ಎಲ್ ಜಿ ಥ್ರಿಲ್ & ಸ್ಯಾಮ್ ಸಂಗ್ ಎಕ್ಸಿಬಿಟ್ : ಜಯ ಯಾರಿಗೆ?

Posted By: Staff

ಎಲ್ ಜಿ ಥ್ರಿಲ್ & ಸ್ಯಾಮ್ ಸಂಗ್ ಎಕ್ಸಿಬಿಟ್ : ಜಯ ಯಾರಿಗೆ?
ಬೆಂಗಳೂರು, ಜು. 17: ಎಲ್ ಜಿ ಹಾಗೂ ಸ್ಯಾಮ್ ಸಂಗ್ ಎರಡೂ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಚಿರಪರಿಚಿತ ಹೆಸರು. ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಮಾಡಿರುವ ಈ ದೈತ್ಯ ಕಂಪೆನಿಗಳು 4G ಮೊಬೈಲ್ ಗಳನ್ನೂ ಕೂಡ ಬಿಡುಗಡೆ ಮಾಡಿವೆ. ಇದೀಗ ನಾವು ಎಲ್ ಜಿ ಥ್ರಿಲ್ & ಸ್ಯಾಮ್ ಸಂಗ್ ಎಕ್ಸಿಬಿಟ್ ನಡುವಿನ ಯುದ್ಧದಲ್ಲಿ ಗೆಲ್ಲೋರು ಯಾರು ಎಂದು ನೋಡೋಣ.

ಬರಲಿರುವ ಈ ಎರಡೂ ಫೋನ್ ಗಳು 4G ಆಗಿರುವುದು ವಿಶೇಷ. ಎರಡೂ ದೊಡ್ಡ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದ್ದರೂ ಥ್ರಿಲ್ ಎಕ್ಸಿಬಿಟ್ ಗಿಂತ ದೊಡ್ಡದಿದೆ ಹಾಗೂ 3D ಸ್ಕ್ರೀನ್ ಹೊಂದಿದೆ. ಕ್ಯಾಮೆರಾ ವಿಷಯಕ್ಕೆ ಬಂದರೂ ಕೂಡ ಥ್ರಿಲ್ ಎಕ್ಸಿಬಿಟ್ ಗಿಂತ ಸಾಕಷ್ಡು ಮುಂದೆ ನಿಲ್ಲುತ್ತದೆ.

ಎಕ್ಸಿಬಿಟ್ ಕೇವಲ 3 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದ್ದರೆ ಥ್ರಿಲ್ 5 ಮೆಗಾ ಪಿಕ್ಸೆಲ್ ಹೊಂದಿದೆ. ವಿಡಿಯೋ ರೆಕಾರ್ಡಿಂಗ್ ಕೂಡ ಎಕ್ಸಿಬಿಟ್ VGA ಅವಲಂಬಿಸಿದ್ದರೆ ಥ್ರಿಲ್ 1080p ವಿಡಿಯೋ ರೆಕಾರ್ಡಿಂಗ್ ನೀಡಬಲ್ಲುದು. ಬ್ಲೂ ಟೂಥ್, Wi-Fi, GPRS ಇವು 2ರಲ್ಲೂ ಇದೆ. ಎಕ್ಸಿಬಿಟ್ ಹೈಯ್ ಡಾಟಾ ಟ್ರಾನ್ಸ್ ಪರ್ ಸ್ಪೀಡ್ ಹೊಂದಿದೆ.

ಇನ್ನು MP3, MP4, WAV, WMV ಹಾಗೂ 3.5 mm ಹೆಡ್ ಫೋನ್ ಜಾಕ್, ಎಫ್ ಎಂ ಸ್ಟೀರಿಯೋ ರೇಡಿಯೋ ಎರಡರಲ್ಲೂ ಇದೆ. ಉಳಿದೆಲ್ಲ ಸಾಮಾನ್ಯ ವಿಶೇಷತೆಗಳು ಹೊಸ ಎರಡರಲ್ಲೂ ಇದೆ. ಸದ್ಯಕ್ಕೆ ದರಗಳ ಬಗ್ಗೆ ತಿಳಿದಿಲ್ಲ. ಒಂದೊಮ್ಮೆ 2ರ ಬೆಲೆಯೂ ತೀರಾ ಸಮೀಪವಿದ್ದರೆ ಸ್ಯಾಮ್ ಸಂಗ್ 'ಎಕ್ಸಿಬಿಟ್' ಗಿಂತ ಎಲ್ ಜಿ 'ಥ್ರಿಲ್' ಉತ್ತಮ ಆಯ್ಕೆ ಎನ್ನಬಹುದು. ಅತಿ ಶೀಘ್ರದಲ್ಲಿ ಬರುತ್ತಿದೆ, ಕೊಂಡು ನೋಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot