Subscribe to Gizbot

ಮೊಬೈಲ್ ಸ್ಪರ್ಧೆಗೆ ಧುಮುಕಲಿದೆ ಸೋನಿ ಎರಿಕ್ ಸನ್

Posted By: Super

ಮೊಬೈಲ್ ಸ್ಪರ್ಧೆಗೆ ಧುಮುಕಲಿದೆ ಸೋನಿ ಎರಿಕ್ ಸನ್
ಬೆಂಗಳೂರು, ಜು. 21: ಮೊಬೈಲ್ ಮಾರುಕಟ್ಟೆಗೆ ಸೋನಿ ಎರಿಕ್ ಸನ್ ಹೊಸ ಮೊಬೈಲ್ ನೊಂದಿಗೆ ಸದ್ಯದಲ್ಲಿಯೇ ಬರಲಿದೆ. ಈಗಾಗಲೇ ಸಾಕಷ್ಟು ಮೊಬೈಲ್ ಗಳು ಮಾರುಕಟ್ಟೆಯಲ್ಲಿದ್ದರೂ, ಹೊಸ ಹೊಸ ಉತ್ಪಾದನೆ ಮಾಡುವುದು ಈಗ ಮೊಬೈಲ್ ಕಂಪೆನಿಗೆ ಅನಿವಾರ್ಯವಾಗಿದೆ. ಹೀಗೆ ಬರುತ್ತಿರುವ ಹೊಸ ಮೊಬೈಲ್ ಸೋನಿ ಎರಿಕ್ ಸನ್ ಎಕ್ಸಪೆರಿಯಾ Duo.

ದೊರೆತಿರುವ ಮಾಹಿತಿಯ ಪ್ರಕಾರ, ಈ ಹೊಸ ಸೋನಿ ಎರಿಕ್ ಸನ್ ಎಕ್ಸಪೆರಿಯಾ Duo, ಡ್ಯುಯಲ್ ಕೋರ್ ಪ್ರೊಸೆಸರ್ ಹೊಂದಿದೆ. ಕ್ಲಾಕ್ ಸ್ಪೀಡ್ 1.4 GHz ಹೊಂದಿರುವ ಇದು ಈ ಭೂಮಿಯಲ್ಲೇ ಲಭ್ಯವಿರುವ ಅತಿ ವೇಗ ಕಾರ್ಯಕ್ಷಮತೆ ಹೊಂದಿರುವ ಸ್ಮಾರ್ಟ್ ಫೋನ್ ಮೊಬೈಲ್ ಆಗಲಿದೆ. ಇದು ಹೊಂದಿರುವ ಡ್ಯುಯಲ್ ಕೋರ್ ಪ್ರೊಸೆಸರ್ ಮಲ್ಟಿ ಟಾಸ್ಕ್ ಸೌಲಭ್ಯದಲ್ಲಿ ಕೆಲಸ ಮಾಡವ ಅವಕಾಶ ನೀಡುತ್ತದೆ. ಆಕರ್ಷಕ 4.5 ಇಂಚ್ ನ ಟಚ್ ಸ್ಕ್ರೀನ್ ಹೊಂದಿರುವ ಇದು, qHD ರೆಸೊಲ್ಯೂಷನ್ ಹೊಂದಿದೆ.

ಕ್ಯಾಮೆರ್ ವಿಷಯಕ್ಕೆ ಬಂದರೆ ಕೂಡ ಈ ಹೊಸ ಸೋನಿ ಎರಿಕ್ ಸನ್ ಎಕ್ಸಪೆರಿಯಾ Duo ಮೊಬೈಲ್ ಸಾಕಷ್ಟು ಮುಂದಿದೆ. ಲೆಟ್ ಪ್ಲಾಶ್ ಹೊಂದಿರುವ 12 ಮೆಗಾ ಪಿಕ್ಸೆಲ್ ಕ್ಯಾಮೆರಾ, ಆಟೋ ಫೋಕಸ್, ಫೇಸ್ ಡಿಟೆಕ್ಷನ್ ಮುಂತಾದ ಉನ್ನತ ದರ್ಜೆಯ ತಂತ್ರಜ್ಞಾನ ಹೊಂದಿದೆ. ದೊಡ್ಡ 2500 mAh ಬ್ಯಾಟರಿ ಹೊಂದಿರುವ ಈ ಹೊಸ ಮೊಬೈಲ್, ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಮೂಲಕ ಕಾರ್ಯ ನಿರವಹಿಸುತ್ತದೆ.

ಸದ್ಯಕ್ಕೆ ಇಷ್ಟೇ ಮಾಹಿತಿ ದೊರೆತಿರುವುದರಿಂದ ಈ ವರ್ಷದ ಸೆಪ್ಟೆಂಬರ್ ನಲ್ಲಿ ಬರಲಿರುವ ಈ ಹೊಸ ಮೊಬೈಲ್ ಬಗ್ಗೆ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ಸೋನಿ ಎರಕ್ ಸನ್ ಪ್ರಸಿದ್ಧ ಕಂಪೆನಿಯಾದ್ದರಿಂದ ಅದು ಏನೇ ಹೊಸ ಉತ್ಪನ್ನ ಬಿಡುಗಡೆ ಮಾಡಿದರೂ ಚೆನ್ನಾಗಿಯೇ ಇರುತ್ತದೆ ಎಂದು ಖಾತ್ರಿಯಾಗಿ ಹೇಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot