ಹೊಸ ಎಲ್ ಜಿ, ಸ್ಯಾಮ್ ಸಂಗ್: ನಿಮ್ಮ ಆಯ್ಕೆ?

Posted By: Staff

ಹೊಸ ಎಲ್ ಜಿ, ಸ್ಯಾಮ್ ಸಂಗ್: ನಿಮ್ಮ ಆಯ್ಕೆ?
ಬೆಂಗಳೂರು, ಜು. 24: ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸ್ಪರ್ಧೆ ಸಹಜವಾಗಿಬಿಟ್ಟಿದೆ. ಹೊಸ ಹೊಸ ಮಾದರಿಗಳ ಸಾಕಷ್ಟು ಫೋನ್ ಗಳು ಪ್ರತಿನಿತ್ಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು ಇದಕ್ಕೆ ಹೊಸ ಸೇರ್ಪಡೆ, ಎಲ್ ಜಿ ಅಟ್ಯೂನ್ & ಸ್ಯಾಮ್ ಸಂಗ್ ರೆಪ್ಲೆನಿಶ್.

ಎಲ್ ಜಿ ಅಟ್ಯೂನ್ ಇದು ಸರಳ ವಿನ್ಯಾಸದ ಬೇಸಿಕ್ ಫೋನ್ ಆಗಿದ್ದು 2.8 ಇಂಚಸ್ ಡಿಸ್ ಪ್ಲೇ, ಸ್ಲೈಡಿಂಗ್ ಫಿಸಿಕಲ್ QWERTY ಕೀ ಪ್ಯಾಡ್ ಹೊಂದಿದೆ. ಪ್ರೊಪ್ರಿಏಟರಿ OS ಆಧಾರಿತವಾಗಿದ್ದು, ಮಲ್ಟಿಮೀಡಿಯಾದಲ್ಲಿ ಸಾಕಷ್ಟು ಸೌಲಭ್ಯ ಹೊಂದಿದೆ. ಆಡಿಯೋ & ವಿಡಿಯೋ ರೆಕಾರ್ಡಿಂಗ್ ಮತ್ತು ಪ್ಲೇ ಬ್ಯಾಕ್, FM ರೇಡಿಯೋ, ಯುನಿವರ್ಸೆಲ್ ಜಾಕ್ ಹೊಂದಿದೆ. 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಬ್ಲೂ ಟೂಥ್, GPRS & USB ಪಿಸಿ ಸಿಂಕ್. ದರ, ರು. 4000.

ಸ್ಯಾಮ್ ಸಂಗ್ ರೆಪ್ಲೆನಿಶ್ ಆಧುನಿಕವಾಗಿದ್ದು ಟಚ್ & ಟೈಲ್ ಫೋನಾಗಿದೆ. 2.8 ಇಂಚ್ TFT ಸ್ಕ್ರೀನ್, ಫಿಸಿಕಲ್ QWERTY ಕೀ ಪ್ಯಾಡ್ ಹೊಂದಿದೆ. ಆಂಡ್ರಾಯ್ಡ್ ಫ್ರೋಯೋ OS ಆಧಾರಿತವಾಗಿದ್ದು, ಮಲ್ಟಿಮೀಡಿಯಾದಲ್ಲಿ ಸಾಕಷ್ಟು ಸೌಲಭ್ಯ ಹೊಂದಿದೆ. ಆಡಿಯೋ & ವಿಡಿಯೋ ರೆಕಾರ್ಡಿಂಗ್ ಮತ್ತು ಪ್ಲೇ ಬ್ಯಾಕ್, FM ರೇಡಿಯೋ, ಯುನಿವರ್ಸೆಲ್ ಜಾಕ್ ಹೊಂದಿದೆ. 2 ಮೆಗಾ ಪಿಕ್ಸೆಲ್ ಕ್ಯಾಮೆರಾ, ಬ್ಲೂ ಟೂಥ್, GPRS & USB ಪಿಸಿ ಸಿಂಕ್. ದರ ಇನ್ನೂ ನಿಗದಿಯಾಗಿಲ್ಲ.

ಒಂದೊಮ್ಮೆ ಎಲ್ ಜಿ ಅಟ್ಯೂನ್ ಗೆ ಸಮೀಪದಲ್ಲಿದ್ದರೆ ನಿಜವಾಗಿಯೂ ಸ್ಯಾಮ್ ಸಂಗ್ ರೆಪ್ಲೆನಿಶ್ ಗ್ರಾಹಕರ ಆಯ್ಕೆ ಅಗುವುದರಲ್ಲಿ ಸಂಶಯವೇ ಇಲ್ಲ.

Please Wait while comments are loading...
Opinion Poll

Social Counting