Subscribe to Gizbot

ಎಲ್ ಜಿ ಬಜೆಟ್ ಫೊನ್ A230 ಬರುತ್ತಿದೆ ನೋಡಿ!

Posted By: Super

ಎಲ್ ಜಿ ಬಜೆಟ್ ಫೊನ್ A230 ಬರುತ್ತಿದೆ ನೋಡಿ!
ಬೆಂಗಳೂರು, ಜು. 20: ಖ್ಯಾತ ಮೊಬೈಲ್ ಕಂಪೆನಿ ಎಲ್ ಜಿ, ಕೋರಿಯಾ ಬೇಸ್ಡ್ ಇಲೆಕ್ಟಾನಿಕ್ಸ್ ಎಲ್ ಜಿ ಯ ಹೊಸ ಮೊಬೈಲ್ ಎಲ್ ಜಿ A230 ಬಿಡುಗಡೆಮಾಡಲಿದೆ. ಇದು ಡ್ಯುಯಲ್ ಸಿಮ್ ಹೊಂದಿದ್ದು ಕ್ಯಾಂಡಿ ಆಕಾರದಲ್ಲಿದೆ. ಇದು ಸಾಮಾನ್ಯ ಪ್ಯಾಂಟಿನ ಜೇಬ್ ಗೆ ಹೊಂದುವಂತೆ ತಯಾರಿಸಲಾಗಿದೆ.

ಇದು ಬೇಸಿಕ್ ಮಾದರಿಯ ಫೋನ್ ಅಲ್ಲ, ಬದಲಿಗೆ ಉತ್ತಮ ಡಿಸ್ ಪ್ಲೇ ಕೂಡ ಹೊಂದಿದೆ. 3G ನೆಟ್ ವರ್ಕ್, Wi-Fi, GPS ಹಾಗೂ USB PC Synk ಹೊಂದಿರುವ ಬ್ಲೂಟೂಥ್, HTML ಬ್ರೌಸರ್, ಹಾಗೂ 6 ತಾಸುಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ.
ವಿಶೇಷತೆಗಳು:
* ಡ್ಯುಯಲ್ ಸಿಮ್
* ಬ್ಲೂ ಟೂಥ್
* ವಿಸ್ತರಿಸಬಹುದಾದ 8 GB ಮೆಮೊರಿ
* ಜಾವಾ
* ಮ್ಯೂಸಿಕ್ & ವಿಡಿಯೋ ಪ್ಲೇಯರ್
* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ

ಈ ವರ್ಷದ ಕೊನೆಯಲ್ಲಿ ಮಾರುಕಟ್ಟೆಗೆ ಬರಲಿರುವ ನಿರೀಕ್ಷೆಯಿದ್ದು, ಇದರ ಬೆಲೆ ಕೇವಲ ರು. 4000. ಈ ದರದ ಉಳಿದ ಮೊಬೈಲ್ ಗೆ ಹೋಲಿಸಿದರೆ ಇದು ಸಾಕಷ್ಟು ಉತ್ತಮವಾಗಿದ್ದು ಖಂಡಿತವಾಗಿಯೂ ಇದು ಸ್ಪರ್ಧೆಯಲ್ಲಿ ವಿಜಯ ಸಾಧಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot