3ಜಿ ಜಮಾನದಲ್ಲಿ ಟೊರಿಡ್, ಫ್ಲಂಟ್ ಜೊತೆಗೆ ಫ್ಲರ್ಟ್ ಮಾಡಿ

Posted By: Staff

3ಜಿ ಜಮಾನದಲ್ಲಿ ಟೊರಿಡ್, ಫ್ಲಂಟ್ ಜೊತೆಗೆ ಫ್ಲರ್ಟ್ ಮಾಡಿ
ಇದು 3ಜಿ ಜಮಾನ. ಇಲ್ಲಿವರೆಗೆ ಮೊಟೊರೊಲಾ XT800 ಮತ್ತು ಎಚ್ ಟಿಸಿ ಪಲ್ಸ್ ಸಿಡಿಎಂಎ ಮೊಬೈಲುಗಳನ್ನು ವಿತರಣೆ ಮಾಡುತ್ತಿದ್ದ Airtyme ತನ್ನದೇ ಬ್ರಾಂಡಿನಲ್ಲಿ ಎರಡು 3ಜಿ ಮೊಬೈಲ್ ಗಳನ್ನು ಪರಿಚಯಿಸಿದೆ. ಅದರ ಹೆಸರು ಟೊರಿಡ್ ಮತ್ತು ಫ್ಲಂಟ್.

ಟೊರಿಡ್ ಮತ್ತು ಫ್ಲಂಟ್ ನೋಡಲು ಆಕರ್ಷಕವಾಗಿದೆ. ಖುಷಿಪಡಬೇಕಾದ ವಿಷಯವೆಂದರೆ ಇವೆರಡೂ 3ಜಿ ಕನೆಕ್ಟಿವಿಟಿ ಹೊಂದಿದೆ. ಇವೆರಡರ ದರ 6 ಸಾವಿರ ರು.ಗಿಂತ ಹೆಚ್ಚಿಲ್ಲ. ಫ್ಲಂಟ್ ಮತ್ತು ಟೊರಿಡ್ ಫೀಚರ್ಸ್ ಗಳನ್ನು ನೋಡೋಣ.

ಫ್ಲಂಟ್ ಮೊಬೈಲ್ ವಿಶೇಷತೆ
* 3.2 ಟಚ್ ಟಚ್ ಸ್ಕ್ರೀನ್, ಜೊತೆಗೆ ಸ್ಲೈಡ್ ಕೀಪ್ಯಾಡ್
* 3 ಮೆಗಾಪಿಕ್ಸೆಲ್ ಕ್ಯಾಮರಾ (ಪ್ಲಾಷ್ ಇದೆ)
* ಮೈಕ್ರೊ ಎಸ್ ಡಿ ಸ್ಲಾಟ್ 32 ಜಿಬಿ ವರೆಗೆ ಮೆಮೊರಿ ಸಪೋರ್ಟ್ ಮಾಡುತ್ತದೆ
* 7 Mbps ವೇಗದಲ್ಲಿ 3ಜಿ ಇಂಟರ್ನೆಟ್ ಕನೆಕ್ಸನ್

ಟೊರಿಡ್ ವಿಶೇಷತೆ
* ಸಣ್ಣದಾದ 2.8 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ
* ಸ್ಲೈಡಿಂಗ್ ಕ್ವೆರ್ಟಿ ಕೀಪ್ಯಾಡ್
* ಬ್ಲೂಟೂಥ್ ಕನೆಕ್ಟಿವಿಟಿ
* 4 ಜಿಬಿ ವರೆಗೆ ಮೆಮೊರಿ ಕಾರ್ಡ್ ಸಪೋರ್ಟ್

ಸದ್ಯ ಗ್ರಾಮೀಣ ಭಾರತದಲ್ಲಿ 1,500 ರು.ನಿಂದ 5 ಸಾವಿರ ರು. ಆಸುಪಾಸಿನ ಮೊಬೈಲುಗಳಿಗೆ ಹೆಚ್ಚು ಬೇಡಿಕೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು Flaunt ಮತ್ತು Torrid ಎಂಬೆರಡು ಮೊಬೈಲ್ ಫೋನ್ ಗಳನ್ನು ಹೊರತಂದಿದೆ. ಇದರಲ್ಲಿ ಫ್ಲಂಟ್ ದರ 6 ಸಾವಿರ ರು. ಟೊರಿಡ್ ದರವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇದರ ದರ ಫ್ಲಂಟಿಗಿಂತ ಕಡಿಮೆಯಿದೆಯಂತೆ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot