ಈ ಎರಡರಲ್ಲಿ ನಿಮಗ್ಯಾವುದು ಬೇಕು? ಆಯ್ಕೆ ಮಾಡಿ

By Super
|
ಈ ಎರಡರಲ್ಲಿ ನಿಮಗ್ಯಾವುದು ಬೇಕು? ಆಯ್ಕೆ ಮಾಡಿ
ಬೆಂಗಳೂರು, ಜು. 19: ಮೋಟೋರೊಲಾ ಮೊಬೈಲ್ ಯಾರಿಗೆ ಗೊತ್ತಿಲ್ಲ ಹೇಳಿ! ಈ ಪ್ರಸಿದ್ಧ ಕಂಪೆನಿ ಹೊಸ ಹೊಸ ಮೊಬೈಲ್ ಗಳ ಮೂಲಕ ಇನ್ನೂ ಸಾಕಷ್ಟು ಪ್ರಸಿದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ಮೋಟೋರೊಲಾ ಡ್ರಾಯ್ಡ್ ಸಿರೀಸ್ ಗಳಾದ ಮೋಟೋರೊಲಾ ಡ್ರಾಯ್ಡ್ 2 & ಡ್ರಾಯ್ಡ್ 3 ಗಳ ಬಗ್ಗೆ ಹೋಲಿಕೆಗಳ ಮೂಲಕ ಇಲ್ಲಿ ಉಲ್ಲೇಖಿಸಲಾಗಿದೆ.

ಮೊದಲನೆಯದಾಗಿ ಎರಡೂ ಕೂಡ ಟಚ್ ಸ್ಕ್ರೀನ್ ಹಾಗೂ QWERTY ಕೀ ಪ್ಯಾಡ್ ಹೊಂದಿವೆ. ಸುಂದರವಾಗಿದೆ, ಸಾಮಾನ್ಯ ಸೌಲಭ್ಯಗಳು ಎರಡರಲ್ಲೂ ಇವೆ.

ಡ್ರಾಯ್ಡ್ 2- 3.7 ಇಂಚಸ್ ಡಿಸ್ ಪ್ಲೇ ಸ್ಕ್ರೀನ್, ಡ್ಯುಯಲ್ ಕೋರ್ ಪ್ರೊಸೆಸರ್, ಆಂಡ್ರಾಯ್ಡ್ ಫ್ರೋಯೋ OS, ವೈಡ್ ಮಲ್ಟಿಮೀಡಿಯಾ ಸೌಲಭ್ಯ, ಆಡಿಯೋ & ವೀಡಿಯೋ HD ರೆಕಾರ್ಡಿಂಗ್, 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 720p ರೆಕಾರ್ಡಿಂಗ್, ಇಂಟರ್ ನೆಟ್ ತಂತ್ರಜ್ಞಾನ, ಬ್ಲೂಟೂಥ್, Wi-Fi, GPRS, EDGE, 3G ಇಂಟರ್ ನೆಟ್, ಮೈಕ್ರೋ SD ಕಾರ್ಡ್ ಮೂಲಕ 32 GB ಗೆ ವಿಸ್ತರಿಸಬಹುದಾದ 8 GB ಮೆಮೊರಿ ಹೊಂದಿದೆ. ಇನ್ನು ದರ, 35,000.

ಡ್ರಾಯ್ಡ್ 3- 4.0 ಇಂಚಸ್ ಡಿಸ್ ಪ್ಲೇ ಸ್ಕ್ರೀನ್, ಆಂಡ್ರಾಯ್ಡ್ ಜಿಂಜರ್ ಬರ್ಡ್ OS, ವೈಡ್ ಮಲ್ಟಿಮೀಡಿಯಾ ಸೌಲಭ್ಯ, ಆಡಿಯೋ & ವೀಡಿಯೋ HD ರೆಕಾರ್ಡಿಂಗ್, 8 ಮೆಗಾ ಪಿಕ್ಸೆಲ್ ಕ್ಯಾಮೆರಾ, ಇಂಟರ್ ನೆಟ್ ತಂತ್ರಜ್ಞಾನ, ಬ್ಲೂಟೂಥ್, Wi-Fi, GPRS, EDGE, 3G ಇಂಟರ್ ನೆಟ್, ಮೈಕ್ರೋ SD ಕಾರ್ಡ್ ಮೂಲಕ 32 GB ಗೆ ವಿಸ್ತರಿಸಬಹುದಾದ 16 GB ಮೆಮೊರಿ ಹೊಂದಿದೆ. ಇನ್ನು ದರ, 38,900.

ಇವೆರಡರಲ್ಲಿ ಹೋಲಿಕೆ ಮಾಡಿದಾಗ ಖಂಡಿತವಾಗಿಯೂ ಡ್ರಾಯ್ಡ್ 3 ಡ್ರಾಯ್ಡ್ 2 ಗಿಂತ ಉತ್ತಮ ಎನ್ನಬಹುದು. ಏಕೆಂದರೆ ಸ್ವಲ್ಪ ಮಾತ್ರ ದರ ಹೆಚ್ಚಳಕ್ಕೆ ಸಾಕಷ್ಟು ಹೆಚ್ಚಿನ ವಿಶೇಷ ಸೌಲಭ್ಯ ಹೊಂದಿದೆ.

ಸರಿ, ಈ ಎರಡು ಮೊಬೈಲ್ ಗಳ ಬಗ್ಗೆ ತಿಳಿದುಕೊಂಡಾದ ಮೇಲೆ ಖರೀದಿ ಏಕೆ ಲೇಟ್. ಹತ್ತಿರದ ಶೋ ರೂಂ ಗೆ ಈಗಲೇ ಹೊರಡಿ, ನಿಮ್ಮಿಷ್ಟದ ಮೊಬೈಲ್ ಕೊಂಡು ಆನಂದವಾಗಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X