ಅವಳಿಗಿಷ್ಟವಾಗುವ ಮ್ಯಾಕ್ಸ್ ಅವಳಿ ಸೆಕ್ಸಿ ಮೊಬೈಲ್

Posted By: Staff

ಅವಳಿಗಿಷ್ಟವಾಗುವ ಮ್ಯಾಕ್ಸ್ ಅವಳಿ ಸೆಕ್ಸಿ ಮೊಬೈಲ್
ದೇಶಿಯ ಮೊಬೈಲ್ ಕಂಪನಿ ಮ್ಯಾಕ್ಸ್ ನ MX155, MX182 ಮತ್ತು MX188 ಮೊಬೈಲ್ ಗಳು ಸಾಕಷ್ಟು ಗ್ರಾಹಕರಿಗೆ ಇಷ್ಟವಾಗಿದೆ. ಇದೀಗ ಕಂಪನಿಯು ಮ್ಯಾಕ್ಸ್ ಸೂಪರ್ ಎಂಕ್ಸ್424 ಮತ್ತು ಮ್ಯಾಕ್ಸ್ ಸ್ಲೀಕ್ ಎಂಎಕ್ಸ್464 ಎಂಬ ಎರಡು ಮೊಬೈಲ್ ಗಳನ್ನು ಪರಿಚಯಿಸಿದೆ. ಇವೆರಡು ದೀರ್ಘಕಾಲದ ಬ್ಯಾಟರಿ ಬ್ಯಾಕಪ್ ಫೀಚರ್ಸ್ ಹೊಂದಿದೆ ಎಂದು ಕಂಪನಿ ಹೇಳಿದೆ.

ಮ್ಯಾಕ್ಸ್ ಸೂಪರ್ ಎಂಎಕ್ಸ್ 424 ಮೊಬೈಲ್ ಡ್ಯೂಯಲ್ ಸಿಮ್ ಕಾರ್ಡ್ ಮೊಬೈಲ್ ಫೋನಾಗಿದೆ. ಇದು 48 ಗಂಟೆಗಳ ಸ್ಟಾಂಡ್ ಬೈ ಮತ್ತು 9 ಗಂಟೆ ಟಾಕ್ ಟೈಂ ಬ್ಯಾಟರಿ ಬಾಳಿಕೆ ಹೊಂದಿದೆ. ಇದರ ದರ 2,727 ರುಪಾಯಿ.

ಎಂಎಕ್ಸ್ 424 ವಿಶೇಷತೆಗಳು:
* ದೀರ್ಘಬ್ಯಾಟರಿ ಬಾಳಿಕೆ
* 1.3 ಮೆಗಾ ಪಿಕ್ಸೆಲ್ ಕ್ಯಾಮರಾ, ಎಲ್ಇಡಿ ಪ್ಲಾಷ್
* ವಿಡಿಯೋ ಪ್ಲೇಬ್ಯಾಕ್ ಮತ್ತು ರೆಕಾರ್ಡಿಂಗ್ ಸೌಲಭ್ಯ
* 8 ಜಿಬಿ ಮೈಕ್ರೊ ಎಸ್ ಡಿ ಮೆಮೊರಿ ಸಪೋರ್ಟ್

ಮ್ಯಾಕ್ಸ್ ಸ್ಲೀಕ್ ಎಂಎಕ್ಸ್464 : ಇದರೊಂದಿಗೆ ಕಂಪನಿಯು ಮ್ಯಾಕ್ಸ್ ಸ್ಲೀಕ್ ಎಂಎಕ್ಸ್464 ಎಂಬ ಇನ್ನೊಂದು ಡ್ಯೂಯಲ್ ಸಿಮ್ ಮೊಬೈಲ್ ಪರಿಚಯಿಸಿದೆ. ಇದು ತನ್ನ ಹೆಸರಿನಂತೆ ಸ್ಲೀಕ್ ಮತ್ತು ಸೆಕ್ಸಿಯಾಗಿದೆ. ಇದರಲ್ಲಿ ಇತ್ತೀಚಿನ ಮಲ್ಟಿಮೀಡಿಯಾ ಫೀಚರ್ಸ್ ಗಳೆಲ್ಲ ಇವೆಯಂತೆ! ಇದಕ್ಕೆ 16 ಜಿಬಿ ಮೆಮೊರಿ ಹಾಕಬಹುದು. ನಿಮ್ಮ ಸಂಗ್ರಹದಲ್ಲಿರುವ ಎಲ್ಲಾ ಹಾಡುಗಳನ್ನು ಇದರಲ್ಲಿ ಸಂಗ್ರಹಿಸಬಹುದಾಗಿದೆ. ದರ 2,424 ರು.

ಸ್ಲೀಕ್ ವಿಶೇಷತೆ
* ಮಲ್ಟಿಮೀಡಿಯಾ ಸೌಲಭ್ಯ
* 1.3 ಮೆಗಾ ಪಿಕ್ಸೆಲ್ ಕ್ಯಾಮರಾ
* ಬ್ಲೂಟೂಥ್ ಕನೆಕ್ಟಿವಿಟಿ
* 16 ಜಿಬಿ ಮೆಮರಿ ಸಾಮರ್ಥ್ಯ

ಮ್ಯಾಕ್ಸ್ ಸೂಪರ್ ಎಂಕ್ಸ್424 ಮತ್ತು ಮ್ಯಾಕ್ಸ್ ಸ್ಲೀಕ್ ಎಂಎಕ್ಸ್464 ಎಂಬ ಎರಡು ಅವಳಿ ಮೊಬೈಲ್ ಖಂಡಿತಾ ಅವಳಿಗಿಷ್ಟವಾಗಬಹುದು! ಅವಳಿಗೆ ಗಿಫ್ಟ್ ಕೊಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot