ಝೆನ್ ಮೊಬೈಲ್ ಜತೆಯಾಗಿ ಹಿತವಾಗಿ ಮಾತಾಡಿ

Posted By: Staff

ಝೆನ್ ಮೊಬೈಲ್ ಜತೆಯಾಗಿ ಹಿತವಾಗಿ ಮಾತಾಡಿ
ಬೆಂಗಳೂರು, ಜು.22: ಝೆನ್ ಮೊಬೈಲ್ ಭಾರತೀಯ ಗ್ರಾಹಕರಿಗೆ ಸರಿಹೊಂದುವಂತಹ ಕಡಿಮೆ ದರದ ಫೋನ್ ಗಳನ್ನು ತಯಾರಿಸಿ ಬಿಡುಗಡೆ ಮಾಡುತ್ತಿದೆ. ಇದೀಗ ಅದು ಹೊಸ ಅಪ್ಲಿಕೇಶನ್ ಗಳು ಹಾಗೂ ಸ್ಟೈಲಿಷ್ ಲುಕ್ ಹೊಂದಿ ನಳನಳಿಸುವ ಹೊಸ ಫೋನ್ ಝೆನ್ M72 ತರುತ್ತಿದೆ.

ಇದು 2.4 ಇಂಚ್ ಕಲರ್ ಡಿಸ್ ಪ್ಲೇ, ತಿಳಿಗೆಂಪು & ಬಿಳಿ ಬಣ್ಣದ ಬಾಡಿ ಹೊಂದಿದೆ. ನಮ್ಮ ಅಯ್ಕೆಯ ಕಲರ್ ಸಾಧ್ಯವಿರುವ ಈ ಫೋನ್, ಅತ್ಯಮತ ಕಡಿಮೆ ದರದ ಮೊಬೈಲ್ ಆಗಿದೆ.

ಇದರಲ್ಲಿ 1.3 MP ಕಾಮೆರಾ ಅಳವಡಿಸಲಾಗಿದ್ದು, ವಿಡಿಯೋ ರೆಕಾರ್ಡಿಂಗ್ ಹೊಂದಿದೆ. MP3, MP4, ಹಾಗೂ FM ರೇಡಿಯೋ, 3.5 mm ಆಡಿಯೋ ಜ್ಯಾಕ್ ಸೌಲಭ್ಯ ಹೊಂದಿದೆ. 1800 mAh ಶಕ್ತಿಯುತವಾದ ಬ್ಯಾಟರಿ ಹೊಂದಿರುವ ಇದು 40 ದಿನಗಳ ಸ್ಟ್ಯಾಂಡ್ ಬೈ ಹೊಂದಿದೆ. ಡ್ಯುಯಲ್ ಲೆಡ್ ಟಾರ್ಚ್ ಕೂಡ ಇರುವುದು ಗ್ರಾಹಕರಿಗೆ ಅನುಕೂಲವಾಗಲಿದೆ.

ವಿಶೇಷತೆಗಳು:
* ಆಂಟಿ ಥೆಪ್ಟ್ ಮೊಬೈಲ್ ಟ್ರಾಕರ್
* ಬ್ಲೂ ಟೂಥ್
* ಅಲಾರ್ಮ್ ಕ್ಲಾಕ್
* ಸೌಂಡ್ ರೆಕಾರ್ಡರ್
* ಪ್ರೈವೇಟ್ ಡಾಟಾ ಪ್ರೊಟೆಕ್ಷನ್
* ಲೌಡ್ ಸ್ಪೀಕರ್
* ಹಿಂದಿ ಬಾಷೆಯ ಸಪೋರ್ಟ್

ಇದಕ್ಕಿಂತ ಮೊದಲು ಮಾರುಕಟ್ಟೆಗೆ ಬಂದಿರುವ ಯಾವ ಫೋನ್ ಕೂಡ ಇಷ್ಟು ಕಡಿಮೆ ದರದಲ್ಲಿ ಇಷ್ಟೊಂದು ಹೆಚ್ಚಿನ ವಿಶೇಷತೆಗಳನ್ನು ಹೊಂದಿರಲಿಲ್ಲ. ಈ ಡ್ಯುಯಲ್ ಫೋನ್ ಸಿಮ್ ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಮಾರಾಟದ ಹೊಸ ದಾಖಲೆ ಬರೆಯಲಿದೆ. ದರ ಸದ್ಯಕ್ಕೆ ತಿಳಿದಲ್ಲವಾದರೂ ಅತಿ ಕಡಿಮೆಯಲ್ಲಿ ಕಡಿಮೆ ಎಂದು ಹೇಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot