ಇನ್ನೊಂದು ಹೊಸ ಮೊಬೈಲ್ ಎಂಟ್ರಿ! ಗೆಸ್ ಮಾಡ್ತೀರಾ?

Posted By: Staff

ಇನ್ನೊಂದು ಹೊಸ ಮೊಬೈಲ್ ಎಂಟ್ರಿ! ಗೆಸ್ ಮಾಡ್ತೀರಾ?
ಬೆಂಗಳೂರು, ಜು. 20: ಸ್ಯಾಮ್ ಸಂಗ್ ಈಗ ಮೈಕ್ರೋ ಸಾಪ್ಟ್ ನೊಂದಿಗೆ ಕೈ ಜೋಡಿಸಿದ್ದು ಹೊಸ ವಿಂಡೋಸ್ ಫೋನ್ 7 ಮ್ಯಾಂಗೋ OS ಆಧಾರಿತ ಮೊಬೈಲ್ ತರಲಿದೆ. ಆಂಡ್ರಾಯ್ಡ್ OS ಹಾಗೂ ಆಪಲ್ i-OS ಜಂಟಿ ಸಹಯೋಗದಲ್ಲಿ ತರುತ್ತಿರುವ ಹೊಸ ಮೊಬೈಲ್ ಸ್ಯಾಮ್ ಸಂಗ್ GT -i8700.

ಇದು ಈಗಾಗಲೇ ಮಾರುಕಟ್ಟೆಯಲ್ಲಿರುವ ವಿಂಡೋಸ್ ಫೋನ್ 7 ಮ್ಯಾಂಗೋ ಸ್ಯಾಮ್ ಸಂಗ್ ಓಮ್ನಿಯಾ 7 GT -i8700 ರೀತಿಯಲ್ಲೇ ಕ್ಲಿಕ್ ಆಗಬಹುದೆಂದು ಅಂದಾಜಿಸಲಾಗಿದೆ.

ಸ್ಯಾಮ್ ಸಂಗ್ ಕಂಪೆನಿ ಬಿಡುಗಡೆ ಮಾಡಲಿರುವ ಸಾಕಷ್ಟು ಹೊಸ ಫೋನ್ ಗಳಲ್ಲಿ ಈ ಸ್ಯಾಮ್ ಸಂಗ್ GT -i8350 ಕೂಡ ಒಂದು. ಇವೆಲ್ಲವೋ ವಿಂಡೋಸ್ ಬೇಸ್ಡ್ ಫೋನ್ ಗಳು ಎಂಬುದು ವಿಶೇಷ.

ಈ ಹೊಸ ಫೋನ್ 480 x 800 ಪಿಕ್ಸೆಲ್ ಡಿಸ್ ಪ್ಲೇ ರೆಸೊಲ್ಯೂಷನ್ ಇದ್ದು ಉತ್ತಮ ಗುಣಮಟ್ಟದ ವಿಡಿಯೋ ಚಿತ್ರಣ ನೀಡಬಲ್ಲುದು. ಇಂಟರ್ ನೆಟ್ ಎಕ್ಸ್ ಪ್ಲೋರರ್ 9 ಬ್ರೌಸರ್ ಹೊಂದಿದ್ದು ಅತ್ಯಾಧುನಿಕವಾದ ಎಲ್ಲಾ ಸೌಲಭ್ಯ ಹೊಂದಿದೆ.

ದೊರೆತಿರುವ ಮಾಹಿತಿಯ ಪ್ರಕಾರ ಬರಲಿರುವ ಈ ಹೊಸ ಮೊಬೈಲ್ ಜಗತ್ತಿನ ತುಂಬ ಹೊಸ ಯಶಸ್ಸಿನ ಅಲೆಯನ್ನು ಹುಟ್ಟುಹಾಕಲಿದೆ. ಎರಡು ತಿಂಗಳಲ್ಲಿ ಬಿಸಿ ಬಿಸಿ ಕೇಕ್ ನಂತೆ ಖರ್ಚಾಗಿ ಸ್ಯಾಮ್ ಸಂಗ್ ಕಂಪೆನಿಯ ಜೇಬು ಭರ್ತಿ ಮಾಡಲಿದೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot