ಹೊಸ ಆಲ್ಕಾಟೆಲ್ OT 908 ಸದ್ಯದಲ್ಲೇ ಆಗಮನ

Posted By: Staff

ಹೊಸ ಆಲ್ಕಾಟೆಲ್ OT 908 ಸದ್ಯದಲ್ಲೇ ಆಗಮನ
ಬೆಂಗಳೂರು, ಜು. 19: ಆಲ್ಕಾಟೆಲ್ ಭಾರತೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಹೆಸರು. ಮೊಬೈಲ್ ಮಾರಾಟದಲ್ಲಿ ತನ್ನದೇ ಛಾಪು ಉಳಿಸಿಕೊಂಡಿರುವ ಆಲ್ಕಾಟೆಲ್, 'ಒನ್ ಟಚ್' ಸಿರೀಸ್ ಮೊಬೈಲ್ ಮೂಲಕ ಯಶಸ್ಸಿನತ್ತ ಸಾಗುತ್ತಿದೆ.

ಇದೀಗ ಆಲ್ಕಾಟೆಲ್ 'OT 908' ಎಂಬ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡಲು ಸಿಧ್ಧವಾಗಿದೆ. ಇದು 2.8 ಇಂಚ್ ಗಳ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ಸಖತ್ ಸುಂದರವಾಗಿದೆ. ಮೊಬೈಲ್ ಆಕಾರ ಹಾಗೂ ಕೀ ಪ್ಯಾಡ್ ಗಳು ಆಕರ್ಷಕವಾಗಿವೆ.

ಈ ಹೊಸ ಮೊಬೈಲ್ ನಲ್ಲಿರುವ ವಿಶೇಷತೆಗಳು:
* ಆಂಡ್ರಾಯ್ಡ್ 2.2 ಫ್ರೋಯೋ OS
* 600 MHz ಪ್ರೊಸೆಸರ್
* ಮ್ಯೂಸಿಕ್ & ವೀಡಿಯೋ ಪ್ಲೇಯರ್
* 2G & 3G ನೆಟ್ ವರ್ಕ್
* ಬ್ಲೂ ಟೂಥ್ 3.0 EDR
* Wi-Fi
* ಸ್ಟಿರಿಯೋ ಎಫ್ ಎಂ ರೇಡಿಯೋ
* ಜಾವಾ

ಆಲ್ಕಾಟೆಲ್ OT 908 ರಲ್ಲಿರುವ ವಿಶೇಷತೆಗಳೇ ಸಾಕ್ಷಿ, ಈ ಮೊಬೈಲ್ ಖಂಡಿತ ಹಿಟ್ ಆಗುತ್ತೆ ಅನ್ನೋದಕ್ಕೆ. ಸುಂದರವಾಗಿದೆ, ಕಡಿಮೆ ಭಾರ ಇದೆ, ಸೌಕಷ್ಟು ಸೌಲಭ್ಯ ಇದೆ. ಇನ್ನೇನು ಬೇಕು? ದರ ಕೇಳುತ್ತಿದ್ದೀರಾ? ದರ ಇನ್ನೂ ಕಂಪೆನಿ ಕಡೆಯಿಂದ ಅನೌನ್ಸ್ ಆಗಿಲ್ಲ. ಆದರೆ 2011 ಮುಗಿಯುವದರೊಳಗೆ ಗ್ಯಾರಂಟಿ ಎಂಬ ಮಾಹಿತಿ ಇದೆ. ಇಷ್ಟು ಸಾಕಲ್ಲವೇ! ಮಾರುಕಟ್ಟೆಗೆ ಬಂದ ಮೇಲೆ ನಿಮ್ಮ ಕೈನಲ್ಲೊಂದಿರಲಿ...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot