Subscribe to Gizbot

ಅಗ್ಗದ ಬೆಲೆಗೆ ಆಪಲ್ ಐಫೋನ್, ಯಾರಿಗುಂಟು ಯಾರಿಗಿಲ್ಲ..

Posted By: Staff

ಅಗ್ಗದ ಬೆಲೆಗೆ ಆಪಲ್ ಐಫೋನ್, ಯಾರಿಗುಂಟು ಯಾರಿಗಿಲ್ಲ..
ಐಫೋನ್ ಅಂದಾಕ್ಷಣ ನೆನಪಾಗುವುದು ಆಪಲ್. ಆಪಲ್ ಟೆಕ್ ತೋಟದಲ್ಲಿ ಬೆಳೆದ ಐಫೋನ್ ಖರೀದಿ ಹೆಚ್ಚಿನವರ ಕನಸು. ನೋಕಿಯಾ ಮತ್ತು ಸ್ಯಾಮ್ ಸಂಗ್ ನಂತಹ ಕಂಪನಿಗಳ ಸ್ಮಾರ್ಟ್ ಫೋನ್ ಗಳು ಜನಪ್ರಿಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆಪಲ್ ದರದೊಂದಿಗೆ ರಾಜಿ ಮಾಡಿಕೊಳ್ಳಲು ಹೊರಟಿದೆ. ಕಂಪನಿಯು ಈ ಆರ್ಥಿಕ ವರ್ಷದ ಅಂತ್ಯದೊಳಗೆ ಅಗ್ಗದ ವಿವಿಧ ಐಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಯೋಜಿಸಿದೆ.

ಆಂಡ್ರಾಯ್ಡ್ ಒಎಸ್ ಸಿಸ್ಟಮ್ ಹೊಂದಿರುವ ಐಫೋನ್ ಗಳನ್ನು ಆಪಲ್ ಹೊರತರುತ್ತಿದೆ. ಆದರೆ ಈ ಉತ್ಪನ್ನಗಳು ದುಬಾರಿ. ಜನ ಸಾಮನ್ಯರಿಂದ ತುಂಬಾ ದೂರದಲ್ಲಿದೆ. ಹೀಗಾಗಿ ಕೆಲವೊಮ್ಮೆ ಐಪ್ಯಾಡ್, ಐಫೋನ್ ಖರೀದಿಗಾಗಿ ಕೆಲವು ಯುವಕರು ಕಿಡ್ನಿ ಮಾರಾಟ ಮಾಡಿಕೊಳ್ಳುವುದು ಉಂಟು!

ಕೊಂಚ ಕಡಿಮೆ ದರದ ಐಫೋನ್ ಹೊರತರುವುದಾಗಿ ಕಂಪನಿಯು ಪ್ರಕಟಿಸಿದೆ. ಆದರೆ ಅದ ಟೆಕ್ ಮಾಹಿತಿಗಳನ್ನೂ ಬಹಿರಂಗಪಡಿಸಿಲ್ಲ. ಈಗಾಗಲೇ ಐಫೋನ್ 5 ಅಗ್ರಸ್ಥಾನದಲ್ಲಿದೆ. ಐಫೋನ್ 4 ಕೂಡ ಅತ್ಯುತ್ತಮವಾಗಿ ಮಾರಾಟವಾಗುತ್ತಿದೆ. ಐಫೋನ್ 3ಜಿಎಸ್ ಕೂಡ ಆಪಲ್ ನ ಆಕರ್ಷಕ ಎಂಟ್ರಿಲೆವೆಲ್ ಐಫೋನ್ ಆಗಿದೆ. ಆಪಲ್ ಅಗ್ಗದ ಐಫೋನ್ ದರ ಸುಮಾರು 15 ಸಾವಿರ ರು.ಗಿಂತ ಕಡಿಮೆಗೆ ದೊರಕುವ ನಿರೀಕ್ಷೆಯಿದೆ. ಯಾವುದಕ್ಕೂ ಕಾದು ನೋಡೋಣ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot