ಬೇಕೇ ಆಲ್ ರೌಂಡರ್ ಮೊಬೈಲ್? ಇದೆ ಐಫೋನ್ 5

By Super
|
ಬೇಕೇ ಆಲ್ ರೌಂಡರ್ ಮೊಬೈಲ್? ಇದೆ ಐಫೋನ್ 5
ಬೆಂಗಳೂರು, ಜು. 19: ಐ ಫೋನ್ ಸಿರೀಸ್ ಬೇರೆ ಯಾವುದೇ ಮೊಬೈಲ್ ಗಿಂತ ಹೆಚ್ಚು ಸ್ಮಾರ್ಟ್ ಫೋನ್ ಬಳಕೆಯನ್ನು ತಂದಿರುವ ಕಂಪೆನಿ. ಈಗಾಗಲೇ i-Phone 4 ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಇದೀಗ ಐ ಫೋನ್ ಕಂಪೆನಿ i-Phone 5 ಮೊಬೈಲ್ ಮಾರುಕಟ್ಟೆಗೆ ತರುತ್ತಿದೆ ಎಂಬ ಸುದ್ದಿ ಎಲ್ಲರ ಕಿವಿ ತಲುಪಿದೆ.

ಚೀನಾ ಮೊಬೈಲ್ ನ 3G ನೆಟ್ ವರ್ಕ್ ಮೂಲಕ ಚಿತ್ರ ಜಗತ್ತನ್ನು ನಿರ್ವಹಿಸುವ ಈ ಹೊಸ ಮೊಬೈಲ್ ಸಾಕಷ್ಟು ಆಧುನಿಕ ಹಾಗೂ ಅತ್ಯಂತ ವೇಗಿ ಕೂಡ ಆಗಿದೆ. ಸ್ಲಿಮ್ ಆಗಿದ್ದು ಸಾಕಷ್ಟು ಆಕರ್ಷಣೀಯವಾಗಿಯೂ ಇದೆ. ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿರುವುದಕ್ಕಿಂತ ಹೆಚ್ಚೇ ಸೌಲಭ್ಯಗಳಿವೆ. ಒಮ್ಮೆ ಕಳಗಡೆ ಹಾಯಿಸಿ ನಿಮ್ಮ ಕಣ್ಣುಗಳನ್ನು!

ಇದರಲ್ಲಿರುವ ವಿಶೇಷಗಳು:
* A5 ಪ್ರೊಸೆಸರ್, 1.2 ರಿಂದ 1.5 GHz ಸ್ಪೀಡ್
* ಅಲ್ಯುಮೀನಿಯಮ್ ನಿಂದ ಆವೃತವಾಗಿರುವ ರೇರ್ ಕ್ಲಾಡಿಂಗ್
* ಟಿಯರ್ ಡ್ರಾಪ್ ಡಿಸೈನ್ i-Pod
* ಹೆಚ್ಚು ಶಕ್ತಿಯುತವಾದ ಅಂಟೆನಾ
* 1 GB RAM
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 1080p ವೀಡಿಯೋ ರೆಕಾರ್ಡಿಗ್
* ವೈರ್ ಲೆಸ್ ಚಾರ್ಜಿಂಗ್
* 4 ಇಂಚ್ ಡಿಸ್ ಪ್ಲೇ ಸ್ಕ್ರೀನ್
* iOS 5 ಅಪರೇಟಿಂಗ್ ಪ್ಲಾಟ್ ಫಾರ್ಮ್
* 4 G ಸಂಪರ್ಕ
* ಶಕ್ತಿಯುತವಾದ ಗ್ರಾಫಿಕ್ಸ್ ಪ್ರೊಸೆಸರ್ ಜತೆಗೆ ಮೋಶನ್ ಸೆನ್ಸೆಟಿವ್ ಗೇಮಿಂಗ್
* ಉತ್ತಮ ಬ್ಯಾಟರಿ ಬ್ಯಾಕಪ್

ಇಷ್ಟೆಲ್ಲ ಅತ್ಯುತ್ತಮವಾದ ವಿಶೇಷತೆಗಳಿರುವುದರಿಂದಲೇ ಐಫೋನ್ 5 ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಭರ್ಜರಿಯಾಗಿ ನಡೆಸಲು ಸಾಧ್ಯವಾಗಿದೆ. ಇದೆಲ್ಲಾ ತಿಳಿದ ಮೇಲೆ ನೀವೂ ಕೂಡ ಐಫೋನ್ 5 ಮಾಲೀಕರಾಗದೇ ಇರಲು ಸಾಧ್ಯವಿರಲಿಕ್ಕಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X