Subscribe to Gizbot

ಮುಂದೆ ನೋಕಿಯಾ ವೆಬ್ ಬ್ರೌಸರ್ ನ ರಮ್ಯ ಚೈತ್ರ ಕಾಲ?

Posted By: Super

ಮುಂದೆ ನೋಕಿಯಾ ವೆಬ್ ಬ್ರೌಸರ್ ನ ರಮ್ಯ ಚೈತ್ರ ಕಾಲ?
ಬೆಂಗಳೂರು, ಜು. 21: ಇತ್ತೀಚಿನ ದಿನಗಳಲ್ಲಿ ಜನರ ಕಂಪ್ಯೂಟರ್ ಗಳಿಗಿಂತ ಹೆಚ್ಚಾಗಿ ತಮ್ಮ ಮೊಬೈಲ್ ಗಳಲ್ಲೇ ಇಂಡರ್ ನೆಟ್ ಸೌಲಭ್ಯ ಪಡೆಯಲು ಇಷ್ಟಪಡುತ್ತಾರೆ. ಕಾರಣ ಏನೆಂದರೆ ಮೊಬೈಲ್ ಗಳಲ್ಲಿ ಪಿಸಿಗಿಂತ ವೇಗವಾಗಿ ಇಂಟರ್ ನೆಟ್ ಬಳಕೆ ಸಾಧ್ಯವಾಗುವುದರಿಂದ ಜನರಿಗೆ ಇದೇ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಇದನ್ನು ಮನಗಂಡಿರುವ ನೋಕಿಯಾ ಮೊಬೈಲ್ ಸಂಸ್ಥೆ, ತನ್ನ S40 ಫೊನ್ ಗಳಿಗೆ ವೆಬ್ ಬ್ರೌಸರ್ ಅಳವಡಿಸಿದೆ.

ಇದೀಗ ಹೊಸ ಉನ್ನತೀಕರಿಸಿದ S40 ವೆಬ್ ಬ್ರೌಸರ್ ಆವೃತ್ತಿಯನ್ನು ಬಿಡುಗಡೆಮಾಡಲು ಯೋಜನೆ ರೂಪಿಸಿದೆ.ಅದು ತನ್ನ ಈ ಹೊಸ ಪ್ರಯತ್ನಕ್ಕೆ ನೋಕಿಯಾ ಬ್ರೌಸರ್ ಎಂದೇ ಹೆಸರಿಸಿದೆ. ಇದು ಡಾಮಿನೇಟಿಂಗ್ ಅನ್ನಿಸುವುದು ನಿಜವಾದರೂ ನೋಕಿಯಾ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಡಾಟಾ ಕಂಪ್ರೆಶನ್ ಹಾಗೂ ಪಿಸಿ ಬೇಸ್ಡ್ ಮೊಬೈಲ್ ಬ್ರೌಸರ್ ಒಪೆರಾ ಟರ್ಬೋ ಮೂಲಕ ತನ್ನೆಲ್ಲಾ ಕಾರ್ಯಕ್ಷಮತೆಯನ್ನು ಅದು ಪ್ರದರ್ಶಿಸಲಿದೆ.

ನೋಕಿಯಾ ಬ್ರೈಸರ್ ವೆಬ್ ಅಪ್ಲಿಕೇಶನ್ಸ್ ಅನ್ನು ಸಪೋರ್ಟ್ ಮಾಡುವುದು ಹೊಸ ಸಂಶೋಧನೆಯಾಗಿದ್ದು ನೋಕಿಯಾದ ಈ ಸಾಧನೆ ನಿಜವಾಗಿಯೂ ಶ್ಲಾಘನೀಯ. ಈ ಹೊಸ ನೋಕಿಯಾ ಬ್ರೌಸರ್ ಮುಂದೆ ಬರಲಿರುವ ನೋಕಿಯಾ C2-02, C2-03 ಮತ್ತು C2-06 ಗಳಲ್ಲಿ ಬಳಕೆಯಾಗಲಿದೆ.ಈಗ ಉಪಯೋಗಿಸುತ್ತಿರುವ ಮೊಬೈಲ್ ಗಳಲ್ಲಿ ಹೊಸದನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಈ ಸೌಲಭ್ಯ ಪಡೆಯಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot