ಮೊಬೈಲ್ ಬಗ್ಗೆ ಮುತ್ತಿನಂತ ಮಾತು; ಹೇಳಿದ್ದು ಯಾರು?

Posted By: Staff

ಮೊಬೈಲ್ ಬಗ್ಗೆ ಮುತ್ತಿನಂತ ಮಾತು; ಹೇಳಿದ್ದು ಯಾರು?
ಈ ಕೆಳಗಿನ ಮುತ್ತಿನಂತಾ ಮಾತುಗಳು ಯಾರದ್ದಿರಬಹುದು? ಊಹಿಸಬಲ್ಲಿರಾ... ಓದಿ ನೋಡಿ!

ಆಹಾ! ಎನಿದು ಮೊಬೈಲ್ ಗಳ ಸ್ಪರ್ಧೆ. ಹೊಸ ಹೊಸ ಕಂಪೆನಿಗಳು ಮಾರುಕಟ್ಟೆಯಲ್ಲಿ ತಮ್ಮಅಧಿಪತ್ಯ ಸ್ಥಾಪಿಸಲು ಹೋರಾಡುತ್ತಿವೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸಾಕಷ್ಟು ಹೆಚ್ಚಿನ ವಿಶೇಷ ಸೌಲಭ್ಯಗಳಿರುವ ಮೊಬೈಲ್ ಕೊಡುತ್ತಿವೆ. ಈಗ ದಿನದಿನಕ್ಕೂ ತಂತ್ರಜ್ಞಾನ ಬೆಳೆಯುತ್ತಿದೆ. ಹೊಸ ಹೊಸ ಕಂಪೆನಿಗಳೂ ಕೂಡ ಲಗ್ಗೆ ಇಡುತ್ತಿವೆ.

ಕಂಪೆನಿಗಳು ಉಳಿಯಬೇಕಾದರೆ ಅವು ಹೊಸತೇನನ್ನಾದರೂ ಕೊಡಲೇಬೇಕು. ಹಾಗೆ ಕೊಟ್ಟ ಮೊಬೈಲ್ ಗಳು ಮಾರಾಟವಾಗಿ ಕಂಪೆನಿಯ ಬೊಕ್ಕಸ ಭರ್ತಿಯಾಗಬೇಕು. ಜತೆಗೆ ಗ್ರಾಹಕರ ಮೆಚ್ಚುಗೆಯನ್ನೂ ಗಳಿಸಬೇಕು. ಸವಾಲು ಒಂದೆರಡಲ್ಲ. ಈ ನಿಟ್ಟಿನಲ್ಲಿ ನಾವು ಕೂಲಂಕುಷವಾಗಿ ಪರಿಶೀಲಿಸಿದಾಗ ಹೊಸ ಹೊಸ ಕಂಪೆನಿಗಳು ಬಂದಷ್ಟೂ ಗ್ರಾಹಕರಿಗೆ ಉಪಯೋಗ ಹೆಚ್ಚು.

ಏಕೆಂದರೆ ಅವುಗಳ ನಡುವೆ ನೇರ ಸ್ಪರ್ಧೆ ಇರುವುದರಿಂದ ಗುಣಮಟ್ಟದಲ್ಲಿ ಹೆಚ್ಚಳ ಹಾಗೂ ಕಡಿಮೆ ದರ ಸಾಧ್ಯವಾಗುತ್ತದೆ. ಆಗ ಮಾತ್ರ ಅವು ಮಾರುಕಟ್ಟೆಯಲ್ಲಿ ಮಾರಾಟವಾಗಬಲ್ಲುದು. ಹಾಗಾಗಿಯೇ ಅವು ಒಂದರೊಡನ್ನೊಂದು ಸ್ಪರ್ಧೆಗೆ ಬಿದ್ದು ವರುಷದಲ್ಲಿ ಸಾಧ್ಯವಿದ್ದಷ್ಟು ಹೆಚ್ಚು ಮೊಬೈಲ್ ಗಳನ್ನು ಬಿಡುಗಡೆ ಮಾಡುತ್ತವೆ.

ಆದರೆ ಗ್ರಾಹಕರಿಗೆ ಯಾವುದನ್ನು ಕೊಳ್ಳಬೇಕು, ಯಾವುದು ಒಳ್ಳೆಯದು ಎಂಬ ಮಾಹಿತಿ ತಕ್ಷಣಕ್ಕೆ ಸಿಗಬೇಕು ಅಲ್ಲವೇ! ಆದರೆ ಈ ಮೊಬೈಲ್ ಕಂಪೆನಿಗಳು ಬಿಡುಗಡೆ ಮಾಡುತ್ತಿರುವ ಹೊಸ ಮೊಬೈಲ್ ಗಳು, ಅವುಗಳ ವಿಶೇಷತೆಗಳು, ದರ ಹಾಗೂ ಯಾವಾಗ ಮಾರುಕಟ್ಟೆಯಲ್ಲಿ ಲಭ್ಯ ಎಂಬ ಖಚಿತ ಮಾಹಿತಿ ನಮ್ಮಲ್ಲಿ ದೊರೆಯುತ್ತಿದೆ. ಈ ನಮ್ಮ ವೆಬ್ ಸೈಟ್ ತುಂಬಾ ಉಪಯುಕ್ತ. ಹಾಗಂತ ಹೇಳಿದ್ದು, ನನ್ನ ಮಿತ್ರ ಹಾಗೂ ದಟ್ಸ್ ಕನ್ನಡ ವೆಬ್ ಸೈಟ್ ನ ರೆಗ್ಯುಲರ್ ಓದುಗಾರ, ರಕ್ಷಿತ್ ನರೇನ್.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot