ಸ್ಮಾರ್ಟ್ ಫೋನ್ ದುನಿಯಾಲ್ಲಿ ನೋಕಿಯಾ ಮೇನಿಯಾ

Posted By: Staff

ಸ್ಮಾರ್ಟ್ ಫೋನ್ ದುನಿಯಾಲ್ಲಿ ನೋಕಿಯಾ ಮೇನಿಯಾ
ಮೊಬೈಲ್ ಕಂಪನಿಗಳಿಗಿಂದು ಸ್ಮಾರ್ಟ್ ಫೋನುಗಳು ಸಾಕಷ್ಟು ಹಣತಂದುಕೊಡುತ್ತಿವೆ. ಒಂದು ಕಾಲದಲ್ಲಿ ಶ್ರೀಮಂತ ಮಕ್ಕಳ ಆಟಿಕೆಯಾಗಿದ್ದ ಸ್ಮಾರ್ಟ್ ಫೋನ್ ಇಂದು ಜನಸಾಮಾನ್ಯರ ಕೈಗೆಟಕುವಂತಿವೆ. ಕಳೆದ 5-6 ವರ್ಷಗಳಿಂದ ಸ್ಮಾರ್ಟ್ ಫೋನ್ ದರಗಳು ಸ್ಮಾರ್ಟಾಗಿ ಇಳಿಕೆ ಕಂಡಿವೆ.

ನಂಬಿದರೆ ನಂಬಿ, ದೇಶದಲ್ಲಿಂದು ನೂರಕ್ಕೂ ಹೆಚ್ಚು ಸ್ಮಾರ್ಟ್ ಫೋನುಗಳು ಲಭ್ಯವಿದೆ. ನೋಕಿಯಾ, ಸ್ಯಾಮ್ ಸಂಗ್, ಎಚ್ ಟಿಸಿ, ಸೋನಿ ಎರಿಕ್ಸನ್ ಸೇರಿದಂತೆ ಹಲವು ವಿದೇಶಿ ಕಂಪನಿಗಳು ಮತ್ತು ಮೈಕ್ರೊಮ್ಯಾಕ್ಸ್, ವಿಡಿಯೋಕಾನ್ ನಂತಹ ದೇಶಿ ಕಂಪನಿಗಳ ಸ್ಮಾರ್ಟ್ ಫೋನ್ ಗಳಿಂದು ಮಾರುಕಟ್ಟೆಯಲ್ಲಿವೆ.

ವಿಶ್ವದ ಬೃಹತ್ ಮೊಬೈಲ್ ತಯಾರಿಕಾ ಕಂಪನಿ ನೋಕಿಯಾ ಕೂಡ ಸ್ಮಾರ್ಟ್ ಫೋನ್ ಲೋಕದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ನೋಕಿಯಾ ಎಕ್ಸ್7 ಫೋನ್ ಈಗಾಗಲೇ ಸ್ಮಾರ್ಟ್ ಲೋಕದಲ್ಲಿ ಜನಪ್ರಿಯತೆ ಪಡೆದಿದೆ. ಎಕ್ಸ್7ಗೆ ಹೊಸ ಗೇಮ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕರಾದ ಟಿ.ಎಸ್. ಶ್ರೀಧರ್ ಕಂಪನಿಯ ಸ್ಮಾರ್ಟ್ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ನೋಕಿಯಾ ಇ6 ಮೊಬೈಲ್ ತನ್ನ ಆಕರ್ಷಕ ಫೀಚರ್ ಗಳಿಂದ ಹೆಚ್ಚು ಜನಪ್ರಿಯತೆ ಪಡೆದಿರುವುದಾಗಿ ಅವರು ಹೇಳಿದ್ದಾರೆ. ಇ6 ಸ್ಮಾರ್ಟ್ ಫೋನ್ ಟಚ್ ಸ್ಕ್ರೀನ್ ಆಯ್ಕೆಯಲ್ಲೂ ದೊರಕುತ್ತಿದೆ. ಸ್ಮಾರ್ಟ್ ಲೋಕದಲ್ಲಿ ನೋಕಿಯಾ ಎಕ್ಸ್ 7 ಗೇಮಿಂಗ್ ಫೀಚರ್ ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಇದು ಕಂಪನಿಯ ಮೊದಲ ಆಂಡ್ರಾಯ್ಡ್ ಮತ್ತು ವಿಂಡೋಸ್ ಫೋನಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಮಾರ್ಟ್ ಫೋನ್ ಗಳನ್ನು ಹೊರತರುವುದಾಗಿ ಶ್ರೀಧರ್ ಹೇಳಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot