ಮೋಟೋರೋಲಾ ಈ ಜೋಡಿಯಲ್ಲಿ ಗೆಲ್ಲೋರ್ಯಾರು!

ಮೋಟೋರೊಲಾ ಆಟ್ರಿಕ್ಸ್- ಸಂಪೂರ್ಣ ಟಚ್ ಸ್ಕ್ರೀನ್ ಆಧಾರಿತವಾಗಿರುವ ಈ ಮೊಬೈಲ್ 4.0 ಇಂಚ್ ಗಳ ಲೆಡ್ ಡಿಸ್ ಪ್ಲೇ ಹೊಂದಿವೆ. 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಟೋ ಫೋಕಸ್, ಸ್ಮೈಲ್ ಡಿಟೆಕ್ಷನ್ & ಡಿಜಿಟಲ್ ಝೂಮ್, ಲೆಡ್ ಫ್ಲಾಶ್ ತಂತ್ರಜ್ಞಾನ ಹೊಂದಿದೆ. ಇದು ಫ್ರಂಟ್ ಕ್ಯಾಮೆರಾ ಕೂಡ ಹೊಂದಿದ್ದು, 3G ನೆಟ್ ವರ್ಕ್ ಸಹಕಾರದೊಂದಿಗೆ ಸುಪರ್ ಫಾಸ್ಟ್ ವಿಡಿಯೋ ಕಾಲಿಂಗ್ ನಿರ್ವಹಿಸುತ್ತದೆ.
ಹೈ ಡೆಪನಿಷನ್ h263, h264, 1080p ವಿಡಿಯೋ ರೆಕಾರ್ಡಿಂಗ್, 3.5 mm ಯುನಿವರ್ಸೆಲ್ ಆಡಿಯೋ ಜಾಕ್, 3.0 ಆವೃತ್ತಿಯ ಬ್ಲೂ ಟೂಥ್, 14 Mbps ಡಾಟಾ ಟ್ರಾನ್ಸ್ ಪರ್ ಸ್ಪೀಡ್ ಹೊಧಿರುವ ಇದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ಮೋಟೋರೊಲಾ ಮೈಲ್ ಸ್ಟೋನ್- ಸಂಪೂರ್ಣ ಟಚ್ ಸ್ಕ್ರೀನ್ ಆಧಾರಿತವಾಗಿದ್ದು 3.7 ಇಂಚ್ ಗಳ ಲೆಡ್ ಡಿಸ್ ಪ್ಲೇ ಹೊಂದಿವೆ. 5 ಮೆಗಾ ಪಿಕ್ಸೆಲ್ ಕ್ಯಾಮೆರಾ, QWERTY ಕೀ ಪ್ಯಾಡ್, ಇದು ಫ್ರಂಟ್ ಕ್ಯಾಮೆರಾ ಕೂಡ ಹೊಂದಿದ್ದು, ಆಟೋ ಫೋಕಸ್, ಸ್ಮೈಲ್ ಡಿಟೆಕ್ಷನ್ & ಡಿಜಿಟಲ್ ಝೂಮ್, ಲೆಡ್ ಫ್ಲಾಶ್ ತಂತ್ರಜ್ಞಾನ ಹೊಂದಿದೆ.
ಇದು 720p ವಿಡಿಯೋ ರೆಕಾರ್ಡಿಂಗ್, ಹೈ ಡೆಪನಿಷನ್ h263, h264, 1080p ವಿಡಿಯೋ ರೆಕಾರ್ಡಿಂಗ್, 3.5 mm ಯುನಿವರ್ಸೆಲ್ ಆಡಿಯೋ ಜಾಕ್ ಇವುಗಳಿಂದ ಕೂಡಿದೆ. ಜೊತೆಗೆ 3.0 ಆವೃತ್ತಿಯ ಬ್ಲೂ ಟೂಥ್, 720 Mbps ಡಾಟಾ ಟ್ರಾನ್ಸ್ ಪರ್ ಸ್ಪೀಡ್ ಹೊಧಿರುವ ಇದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ಇನ್ನು ಪ್ರಮುಖವಾಗಿದ್ದು ದರ. ಮೋಟೋರೊಲಾ ಆಟ್ರಿಕ್ಸ್ ರು.28,500 & ಮೋಟೋರೊಲಾ ಮೈಲ್ ಸ್ಟೋನ್ ರು. 19,000. ಎರಡನ್ನೂ ಹೋಲಿಸಿ ನೋಡಿದಾಗ ಮೋಟೋರೊಲಾ ಆಟ್ರಿಕ್ಸ್ ಗಿಂತ ಮೋಟೋರೊಲಾ ಮೈಲ್ ಉತ್ತಮ ಆಯ್ಕೆ ಎನಿಸುತ್ತದೆ.


Click it and Unblock the Notifications