ನೋಡಿ, ಭಲೆ ಭಲೆ ಚೆಂದದ ಮೊಬೈಲ್ ಎಲ್ ಜಿ ಜೋಡಿ!

ಜಗತ್ತಿನ ಪ್ರಮುಖ ಮೊಬೈಲ್ ತಯಾರಿಕಾ ಕಂಪೆನಿ ಎಲ್ ಜಿ, ಈ ಆಂಡ್ರಾಯ್ಡ್ ಜಿಂಜರ್ ಬ್ರೆಡ್ OS ಉಪಯೋಗಿಸಿ ತಯಾರಿಸಲಾಗಿರುವ ಎರಡು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವು- ಆಪ್ಟಿಮಸ್ ಸಿರೀಸ್, ಆಪ್ಟಿಮಸ್ ಪ್ರೋ & ಆಪ್ಟಿಮಸ್ ನೆಟ್. ಎರಡೂ ಫೊನ್ ಗಳು ಉನ್ನತ ತಂತ್ರಜ್ಞಾನ ಹಾಗೂ ಮಧ್ಯಮ ರೇಂಜ್ ಗಳಲ್ಲಿ ಲಭ್ಯವಿದೆ.
ಆಪ್ಟಿಮಸ್ ಪ್ರೋ, ಟಚ್ & ಟೈಪ್ ರೀತಿಯದಾಗಿದ್ದರೆ ಆಪ್ಟಿಮಸ್ ನೆಟ್ ಫುಲ್ ಟಚ್ ಸ್ಕ್ರೀನ್ ಬೇಸ್ಡ್ ಆಗಿದೆ. ಆಪ್ಟಿಮಸ್ ಪ್ರೋ 2.8 ಇಂಚ್ ಡಿಸ್ ಪ್ಲೇ, QWERTY ಕೀ ಪ್ಯಾಡ್, ಸೋಶಿಯಲ್ ನೆಟ್ ವರ್ಕಿಂಗ್ & ಮೆಸೆಜಿಂಗ್, ಟೆಕ್ಸಿಂಗ್ ಫೋನ್ ಆಗಿದೆ. 800 MHz ಕ್ಯುಲ್ ಕಾಮ್ ಪ್ರೊಸೆಸರ್, 256 MB RAM, 512 MB ROM. ಈ ಫೊನ್ 3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಕೇವಲ VGA ಪಾರ್ಮೆಟ್ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಎಕ್ಸೆಲೆರೊಮೀಟರ್ & ಪ್ರೋಕ್ಸಿಮಿಟಿ ಸೆನ್ಸರ್, 3.0 ಬ್ಲೂ ಟೂಥ್, Wi-Fi ಇಂಟರ್ ನೆಟ್ ಕನೆಕ್ಟಿವಿಟಿ ಮತ್ತು ಅತಿ ವೇಗದ 3G ನೆಟ್ ವರ್ಕ್ ಸಹಕಾರ ಹೊಂದಿದೆ.
ಇನ್ನು ಆಪ್ಟಿಮಸ್ ನೆಟ್, 3.2 ಇಂಚ್ ಟಚ್ ಸ್ಕ್ರೀನ್ ಡಿಸ್ ಪ್ಲೇ, HVGA ರೆಸೊಲ್ಯೂಷನ್ ಹೊಂದಿದೆ. 800 MHz ಕ್ಯುಲ್ ಕಾಮ್ ಪ್ರೊಸೆಸರ್, 256 MB RAM, 512 MB ROM. ಈ ಫೊನ್ 3 ಮೆಗಾ ಪಿಕ್ಸೆಲ್ ಕ್ಯಾಮೆರಾ, ಕೇವಲ VGA ಪಾರ್ಮೆಟ್ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಆಪ್ಟಿಮಸ್ UI, 3.0 ಬ್ಲೂ ಟೂಥ್, Wi-Fi ಇಂಟರ್ ನೆಟ್ ಕನೆಕ್ಟಿವಿಟಿ ಮತ್ತು ಅತಿ ವೇಗದ 3G ನೆಟ್ ವರ್ಕ್ ಸಹಕಾರ ಹೊಂದಿದೆ.
ಇದೀಗ ಈ 2 ಫೋನ್ ಗಳು ಏಷ್ಯನ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದ್ದು ಡ್ಯುಯಲ್ ಸಿಮ್ ಹೊಂದಿವೆ. 2011ರ ಕೊನೆಯ ಹೊತ್ತಿಗೆ ಇದು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಬೆಲೆ, ಸುಮಾರು ರು. 15000 ದಿಂದ 18000 ಎಂದು ಅಂದಾಜಿಸಲಾಗಿದೆ. ಮಧ್ಯಮ ತರಗತಿಗೆ ಹೊಂದುವಂತ ಮಧ್ಯಮ ರೇಂಜ್ ನ ಈ ಫೋನ್ ನಿಮಗೂ ಬೇಕೆನಿಸುತ್ತಿದೆಯೇ? ಇನ್ನು ಸ್ವಲ್ಪ ದಿನ ಕಾಯಬೇಕಷ್ಟೇ!


Click it and Unblock the Notifications