ಎಚ್ ಟಿಸಿ ಸ್ಟೇಟಸ್ ಮೋಡಿ; ನೀವೂ ನೋಡಿ!

By Super
|
ಎಚ್ ಟಿಸಿ ಸ್ಟೇಟಸ್ ಮೋಡಿ; ನೀವೂ ನೋಡಿ!
ಬೆಂಗಳೂರು, ಜು. 22: ಮೊಬೈಲ್ ಮಾರಾಟದಲ್ಲಿ ಏಕಸ್ವಾಮ್ಯತೆಗಾಗಿ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಮೊಬೈಲ್ ಕಂಪೆನಿಗಳು ಪ್ರತಿದಿನವೂ ಹೊಸ ಮೊಬೈಲ್ ನ್ನು ಬಿಡುಗಡೆಮಾಡುವಂತಾಗಿದೆ. ಸ್ಪರ್ಧೆಯಲ್ಲಿರುವ ಎಚ್ ಟಿಸಿ ಇದೀಗ ಹೊಸ ಮೊಬೈಲ್ ಸ್ಟೇಟಸ್ ಬಿಡುಗಡೆ ಮಾಡುತ್ತಿದೆ.
ಈಗಿನ ಫೇಸ್ ಬುಕ್ ಜನರೇಶನ್ ಈ ಮೊಬೈಲ್ ನ ಟಾರ್ಗೆಟ್ ಆಗಿದೆ. ನಮ್ಮ ಎಲ್ಲಾ ವೈಯಕ್ತಿಕ ಚಟುವಟಿಕೆಗಳು ಈ ಮೊಬೈಲ್ ನಿಂದ ಸಾಧ್ಯವಾಗಲಿವೆ.
ಒನ್ ಟಚ್ ಮೂಲಕ ಕಾರ್ಯ ಸುಲಭವಾಗಿಸುವ ಇದು ತಕ್ಷಣ ಕಾರ್ಯವೆಸಗಲು ಸಹಕಾರಿಯಾಗಿದೆ. ಆಯತಾಕಾರದ 66.5 x 114.4 x 10.8 mm ಸ್ಕ್ರೀನ್ ಹೊಂದಿರುವ ಇದು ಆಲ್ಬಮ್ಸ್, ಫೋಟೋಗ್ರಾಫ್ & ಸ್ಪ್ರೆಡ್ ಶೀಟ್ಸ್ ಗಳ ಮುದನೀಡುವ ಸೌಲಭ್ಯ ಹೊಂದಿದೆ.

ಇದರಲ್ಲಿರುವ ವಿಶೇಷತೆಗಳು:
* A 2.3.3 ಆಂಡ್ರಾಯ್ಡ್ OS
* 4.9 MP ಕ್ಯಾಮೆರಾ
* FM ರೇಡಿಯೋ
* 512 MB RAM
* ಮೋನೋ ಲೌಡ್ ಸ್ಪೀಕರ್ & ಬೇಸಿಕ್ 3.5mm ಆಡಿಯೋ ಔಟ್ ಲೆಟ್
* QWERTY ಕೀ ಪ್ಯಾಡ್
* ಬ್ಲೂ ಟೂಥ್ 3.0

ಒನ್ ಟಚ್ ಒಂದು ಕೆಲಸಕ್ಕೆ ಸಾಕೇ ಸಾಕು. ಹೇಗಿದೆ ನೋಡಿ ಚಮತ್ಕಾರ! ಇಂಥ ಮೊಬೈಲ್ ಯಾರಿಗೆ ಬೇಡ ಹೇಳಿ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X