ವ್ಯೊಸೊನಿಕ್ ಆಂಡಾಯ್ಡ್ ಫೋನ್ ಖರೀದಿಸಲು ರೆಡಿಯಾಗಿ

Viewsonic ದೇಶದ ಮೊಬೈಲ್ ಮಾರುಕಟ್ಟೆಗೆ ಹೊಸ ಅತಿಥಿ. ಕಂಪನಿಯು ಆಂಡ್ರಾಯ್ಡ್ ಆಧರಿತ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳನ್ನು ಪರಿಚಯಿಸಲು ನಿರ್ಧರಿಸಿದೆ. "ವ್ಯೂಸೋನಿಕ್ ವಿ350" ಮತ್ತು "ವ್ಯೂಸೋನಿಕ್ ವ್ಯೂಪ್ಯಾಡ್ 4" ಎಂಬೆರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಹೊರತರಲಿದೆ.
ಇದರಲ್ಲಿ "ವಿ350" ಮೊಬೈಲ್ ಆಂಡ್ರಾಯ್ಡ್ 2.2 ಪ್ಲಾಟ್ ಫಾರ್ಮ್ ಹೊಂದಿದೆ. ಜೊತೆಗೆ ನೂತನ 3ಡಿ ತಂತ್ರಜ್ಞಾನವೂ ಇದರಲ್ಲಿರಲಿದೆ. ಹ್ಯಾಂಡ್ ಸೆಟ್ "ವ್ಯೂಪ್ಯಾಡ್ 4" ಮತ್ತೊಂದು ಆಕರ್ಷಕ ಹ್ಯಾಂಡ್ ಸೆಟ್ ಆಗಿದೆ. ಇದು 4.1 ಇಂಚಿನ ಟಚ್ ಸ್ಕ್ರೀನ್ ಮೊಬೈಲ್ ಫೋನಾಗಿದೆ. "ವಿ350" 3.5 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿರಲಿದೆಯಂತೆ. ಇದು ಭಾರತದ ಎರಡನೇ ಆಂಡ್ರಾಯ್ಡ್ ಆಧರಿತ ಡ್ಯೂಯಲ್ ಸಿಮ್ ಫೋನಾಗಿರಲಿದೆ. ಈಗಾಗಲೇ Spice Mi270 ಮೊದಲ ಸ್ಥಾನ ಪಡೆದಿದೆ.
ಇವೆರಡು ಹ್ಯಾಂಡ್ ಸೆಟ್ ಗಳು ಮುಂದಿನ ವಾರ ಮಾರುಕಟ್ಟೆಗೆ ಆಗಮಿಸಲಿವೆ. ಇದರಲ್ಲಿ ವ್ಯೂಸೋನಿಕ್ ವಿ350 ದರ ಸುಮಾರು 17 ಸಾವಿರ ರು. ಇರುವ ನಿರೀಕ್ಷೆಯಿದೆ. ಈ ತಿಂಗಳ ಅಂತ್ಯದಲ್ಲಿ ರಿಲಯೆನ್ಸ್ ಡಿಜಿಟಲ್ ಔಟ್ ಲೆಟ್ ಗಳಲ್ಲಿ ಈ ಎರಡು ಹ್ಯಾಂಡ್ ಸೆಟ್ ಗಳು ದೊರಕಲಿವೆ ಎಂದು ಕಂಪನಿ ಪ್ರಕಟಿಸಿದೆ.


Click it and Unblock the Notifications








