ಸ್ಯಾಮ್ ಸಂಗ್ ಹೊಸ ಹೆರಾಕ್ಯುಲಸ್ ಗೆ ಜಾಗ ಕೊಡಿ

ಜಗತ್ತಿನಲ್ಲಿ ಅತಿ ಶಕ್ತಿಶಾಲಿ ದೇವರು ಹೆರಾಕ್ಯುಲಸ್ ಎಂಬ ನಂಬಿಕೆಯಂತೆ ಅದೇ ಹೆಸರಿನ ಮೊಬೈಲ್ ಹೊರತರುತ್ತಿದೆ ಸ್ಯಾಮ್ ಸಂಗ್. ಇದರಲ್ಲಿ ಎಲ್ಲಾ ವಿಧವಾದ ಮಲ್ಟಿಮೀಡಿಯಾ ಹಾಗೂ ಸದ್ಯಕ್ಕೆ ಲಭ್ಯವಿರುವ ಸಂಪರ್ಕ ಸಾಧನಗಳು ಇದೆ. ಈ ಹೊಸ ಫೊನ್ ನಲ್ಲಿ Wi-Fi, 2G ಮತ್ತು 3G ಸಹಕಾರ ಲಭ್ಯ.
3G ವೇಗದ ಡಾಟಾ ಟ್ರಾನ್ಸ್ ಫರ್, 14 Mbps ತನಕ ಇದೆ. ಆಂತರಿಕ ಮೆಮೊರಿ ಸೌಲಭ್ಯದೊಂದಿಗೆ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಅತೀ ಹೆಚ್ಚಿನ ಮೆಮೊರಿ ಸೌಲಭ್ಯ ಲಭ್ಯ. ಆಂಡ್ರಾಯ್ಡ್ OS ಮೂಲಕ ಕಾರ್ಯ ನಿರ್ವಹಿಸುವ ಇದು ಮಲ್ಟಿ ಕಾರ್ಯವೆಸಗಲು ದಕ್ಷ ಕಾರ್ಯಕ್ಷಮತೆ ಹೊಂದಿದೆ.
ಇದರಲ್ಲಿರಬಹುದಾದ ವಿಶೇಷತೆಗಳು:
* 4 ಇಂಚ್ ಟಚ್ ಸ್ಕ್ರೀನ್ ಡಿಸ್ ಪ್ಲೇ
* 8 ಮೆಗಾ ಪಿಕ್ಸೆಲ್ ಕ್ಯಾಮೆರಾ, 1080p ವಿಡಿಯೋ ರೆಕಾರ್ಡಿಂಗ್
* ಆಂಡ್ರಾಯ್ಡ್ ಜಿಂಜರ್ ಬರ್ಡ್ OS
* 4G, 3G & 2G ಸಹಕಾರ ಸೌಲಭ್ಯ
* ಬ್ಲೂ ಟೂಥ್ & Wi-Fi ಸೌಲಭ್ಯ
* ಜಾವಾ
ಇಷ್ಟೆಲ್ಲ ಸೌಲಭ್ಯಗಳಿರುವ ಇದನ್ನು 'ಆಲ್ ರೌಂಡರ್' ಅನ್ನದೇ ಬೇರೆ ದಾರಿಯಿಲ್ಲ. ಆದರೆ ಸದ್ಯಕ್ಕೆ ಇದರ ಬೆಲೆ ಮಾತ್ರ ನಿಗದಿಯಾಗಿಲ್ಲ. ಕೈಗೆಟಕುವ ಆಕರ್ಷಕ ಬೆಲೆಯನ್ನು ಊಹಿಸಲಾಗಿದೆ. ಎಷ್ಟಾದರೂ ಇದು ಬೇಕೇ ಬೇಕು ಎನಿಸುವಂತಿದೆ, ಏನಂತೀರಾ!


Click it and Unblock the Notifications