ಆಹಾ! ಆಲ್ಕಾಟೆಲ್ ಹೊಸ ಐಸ್ 3 OT 520D

Posted By: Staff

ಆಹಾ! ಆಲ್ಕಾಟೆಲ್ ಹೊಸ ಐಸ್ 3 OT 520D
ಬೆಂಗಳೂರು, ಜು. 19: ಒನ್ ಟಚ್ ಸಿರೀಸ್ ಮೊಬೈಲ್ ಲೋಕದಲ್ಲಿ ಆಲ್ಕಾಟೆಲ್ ಪ್ರಖ್ಯಾತ ಹೆಸರು. ಕೈಗಟಕುವ ಬೆಲೆ ಹಾಗೂ ಅತ್ಯಾಧುನಿಕ ವಿಶೇಷತೆಗಳಿಂದ ಕೂಡಿದ ಈ ಕಂಪೆನಿಯ ಮೊಬೈಲ್ ಗಳು ಜಗತ್ತಿನ ಜನರನ್ನು ಸಾಕಷ್ಟು ಮೋಡಿ ಮಾಡಿವೆ.

ಇದೀಗ ಹೊಸ ಮೊಬೈಲ್ ಬಿಡುಗಡೆಯನ್ನು ಘೋಷಿಸಿರುವ ಕಂಪೆನಿ, ಹೆಸರು ಆಲ್ಕಾಟೆಲ್ ಐಸ್ 3 OT 520D ಎಂದು ಗೊತ್ತು ಮಾಡಿದೆ. ಈಗಾಗಲೇ ಕಡಿಮೆ ರೇಡಿಯೇಷನ್ ಫೋನ್ ಘೋಷಿಸಿರುವ ಇದು, ಈ ಹೊಸ ಮೊಬೈಲ್, ಬೇಸಿಕ್ ಮಾದರಿಯ ಕಡಿಮೆ ದರ ಹೊಂದಿರುವ ಫೋನ್ ಎಂದು ತಿಳಿಸಿದೆ.

ಸಿಟಿ ಹಾಗೂ ಹಳ್ಳಿ ಎರಡೂ ಕಡೆಗಳಲ್ಲಿ ಉಪಯೋಗಿಸಬಹುದಾದ ಮೊಬೈಲ್ ಇದು. ಡ್ಯುಯಲ್ ಸಿಮ್ ಸ್ಟಾಂಡ್ ಬಾಯ್ ಹೊಂದಿದ್ದು ಒಂದಕ್ಕಿಂತ ಹೆಚ್ಚು ನೆಟ್ ವರ್ಕ್ ಗಳಲ್ಲಿ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದೆ. ಮಲ್ಟಿಮೀಡಿಯಾ & ಮನರಂಜನೆಯ ವ್ಯಾಪ್ತಿಯಲ್ಲಿ 3.5 mm ಯುನಿವರ್ಸಲ್ ಜಾಕ್ ಇದೆ.

ಇದರಲ್ಲಿರುವ ವಿಶೇಷತೆಗಳು:
* 2 ಮೆಗಾ ಪಿಕ್ಸೆಲ್ ಕ್ಯಾಮೆರಾ
* ಬ್ಲೂ ಡೂಥ್ 2.0
* 32 GB ಗೆ ವಿಸ್ತರಿಸಬಹುದಾದ ಮೆಮೊರಿ
* ಎಫ್ ಎಂ ರೇಡಿಯೋ
* ಮ್ಯೂಸಿಕ್ & ವಿಡಿಯೋ ಪ್ಲೇಯರ್
* ಜಾವಾ
* ಗೇಮ್ಸ
ಇಷ್ಟೆಲ್ಲ ವಿಶೇಷತೆಗಳು ಕಡಿಮೆ ಬೆಲೆಯಲ್ಲಿ ಒಂದು ಮೊಬೈಲ್ ನಲ್ಲಿ ದೊರೆಯುವುದೇ ಒಂದು ವಿಶೇಷ ಅಲ್ಲವೇ? ಇದರ ಬೆಲೆ ಕೇವಲ ರು. 2299. ಈ ಹೊಸ ಮೊಬೈಲ್ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಬಾರತದಲ್ಲಿ ಖಂಡಿತ ಬಿಸಿ ಕೇಕ್ ನಂತೆ ಮಾರಾಟವಾಗುವುದು ಗ್ಯಾರಂಟಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot