Subscribe to Gizbot

ಮೈಕ್ರೋ ಮ್ಯಾಕ್ಸ್ ಮೊಬೈಲ್ ಸ್ಪರ್ಧೆ! ಗೆಲ್ಲೋರ್ಯಾರು?

Posted By: Super

ಮೈಕ್ರೋ ಮ್ಯಾಕ್ಸ್ ಮೊಬೈಲ್ ಸ್ಪರ್ಧೆ! ಗೆಲ್ಲೋರ್ಯಾರು?
ಬೆಂಗಳೂರು, ಜು. 19: ಮೈಕ್ರೋ ಮ್ಯಾಕ್ಸ್ ಈಗ ಭಾರತದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಸಾಧಿಸುತ್ತಿದೆ. 30 ಕ್ಕಿಂತ ಹೆಚ್ಚು ಮೊಬೈಲ್ ಗಳನ್ನು ಹೊಂದಿರುವ ಈ ಕಂಪೆನಿ ಮಾರುಕಟ್ಟೆಯಲ್ಲಿ ಉಳಿದ ಮೊಬೈಲ್ ಗಳಿಗೆ ಸಾಕಷ್ಟು ಪೈಪೋಟಿ ನೀಡುತ್ತಿದೆ. ಕೈಗೆಟಕುವ ಬೆಲೆಯಲ್ಲಿ ಸಾಕಷ್ಟು ಸೌಲಭ್ಯಗಳಿರುವ ಮೊಬೈಲ್ ಉತ್ಪಾದನೆ ಈ ಕಂಪೆನಿಯ ವೈಶಿಷ್ಟ್ಯ.

ಇದೀಗ ನಾವು ಈ ಕಂಪೆನಿಯ 2 ಮೊಬೈಲ್ ಗಳಾದ ಮೈಕ್ರೋ ಮ್ಯಾಕ್ಸ್ Q80 ಹಾಗೂ A70 ನಡುವೆ ಸಾಮ್ಯತೆ-ಭಿನ್ನತೆಗಳನ್ನು ನೋಡೋಣ.
ಎರಡೂ ಕೂಡ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು.

ಮೈಕ್ರೋ ಮ್ಯಾಕ್ಸ್ Q80, ಜಾವಾ ಆಧಾರಿತವಾಗಿದೆ. ರಫ್ & ಟಫ್ ರಸ್ಟಿ ಲುಕ್ ಹೊಂದಿದೆ. ಮಲ್ಟಿಮೀಡಿಯಾ ಹಾಗೂ ಮನರಂಜನೆ ಪ್ಯಾಕೇಜಸ್ ಹೊಂದಿವೆ. ಆಡಿಯೋ-ವಿಡಿಯೋ ಸೌಲಭ್ಯ ಹೊಂದಿವೆ. ಯುನಿವರ್ಸಲ್ ಆಡಿಯೋ ಜಾಕ್ 3.5, ಎಫ್ ಎಂ ರೇಡಿಯೋ, ಸ್ಮಾಲ್ 3G ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ & ಫ್ರಂಟ್ VGA ವಿಡಿಯೋ ಕಾಲಿಂಗ್ ಕ್ಯಾಮೆರಾ ಇದೆ. ಸ್ಮಾರ್ಟ್ ಫೋನಿನಲ್ಲಿರಬೇಕಾದ ಎಲ್ಲಾ ಸೌಲಭ್ಯ ಇದೆ. 3G ಇಂಟರ್ ನೆಟ್ ಎಕ್ಸೆಸ್ & ಬ್ಲೂ ಟೂಥ್ ಹೊಂದಿದೆ. ಇನ್ನು ದರದ ವಿಷಯಕ್ಕೆ ಬಂದರೆ, ಮೈಕ್ರೋ ಮ್ಯಾಕ್ಸ್ Q80 ಯ ಬೆಲೆ ರು, 4900.

ಮೈಕ್ರೋ ಮ್ಯಾಕ್ಸ್ A70, ಆಂಡ್ರಾಯ್ಡ್ ಫ್ರೋಯೋ ಆಧಾರಿತವಾಗಿದೆ. ಉತ್ತಮ ಕಾರ್ಯಕ್ಷಮತೆ ಹೊಂದಿರುವ ಇದು ಬಲು ಆಕರ್ಷಕ ಲುಕ್ ಹೊಂದಿದೆ. ಮಲ್ಟಿಮೀಡಿಯಾ ಹಾಗೂ ಮನರಂಜನೆ ಪ್ಯಾಕೇಜಸ್ ಹೊಂದಿವೆ. ಆಡಿಯೋ-ವಿಡಿಯೋ ಸೌಲಭ್ಯ ಹೊಂದಿವೆ. ಯುನಿವರ್ಸಲ್ ಆಡಿಯೋ ಜಾಕ್ 3.5, ಎಫ್ ಎಂ ರೇಡಿಯೋ, ಸ್ಮಾಲ್ 5G ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ & ಫ್ರಂಟ್ VGA ಕ್ಯಾಮೆರಾ, Wi-Fi ಜತೆಗೆ ಇದೆ. ಸ್ಮಾರ್ಟ್ ಫೋನಿನಲ್ಲಿರಬೇಕಾದ ಎಲ್ಲಾ ಸೌಲಭ್ಯ ಇದೆ. 3G ಇಂಟರ್ ನೆಟ್ ಎಕ್ಸೆಸ್ & ಬ್ಲೂ ಟೂಥ್ ಹೊಂದಿದೆ.

ಇನ್ನು ದರದ ವಿಷಯಕ್ಕೆ ಬಂದರೆ, ಮೈಕ್ರೋ ಮ್ಯಾಕ್ಸ್ A70 ಯ ಬೆಲೆ ರು, 9000. ಎರಡೂ ಮೊಬೈಲ್ ಹೋಲಿಸಿದಾಗ ನಿಮಗೇನನ್ನಿಸುತ್ತಿದೆ? ಆಯ್ಕೆ ನಿಮ್ಮದು. ನಿಮ್ಮ ಹಣಕ್ಕೆ ಯಾವುದು ಸೂಕ್ತ ಆಯ್ಕೆ ಎಂಬುದನ್ನು ನೀವೇ ನಿರ್ಧರಿಸಬಲ್ಲಿರಿ. ಏಕೆಂದರೆ ನೀವು ಜಾಣರು ತಾನೇ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot