಹೆಚ್ಚೇನೂ ಹೇಳಬೇಕಾಗಿಲ್ಲ.

ಆದರೆ ಟ್ರೈಡು, ಕೆಲವೊಂದು ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ. ಆಟೋ ಕಾಲ್ ರೆಕಾರ್ಡಿಂಗ್ & ಅನ್ಸರಿಂಗ್ ಮಶಿನ್, 3.5 mm ಆಡಿಯೋ ಜಾಕ್, ಟಾರ್ಚ್ ಲೈಟ್ ಮತ್ತು ಮೊಬೈಲ್ ಟ್ರಾಕರ್ ಸೌಲಭ್ಯ. ನಾವು ಯಾವ ರೀತಿಯಲ್ಲಿ ನೋಡಿದರೂ ಎರಡೂ ಕೂಡ ಒಳ್ಳೆಯದು ಎಂದೇ ಅನಿಸುತ್ತದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+