ಆರೋಗ್ಯಸೇವೆ ಮೊಬೈಲ್ ಬಿಡುಗಡೆಯತ್ತ ಸ್ಪೈಸ್

Posted By: Staff

ಆರೋಗ್ಯಸೇವೆ ಮೊಬೈಲ್ ಬಿಡುಗಡೆಯತ್ತ ಸ್ಪೈಸ್
ಬೆಂಗಳೂರು, ಜು. 17: ಈಗ ಎಲ್ಲ ಮೊಬೈಲ್ ಕಂಪೆನಿಗಳು ಮಾಡುತ್ತಿರುವುದು ಒಂದೇ ಕೆಲಸ. ಮಾರುಕಟ್ಟೆಯನ್ನು ಪೂರ್ತಿಯಾಗಿ ತಮ್ಮತ್ತ ಸೆಳೆಯುವ ಸರ್ಕಸ್! ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವ ದಾರಿ ಕೇವಲ ಹೊಸ ಹೊಸ ಮೊಬೈಲ್ ಗಳ ಸೃಷ್ಟಿ ಮಾತ್ರವಲ್ಲ, ಹೊಸ ಹೊಸ ಅಪ್ಲಿಕೇಶನ್ ಗಳ ಬಳಕೆ.


ಇದೀಗ ಸ್ಪೈಸ್ ನ ಸರದಿ. ಹೊಸ ಐಡಿಯಾ ಆರೋಗ್ಯ ಸೇವೆಯನ್ನು ಪ್ರಾರಂಭಿಸುವುದಾಗಿ ಅದು ಪ್ರಕಟಿಸಿದೆ. ನಮ್ಮ ದೇಶದಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಇದೆ. ಆದರೆ ಅದರ ಬಗ್ಗೆ ತಿಳುವಳಿಕೆ ಕಡಿಮೆ. ಅದಕ್ಕಾಗಿ ಸ್ಪೈಸ್ ಪ್ರಯತ್ನಿಸಲಿದ್ದು ಜನರಿಗೆ ಆರೋಗ್ಯ ಸೇವೆಯ ಮೂಲಕ ತನ್ನ ಜೇಬನ್ನೂ ತುಂಬಿಸಿಕೊಳ್ಳುವ ಯೋಜನೆ ರೂಪಿಸಿದೆ.

ಬರಲಿರುವ ಈ ತನ್ನ ಸೇವೆಗೆ ಸ್ಪೈಸ್ ಇಟ್ಟಿರುವ ಹೆಸರು ಜೀಯೋ ಹೆಲ್ತಿ. ಈ ಸೇವೆ ಕನ್ಸಲ್ಟೇಷನ್, ಮೆಡಿಕಲ್ ಅಡ್ವೈಸಸ್ ಹಾಗೂ ಆರೋಗ್ಯ ಸಂಬಂಧಿ ಮಾಹಿತಿ ಒಳಗೊಂಡಿರುತ್ತವೆ. ಇದು ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸೇವೆ. ಅದರಲ್ಲಿ 24x7 ಪರಿಣಿತ ವೈದ್ಯರ ಸೇವೆ ಲಭ್ಯವಿದೆ. ತುಂಬ ಒಳ್ಳೆಯದು ಅಲ್ಲವೇ? ಆದರೆ ಇದು ಉಚಿತವಲ್ಲ. ನೀವು ಸ್ವಲ್ಪ ಹಣ ಕಳೆದುಕೊಳ್ಳಬೇಕಾಗುತ್ತದೆ. ಈಗ ಯಾವುದನ್ನೂ ಫ್ರೀ ಆಗಿ ಪಡೆಯಲು ಸಾಧ್ಯವಿಲ್ಲ ಅಲ್ಲವೇ?

ಸ್ಪೈಸ್ ನ ಈ ಉದ್ದೇಶ ಭಾರತದ ಪ್ರತಿ ಹಳ್ಳಿಯನ್ನೂ ತಲುಪುವುದಾಗಿದೆ. ಹಳ್ಳಿಯ ಜನರಿಗೆ ತಿಳುವಳಿಕೆ ಮೂಡಿದರೆ ದೇಶದ ಅಭಿವೃದ್ಧಿ ಸಾಧ್ಯ. ಈ ಉದ್ದೇಶ ಸಫಲವಾದರೆ ನಿಜವಾಗಿಯೂ ಜನರಿಗೆ ಸಹಾಯವಾಗುತ್ತದೆ. ಇದರಿಂದ ಸ್ಪೈಸ್ ತನ್ನ ಮಾರಾಟದಲ್ಲೂ ಏರಿಕೆ ಕಂಡುಕೊಳ್ಳುವುದು ಶತಃಸಿದ್ದ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot