ನೋಡಿ ಈ ಜೋಡಿಯ ಸೌಂದರ್ಯ ಸ್ಪರ್ಧೆ: ಎನಿದು ಮೋಡಿ!

Posted By: Staff

ನೋಡಿ ಈ ಜೋಡಿಯ ಸೌಂದರ್ಯ ಸ್ಪರ್ಧೆ: ಎನಿದು ಮೋಡಿ!
ಬೆಂಗಳೂರು, ಜು. 17: ಈಗ ಎಲ್ಲೆಲ್ಲೂ ಮೊಬೈಲ್ ಕಾಲ. ಮೊಬೈಲ್ ಮಾರುಕಟ್ಟೆಯಲ್ಲಂತೂ ಹೊಸ ಫೋನ್ ಗಳದ್ದೇ ಭರಾಟೆ. ಅವುಗಳಲ್ಲಿ ಮೈಕ್ರೋ ಮ್ಯಾಕ್ಸ್ ಹಾಗೂ ಮ್ಯಾಕ್ಸ್ ಕಂಪೆನಿಗಳು ಕೂಡ ಸ್ಪರ್ಧಿಗಳೇ. ಈಗ ನಾವಿಲ್ಲಿ ಮೈಕ್ರೋ 'ಮ್ಯಾಕ್ಸ್ ವ್ಯಾನ್ ಗೋ X450' & 'ಮ್ಯಾಕ್ಸ್ ವಿಸ್ಟಾ' ಅವುಗಳ ಅಧ್ಯಯನ ಮಾಡಿ ಯಾವುದು ಬೆಸ್ಟ್ ಅಂತ ತಿಳಿದುಕೊಳ್ಳೋಣ.

ಎರಡೂ ಮೊಬೈಲ್ ಗಳು ಚೆನ್ನಾಗಿಯೇ ಇವೆ. ವ್ಯಾನ್ ಗೋ ಅರ್ಟ್ ಚೆನ್ನಾಗಿದೆ. ಸೂರ್ಯಕಾಂತಿಯ ಬಣ್ಣದಲ್ಲಿ ಕಂಗೊಳಿಸುತ್ತಿರುವ ಇದು ಎಂತವರನ್ನೂ ಥಟ್ಟನೆ ಸೆಳೆಯುವಂತಿದೆ. ವಿಸ್ಟಾ ಹುಡುಗಿಯರನ್ನು ಆಕರ್ಷಿಸಬಲ್ಲ ನಯ ನಾಜೂಕು ಹೊಂದಿದೆ. ಪಿಂಕ್ ಕಲರ್ ಹಾಗೂ ಬಬ್ಲಿ ಬಬ್ಲಿಯಾಗಿರುವ ಇದು ಮಹಿಳೆಯರಿಗೆ ಅಚ್ಚು-ಮೆಚ್ಚು.

ಎರಡೂ ಕೂಡ ಮಲ್ಟಿಮೀಡಿಯಾ ಕಡೆ ಒಳ್ಳೆ ಸೌಲಭ್ಯ ಹೊಂದಿವೆ. MP3, MP4, AVI, WAV, AAC+ ಎರಡರಲ್ಲೂ ಇದೆ.
ಡ್ಯುಯಲ್ ಸಿಮ್, ಅತ್ಯಾಧುನಿಕ ಆಡಿಯೋ ವೀಡಿಯೋ ಸೌಲಭ್ಯ ಎರಡರಲ್ಲೂ ಇದೆ. ವಿಸ್ಟಾದಲ್ಲಿ 3.2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಆದರೆ ವ್ಯಾನ್ ಗೋ ದಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಮಾತ್ರ ಇದೆ.
GPRS, USB ಕನೆಕ್ಟಿವಿಟಿ, SD ಕಾರ್ಡ್ ಮೂಲಕ 8 GB ಗೆ ವಿಸ್ತರಿಸಬಹುದಾದ ಮೆಮೊರಿ ಇದೆ. ವಿಸ್ಟಾದಲ್ಲಿ ಫೇಸ್ ಬುಕ್ ಮತ್ತು ಈ-ಬುಡ್ಡಿಗೆ ವೇಗವಾಗಿ ಸಂಪರ್ಕ ಕಲ್ಪಿಸಬಲ್ಲ ಸೌಲಭ್ಯದೊಂದಿಗೆ ಎಲ್ಲವೂ ಅತ್ಯಾಧುನಿಕವಾಗಿದೆ. ಬೆಲೆ, ವ್ಯಾನ್ ಗೋ ರು. 3400, ಹಾಗೂ ವಿಸ್ಟಾ ರು. 3500. ಎರಡರಲ್ಲಿ ಸೌಲಭ್ಯದ ದೃಷ್ಟಿಯಿಂದ ವಿಸ್ಟಾ ಚೆನ್ನಾಗಿದೆ ಎನ್ನಿಸಿದರೂ ವ್ಯಾನೋ ಗೋ ದ ಸೆಕ್ಸೀ ಲುಕ್ ನ ಮುಂದೆ ವಿಸ್ಟಾ ಡಲ್ ಎನಿಸುತ್ತದೆ.
ಮೊಬೈಲ್ ಗಳಲ್ಲೂ ಇದೆ ಸೌಂದರ್ಯ ಸ್ಪರ್ಧೆ. ಲೋಕೋ ಭಿನ್ನ ರುಚಿಃ ಅಲ್ಲವೇ! ನಿಮಗ್ಯಾವುದಿಷ್ಟ ಹೇಳಿ! ನಿಮ್ಮವರಿಗೆ ನೀವು ಯಾವುದನ್ನು ಕೊಡಿಸುತ್ತೀರಿ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot